ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮದುವೆಯು ಅದ್ದೂರಿಯಾಗಿ ನಡೆದಿದೆ. ಫೆ.24ರಿಂದಲೇ ಮದುವೆ ಕೆಲಸಗಳು ಆರಂಭವಾಗಿದ್ದವು. ಮಾ.4ರಂದು ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಆರತಕ್ಷತೆ ಮುಗಿಯುವ ಮೂಲಕ ವಿರೋಶ್ ವೆಡ್ಡಿಂಗ್‌ನ ಸಂಭ್ರಮಗಳು ಮುಗಿದಿವೆ. ಆರತಕ್ಷತೆ ಮುಗಿದ ಬಳಿಕ ಮಾಧ್ಯಮಗಳ ಎದುರು ಬಂದು, "ಇಂದಿಗೆ ನಾವು ಮದುವೆ ಆಚರಣೆಗಳನ್ನು ಮುಗಿಸಿದ್ದೇವೆ, ಸದ್ದಿಲ್ಲದೇ ನಾವು ಭೂಗತರಾಗಲು ಬಯಸುತ್ತೇವೆ" ಎಂದು ವಿಜಯ್ ದೇವರಕೊಂಡ ತಮಾಷೆ ಮಾಡಿದ್ದರು.
ಅದ್ದೂರಿ ಮದುವೆಗೆ ಖರ್ಚಾದ ಹಣವೆಷ್ಟು?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆ ಆಗಲಿದ್ದಾರೆ ಎಂಬ ಟಾಕ್ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಕೇಳಿಬಂದರೂ, ಆ ಬಗ್ಗೆ ಈ ಜೋಡಿ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಆದರೆ ಇದೀಗ ಈ ಜೋಡಿಯ ಕಲ್ಯಾಣ ಅದ್ದೂರಿಯಾಗಿ ನಡೆದಿದೆ. ಫೆ.24ರಿಂದಲೇ ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ಸಂಭ್ರಮಗಳು ಆರಂಭವಾಗಿದ್ದವು. ಫೆ.26ರಂದು ಅಲ್ಲಿಯೇ ಖಾಸಗಿಯಾಗಿ ಮದುವೆ ನೆರವೇರಿತು. ಅಲ್ಲಿ ಸಂಗೀತ, ಹಳದಿ, ಮೆಹಂದಿ ಕಾರ್ಯಕ್ರಮಗಳ ಜೊತೆಗೆ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಎರಡು ಬಾರಿ ಮದುವೆ ಜರುಗಿತ್ತು. ನಂತರ ಈ ಜೋಡಿ ಅಲ್ಲಿಂದ ವಾಪಸಾಗಿತ್ತು.
ಊರಿನ ಗ್ರಾಮಸ್ಥರಿಗೆ ಭೋಜನ
ನಂತರ ವಿಜಯ್ ಅವರ ಹುಟ್ಟೂರು ತುಮ್ಮನಪೇಟ್‌ನಲ್ಲಿ ಅದ್ದೂರಿ ಸಮಾರಂಭ ಆಯೋಜಿಸಿ, ಅಲ್ಲಿನ ಸುಮಾರ 2 ಸಾವಿರ ಮಂದಿಗೆ ಭರ್ಜರಿ ಔತಣಕೂಟ ಏರ್ಪಡಿಸಲಾಗಿತ್ತು. ಬಳಿಕ ಆಯ್ದ ಕೆಲ ಅಭಿಮಾನಿಗಳಿಗಾಗಿ ಹೈದರಾಬಾದ್‌ನಲ್ಲಿ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಮಾ.4ರ ಮಧ್ಯಾಹ್ನ ಹೈದರಾಬಾದ್‌ನಲ್ಲಿ ಮಾಧ್ಯಮ ಮಿತ್ರರಿಗಾಗಿ ಪ್ರತ್ಯೇಕ ಔತಣಕೂಟ ಆಯೋಜಿಸಿತ್ತು ವಿರೋಶ್ ಜೋಡಿ.
ಅಂತಿಮವಾಗಿ ಹೈದರಾಬಾದ್‌ನ ಹೋಟೆಲ್ ತಾಜ್ ಕೃಷ್ಣದಲ್ಲಿ ಅದ್ದೂರಿ ಆರತಕ್ಷತೆ ನಡೆದಿದೆ. ಈ ಆರತಕ್ಷತೆಯಲ್ಲಿ ಚಿತ್ರರಂಗದ ದಿಗ್ಗಜರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು. ಈ ಆರತಕ್ಷತೆ ಅದರ ಮೂಲಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಸಂಭ್ರಮಕ್ಕೆ ತೆರೆ ಬಿದ್ದಿದೆ.
ಇದರ ಮಧ್ಯೆ ದೇಶದ ವಿವಿಧ ನಗರಗಳಲ್ಲಿ ಸಿಹಿ ವಿತರಣೆ, ದೇಶದ 16 ಪ್ರಮುಖ ದೇವಾಲಯಗಳಲ್ಲಿ ಅನ್ನದಾನವನ್ನು ವಿರೋಶ್ ಜೋಡಿ ಏರ್ಪಡಿಸಿತ್ತು. ಈ ಮದುವೆಯು ಯಾವುದೇ ಗೊಂದಲವಿಲ್ಲದೆ, ಎಲ್ಲರಿಗೂ ಗೌರವ ನೀಡುತ್ತಾ ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದನ್ನ ನಾವೆಲ್ಲಾ ಕಂಡಿದ್ದೇವೆ. ಒಟ್ಟಾರೆ, ಇತ್ತೀಚಿನ ವರ್ಷಗಳಲ್ಲಿ ಟಾಲಿವುಡ್‌ನಲ್ಲಿ ನಡೆದ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ಹಾಗಾರೆ, ಈ ಅದ್ದೂರಿ ಮದುವೆಗೆ ಖರ್ಚಾದ ಹಣವೆಷ್ಟು? ಮೂಲಗಳ ಪ್ರಕಾರ, 12 ಕೋಟಿ ರೂ. ಎನ್ನಲಾಗಿದೆ.
ಒಟಿಟಿ ಆಫರ್ ರಿಜೆಕ್ಟ್
ಇನ್ನು, ಈ ಮದುವೆಯನ್ನು ಚಿತ್ರೀಕರಣ ಮಾಡ, ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಲು ಕೆಲ ಒಟಿಟಿಗಳು ಪ್ಲ್ಯಾನ್ ಮಾಡಿಕೊಂಡಿದ್ದವು. ಅದಕ್ಕಾಗಿ 60 ಕೋಟಿ ರೂ. ವರೆಗೂ ವಿರೋಶ್ ಜೋಡಿಗೆ ಆಫರ್ ನೀಡಲಾಗಿತ್ತು. ಆದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅದನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ. ಮದುವೆಯನ್ನು ಯಾವುದೇ ಗೊಂದಲ, ಕಿರಿಕಿರಿ ಇಲ್ಲದೇ ಅತ್ಯಂತ ಗೌಪ್ಯವಾಗಿ, ಶಾಸ್ತ್ರೋಕ್ತವಾಗಿ ಮಾಡಿಕೊಳ್ಳಬೇಕು ಎಂಬುದು ವಿರೋಶ್ ಜೋಡಿಯ ಆಸೆ ಆಗಿತ್ತು. ಹಾಗಾಗಿ, ತಮ್ಮ ಖಾಸಗಿತನಕ್ಕೆ ಆದ್ಯತೆ ನೀಡಿ ಒಟಿಟಿ ಆಫರ್ ಅನ್ನು ತಿರಸ್ಕರಿಸಿತ್ತು.
ಶೂಟಿಂಗ್‌ಗೆ ಹಾಜರ್
ಸದ್ಯ ರಶ್ಮಿಕಾ ಜೊತೆಗೆ ಹಲವು ವರ್ಷಗಳ ಬಳಿಕ ವಿಜಯ್ ದೇವರಕೊಂಡ ತೆರೆಹಂಚಿಕೊಳ್ಳುತ್ತಿದ್ದಾರೆ. ರಣಬಾಲಿ ಎಂಬ ಸಿನಿಮಾದಲ್ಲಿ ಇವರಿಬ್ಬರು ನಟಿಸುತ್ತಿದ್ದು, ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಆಮೇಲೆ ಮಾ.12 ರಿಂದ ಕರ್ನೂಲ್‌ನಲ್ಲಿ ನಡೆಯಲಿರುವ 'ರಣಬಾಲಿ' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.