ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jana Nayagan Teaser Out: ʼಜಯ ನಾಯಗನ್‌ʼ ಟೀಸರ್‌ ಔಟ್‌; ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾದ ವಿಜಯ್‌

Vijay: ಕಾಲಿವುಡ್‌ ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ನಟನೆಯ ಕೊನೆಯ ಚಿತ್ರ ʼಜನ ನಾಯಗನ್‌ʼ ಕೊನೆಯ ಹಂತದಲ್ಲಿದೆ. ಮುಂದಿನ ವರ್ಷಾರಂಭದಲ್ಲಿ ತೆರೆಗೆ ಬರಲಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇದೀಗ ಈ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ.

ವಿಜಯ್‌ ನಟನೆಯ ʼಜಯ ನಾಯಗನ್‌ʼ ಟೀಸರ್‌ ಔಟ್‌

ʼಜನ ನಾಯಗನ್‌ʼ ಚಿತ್ರದ ಪೋಸ್ಟರ್‌.

Profile Ramesh B Jun 22, 2025 4:55 PM

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ (Vijay) ಸದ್ಯ ರಾಜಕೀಯಕ್ಕೆ ಕಾಲಿಟ್ಟಿದ್ದು, ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದಾರೆ. ಈ ಮಧ್ಯೆ ಅವರು ತಮ್ಮ ಕೊನೆಯ ಚಿತ್ರ ʼಜನ ನಾಯಗನ್‌ʼ (Jana Nayaga)ನ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಚ್‌.ವಿನೋದ್‌ (H.Vinoth) ಆ್ಯಕ್ಷನ್‌ ಹೇಳುತ್ತಿರುವ ಈ ಚಿತ್ರವನ್ನು ಕನ್ನಡದ ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದೆ. ಜೂ. 22ರಂದು ವಿಜಯ್‌ 51ನೇ ಜನ್ಮದಿನ ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸಿನಿಮಾತಂಡ ಟೀಸರ್‌ ಬಿಡುಗಡೆ ಮಾಡಿ ವಿಜಯ್‌ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದೆ.

ಸದ್ಯ ರಿಲೀಸ್‌ ಆಗಿರುವ 1:06 ನಿಮಿಷದ ಟೀಸರ್‌ ಗಮನ ಸೆಳೆದಿದೆ. ಈ ಚಿತ್ರದಲ್ಲಿ ವಿಜಯ್‌ ಮತ್ತೊಮ್ಮೆ ಪೊಲೀಸ್‌ ಸಮವಸ್ತ್ರ ಧರಿಸಿದ್ದಾರೆ. ವಿಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲೊಂದು ಸಮುರಾಯ್ ಕತ್ತಿ, ಮತ್ತೊಂದು ಕೈಯಲ್ಲಿ ರಕ್ತ ಮೆತ್ತಿದ ಚಾಕು ಹಿಡಿದುಕೊಂಡು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ʼ‘ಒಬ್ಬ ನಿಜವಾದ ನಾಯಕ ಅಧಿಕಾರಕ್ಕಾಗಿ ಅಲ್ಲ, ಜನಗಳಿಗಾಗಿ ಎದ್ದು ನಿಂತು ಹೋರಾಡುತ್ತಾನೆʼ’ ಎಂಬ ಸಾಲು ಮೂಡಿ ಬಂದಿದೆ. ಜತೆಗೆ ಟೀಸರ್​ನ ಕೊನೆಯಲ್ಲಿ ʼʼಬನ್ನಿ ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಹೊಂದೋಣ’ʼ ಎಂದು ಕರೆಯನ್ನೂ ನೀಡಲಾಗಿದೆ. ಆ ಮೂಲಕ ಕಥೆಯ ಗುಟ್ಟು ಬಿಟ್ಟು ಕೊಡದೆಯೂ ಕುತೂಹಲ ಮೂಡಿಸುವಲ್ಲಿ ಟೀಸರ್‌ ಯಶಸ್ವಿಯಾಗಿದೆ. ವಿಜಯ್‌ ಪಾತ್ರವನ್ನು ನಿಜವಾದ ನಾಯಕ ಎಂದು ಕರೆಯಲಾಗಿದೆ.

ʼಜನ ನಾಯಗನ್‌ʼ ಚಿತ್ರದ ಟೀಸರ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Jana Nayagan Release Date: ದಳಪತಿ ವಿಜಯ್‌ ಅಭಿನಯದ ಕೊನೆ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌: ಈ ವರ್ಷ ತೆರೆಗೆ ಬರುತ್ತಾ ʼಜನ ನಾಯಕನ್‌ʼ ?

ಸದ್ಯ ಟೀಸರ್‌ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ವಿಜಯ್‌ ಅವರ ಕೊನೆಯ ಚಿತ್ರ. ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯ್‌ ಮುಂದೆಯೂ ಚಿತ್ರಗಳಲ್ಲಿ ನಟಿಸಬೇಕು ಎನ್ನುವುದು ಇನ್ನು ಕೆಲವರ ಆಗ್ರಹ. ʼಜನ ನಾಯಗನ್‌ʼ ತಮಿಳಿನ ಜತೆಗೆ ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ತೆರೆಗೆ ಬರಲಿದೆ.

ಸಂಕ್ರಾಂತಿ ವೇಳೆಗೆ ತೆರೆಗೆ

ʼಜನ ನಾಯಗನ್‌ʼ ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಕೊಳ್ಳುತ್ತಿದ್ದು, ಸಂಕ್ರಾಂತಿ ಪ್ರಯುಕ್ತ ಮುಂದಿನ ವರ್ಷ ಜ. 9ರಂದು ತೆರೆಗೆ ಬರಲಿದೆ. ಬಾಬ್ಬಿ ಡಿಯೋಲ್‌, ಮಮಿತಾ ಬೈಜು, ಗೌತಮ್‌ ವಾಸುದೇವ್‌ ಮೆನನ್‌, ಪ್ರಕಾಶ್‌ ರಾಜ್‌, ಪ್ರಿಯಾಮಣಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಅನಿರುದ್ಧ್‌ ರವಿಚಂದರ್‌ ಸಂಗೀತ ನಿರ್ದೇಶನವಿದೆ.

ವಿಜಯ್‌ ದಾಖಲೆಯನ್ನೇ ಮೀರಿಸುತ್ತಾ?

ವಿಜಯ್‌ ಅವರ ಕೊನೆಯ ಚಿತ್ರ ಇದಾಗಿರುವುದರಿಂದ ʼಜನ ನಾಯಗನ್‌ʼ ಈಗಾಗಲೇ ಕುತೂಹಲ ಕೆರಳಿಸಿದೆ. ಹೀಗಾಗಿ ಇದು ದಾಖಲೆಯ ಕಲೆಕ್ಷನ್‌ ಮಾಡಲಿದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಆ್ಯಕ್ಷನ್‌ ಪ್ಯಾಕ್ಡ್‌ ಪಾಲಿಟಿಕಲ್‌ ಥ್ರಿಲ್ಲರ್‌ ಆಗಿರುವ ಇದರಲ್ಲಿ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸುತ್ತಿದ್ದು, ಇವರಿಬ್ಬರ ಕಾಂಬಿನೇಷನ್‌ನ 2ನೇ ಚಿತ್ರ ಎನ್ನುವುದು ವಿಶೇಷ. ಈ ಹಿಂದೆ ಇವರು 2022ರಲ್ಲಿ ಬಿಡುಗಡೆಯಾದ ನೆಲ್ಸನ್‌ ದಿಲೀಪ್‌ ಕುಮಾರ್‌ ಅಭಿನಯದ ʼಬೀಸ್ಟ್‌ʼ ಸಿನಿಮಾದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದರು.