ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರಿ ಭದ್ರತೆಯಲ್ಲಿ ರಶ್ಮಿಕಾ -ವಿಜಯ್ ದೇವರಕೊಂಡ ವಿವಾಹ: ವಿರೋಶ್‌ ಕಲ್ಯಾಣಕ್ಕೆ ಖರ್ಚಾಗುತ್ತಿದೆ ಕೋಟಿ ಕೋಟಿ ಹಣ! ಈ ಐಷಾರಾಮಿ ಹೋಟೆಲ್‌ನ ದಿನದ ಬಾಡಿಗೆ ಎಷ್ಟು?

Virosh Wedding: ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆ ಸಂಭ್ರಮದಿಂದ ರಾಜಸ್ಥಾನದ ಉದಯಪುರದಲ್ಲಿ ಕಳೆಗಟ್ಟಿದೆ. ಫೆಬ್ರವರಿ 26ರಂದು 'ಐಟಿಸಿ ಮೆಮೆಂಟೋಸ್' ಐಷಾರಾಮಿ ಹೋಟೆಲ್‌ನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅರಾವಳಿ ಬೆಟ್ಟಗಳ ನಡುವೆ, ಅಂತಾರಾಷ್ಟ್ರೀಯ ಭದ್ರತೆಯಲ್ಲಿ ನಡೆಯುವ ಈ ವಿವಾಹಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಕೇವಲ 100 ಆಪ್ತರಿಗಷ್ಟೇ ಆಹ್ವಾನವಿದ್ದು, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ.

ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆಯುತ್ತಿದೆ. ಈಗಾಗಲೇ ಎರಡು ಕಡೆಯ ಕುಟುಂಬಸ್ಥರು ಉದಯಪುರದಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯ ಈ ಮದುವೆಯು ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ.

ಈ ಮದುವೆ ಆಗುತ್ತಿರುವುದೆಲ್ಲಿ?

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಅವರ ವಿವಾಹವು ರಾಜಸ್ಥಾನದ ಉದಯಪುರದ ಐಷಾರಾಮಿ 'ಐಟಿಸಿ ಮೆಮೆಂಟೋಸ್' (ITC Mementos) ಹೋಟೆಲ್‌ನಲ್ಲಿ ನಡೆಯಲಿದೆ. ಈ ವಿಶಾಲವಾದ ಹೋಟೆಲ್‌ನಲ್ಲಿ ಈ ಹೋಟೆಲ್ 117 ಕೊಠಡಿಗಳನ್ನು ಹೊಂದಿದ್ದು, ಏಕಕಾಲಕ್ಕೆ 3,000 ಅತಿಥಿಗಳಿಗೆ ಆತಿಥ್ಯ ನೀಡುವ ಸಾಮರ್ಥ್ಯ ಹೊಂದಿದೆ. ಉದಯಪುರ ನಗರದಿಂದ 25 ಕಿ.ಮೀ ದೂರದಲ್ಲಿರುವ ಅರಾವಳಿ ಪರ್ವತ ಶ್ರೇಣಿಗಳ ನಡುವೆ ಈ ಐಟಿಸಿ ಮೆಮೆಂಟೋಸ್' ನಿರ್ಮಾಣವಾಗಿದೆ. ಸಂಪೂರ್ಣ ಬೆಟ್ಟದ ಮೇಲಿರುವ ಈ ಹೋಟೆಲ್ ಸಾರ್ವಜನಿಕರ ದೃಷ್ಟಿಯಿಂದ ಸಂಪೂರ್ಣ ದೂರವಿದ್ದು, ಅತ್ಯಂತ ಖಾಸಗಿಯಾಗಿ ಮದುವೆ ಆಗಲು ಇದು ಸೂಕ್ತವಾಗಿದೆ. ಇದರಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಕೂಡ ಇದೆ.

Rashmika Vijay Wedding: ವಿಜಯ್‌ ದೇವರಕೊಂಡ ಜೊತೆ ಹಸೆಮಣೆ ಏರಲಿರುವ ರಶ್ಮಿಕಾ ಮಂದಣ್ಣ; ಅಧಿಕೃತ ಘೋಷಣೆ

ಮದುವಗೆ ತಗುಲಿದೆ ದುಬಾರಿ ಖರ್ಚು

ಈ ಪಂಚತಾರಾ ಹೋಟೆಲ್‌ನಲ್ಲಿ 180 ರಿಂದ 220 ಅತಿಥಿಗಳ ಉಪಸ್ಥಿತಿಯಲ್ಲಿ ನಡೆಯುವ ಮದುವೆಗೆ ಸುಮಾರು 90 ಲಕ್ಷ ರೂ,ಗಳಿಂದ 1.40 ಕೋಟಿ ರೂ,ವರೆಗೂ ಖರ್ಚಾಗಲಿದೆಯಂತೆ. ಇವೆಂಟ್ ಪ್ಲಾನರ್‌ಗಳ ಪ್ರಕಾರ, ಎರಡು ದಿನಗಳ ಕಾಲ ನಡೆಯುವ 150-200 ಅತಿಥಿಗಳ ಉಪಸ್ಥಿತಿಯಲ್ಲಿ ನಡೆಯುವ ಮದುವೆಗೆ 1.20 ಕೋಟಿ ರೂ,ಗಳಿಂದ 2.50 ಕೋಟಿ ರೂ.ಗಳವರೆಗೆ ಖರ್ಚಾಗಬಹುದಂತೆ. ಒಂದು ಊಟಕ್ಕೆ ಮೆನು ಆಧಾರದ ಮೇಲೆ 3 ಸಾವಿರದಿಂದ 6 ಸಾವಿರವರೆಗೂ ದರ ನಿಗದಿ ಆಗಿರಲಿದೆಯಂತೆ. ಇನ್ನು, ಇಲ್ಲಿ ಐಟಿಸಿ ಮೆಮೆಂಟೋಸ್ ಒಳಗೆ ಇರುವ ಮೆಮೆಂಟೋಸ್ ಸೂಟ್, ಅರಾವಳಿ ಸೂಟ್, ವ್ಯಾಲಿ ವ್ಯೂ ವಿಲ್ಲಾ ಸೇರಿದಂತೆ 5 ವಿಧದ ಕೊಠಡಿಗಳಿವೆ. ಖಾಸಗಿ ಕೊಠಡಿಗಳ ದರ ಒಂದು ರಾತ್ರಿಗೆ 20 ಸಾವಿರದಿಂದ 50 ಸಾವಿರ ರೂ,ಗಳವರೆಗೆ ಇದೆ ಎಂಬ ಮಾಹಿತಿ ಇದೆ.

ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆಗೆ ಆಹ್ವಾನದ ಜೊತೆ ಉಡುಗೊರೆ; ಏನಿದೆ ವೆಡ್ಡಿಂಗ್‌ ಕಾರ್ಡ್‌ ಬಾಕ್ಸ್‌ನಲ್ಲಿ? ವಿಡಿಯೋ ವೈರಲ್‌

ಮದುವೆಗೆ ಇರಲಿದೆ ಭಾರಿ ಭದ್ರತೆ

ಈ ಮದುವೆಯು ಫೆಬ್ರವರಿ 26 ರಂದು ನಡೆಯಲಿದ್ದು, ಕೇವಲ 100 ಜನ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ. ಅತಿಥಿಗಳ ಪಟ್ಟಿಯಲ್ಲಿ ತೆಲುಗು ರಾಜ್ಯಗಳ ಕೆಲ ರಾಜಕಾರಣಿಗಳು, ಆಪ್ತ ಸಿನಿಮಾ ನಿರ್ದೇಶಕರು ಸೇರಿದ್ದಾರೆ. ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಉದಯಪುರ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ಮೂರು ದಿನಗಳ ಕಾಲ ಅತ್ಯಂತ ಖಾಸಗಿಯಾಗಿ ನಡೆಯಲಿರುವ ಈ ಮದುವೆ ಸಂಭ್ರಮಕ್ಕೆ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರು ಹಾಗೂ ಹೈದರಾಬಾದ್‌ನಿಂದ ಆಗಮಿಸಿರುವ ವಿಶೇಷ ಭದ್ರತಾ ತಂಡಗಳ ಜೊತೆಗೆ, ಈ ಬಾರಿ ಅಂತರಾಷ್ಟ್ರೀಯ ಭದ್ರತಾ ಏಜೆನ್ಸಿಯನ್ನೂ ನಿಯೋಜಿಸುವ ಮೂಲಕ ಮದುವೆಯ ಭದ್ರತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗಿದೆ ಎಂಬುದು ಆಪ್ತ ಮೂಲಗಳ ಮಾಹಿತಿ.

ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ

ಫೆ.26ರಂದು ಅತ್ಯಂತ ಖಾಸಗಿಯಾಗಿ ಮದುವೆಯಾಗುವ ಈ ಜೋಡಿಯು ನಂತರ ಚಿತ್ರರಂಗದ ಗಣ್ಯರಿಗಾಗಿ ಮತ್ತು ಸ್ನೇಹಿತರಿಗಾಗಿ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ರಿಸೆಪ್ಷನ್ ಏರ್ಪಡಿಸಿದೆ. ಅಲ್ಲಿ ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ಚಿತ್ರರಂಗಗಳ ಗಣ್ಯರು ಮದುವೆಗೆ ಆಗಮಿಸುವ ಸಾಧ್ಯತೆ ಇದೆ.