ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
IPL

IPL

IPL 2025: ಕಾಲ್ತುಳಿತ ಪ್ರಕರಣ ಸಂಬಂಧ ಆರ್‌ಸಿಬಿ, ಕೆಎಸ್‌ಸಿಎ ವಿರುದ್ದ ಎಫ್‌ಐಆರ್‌?

ಕಾಲ್ತುಳಿತ ಪ್ರಕರಣ ಸಂಬಂಧ ಆರ್‌ಸಿಬಿ, ಕೆಎಸ್‌ಸಿಎ ವಿರುದ್ದ ಎಫ್‌ಐಆರ್‌?

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಕಾಲ್ತುಳಿತದಿಂದ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟ ಪ್ರಕರಣ ಸಂಬಂಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ವಿರುದ್ದ ಎಫ್‌ಐಆರ್‌ ದಾಖಲಿಸಲು ಕರ್ನಾಟಕ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

ಆರ್‌ಸಿಬಿಗೆ ಐಪಿಎಲ್‌ ಕಪ್‌ ಗೆದ್ದುಕೊಟ್ಟ ಬಳಿಕ ದೊಡ್ಡ ನಿರ್ಧಾರ ತೆಗೆದುಕೊಂಡ ಜಿತೇಶ್‌ ಶರ್ಮಾ!

ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟ ಬಳಿಕ ಜಿತೇಶ್‌ ಶರ್ಮಾ ದೊಡ್ಡ ನಿರ್ಧಾರ!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಚೊಚ್ಚಲ ಕಪ್‌ ಗೆದ್ದುಕೊಟ್ಟ ಬಳಿಕ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅವರು 2025-26ರ ದೇಶಿ ಆವೃತ್ತಿಯಲ್ಲಿ ವಿದರ್ಭ ತಂಡವನ್ನು ತೊರೆದು ಬರೋಡ ಸೇರಲು ನಿರ್ಧರಿಸಿದ್ದಾರೆ.

IPL 2025: ಸಿಎಸ್‌ಕೆಯನ್ನು ಹಿಂದಿಕ್ಕಿ ಅತ್ಯಂತ ಮೌಲ್ಯಯುತ ಫ್ರಾಚೈಸಿ ಎನಿಸಿಕೊಂಡ ಆರ್‌ಸಿಬಿ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅತ್ಯಂತ ಮೌಲ್ಯಯುತ ಫ್ರಾಂಚೈಸಿ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೊಚ್ಚಲ ಚಾಂಪಿಯನ್‌ ಆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅತ್ಯಂತ ಮೌಲ್ಯಯುತ ಫ್ರಾಂಚೈಸಿ ಎನಿಸಿಕೊಂಡಿದೆ. ಆರ್‌ಸಿಬಿ ಮೌಲ್ಯ 269 ದಶಲಕ್ಷ ಡಾಲರ್ ಆಗಿದೆ. ಮುಂಬೈ ಇಂಡಿಯನ್ಸ್ 242 ಮಿಲಿಯನ್ ಡಾಲರ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ ಎಫ್‌ಐಆರ್‌ ದಾಖಲು! ಕಾರಣವೇನು ಗೊತ್ತೆ?

ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ ಎಫ್‌ಐಆರ್‌ ದಾಖಲು!

ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಭಾರತ ತಂಡದ ವೇಗದ ಬೌಲರ್‌ ಯಶ್‌ ದಯಾಳ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 69ರ ಅಡಿಯಲ್ಲಿ ಎಫ್‌ಐಆರ್‌ ಪ್ರಕರಣ ದಾಖಲಿಸಲಾಗಿದೆ. ಗಾಯಾಬಾದ್‌ನ ಮಹಿಳೆಯೊಬ್ಬರು ಆರ್‌ಸಿಬಿ ವೇಗಿಯ ವಿರುದ್ದ ಹಲವು ದಿನಗಳ ಹಿಂದೆ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

DPL 2025:  ಡೆಲ್ಲಿ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ರಿಷಭ್‌ ಪಂತ್‌ ಸೇರಿ 10  ಐಪಿಎಲ್‌ ಸ್ಟಾರ್‌ಗಳು!

ಡಿಪಿಎಲ್‌ ಹರಾಜಿನಲ್ಲಿ ರಿಷಭ್‌ ಪಂತ್‌ ಸೇರಿ 10 ಐಪಿಎಲ್‌ ಸ್ಟಾರ್‌ಗಳು!

ಜುಲೈ 6 ರಿಂದ ಜುಲೈ 7 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ 2025ರ ಡೆಲ್ಲಿ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಅತ್ಯಂತ ದುಬಾರಿ ಆಟಗಾರ ರಿಷಭ್‌ ಪಂತ್‌ ಸೇರಿದಂತೆ ಒಟ್ಟು 10 ಮಂದಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

IPL Celebration: ಐಪಿಎಲ್‌ ತಂಡಗಳ ವಿಜಯೋತ್ಸವಕ್ಕೆ ಕಠಿಣ ನಿಯಮ ಜಾರಿಗೆ ತಂದ ಬಿಸಿಸಿಐ

ಐಪಿಎಲ್‌ ತಂಡಗಳ ವಿಜಯೋತ್ಸವಕ್ಕೆ ಕಠಿಣ ನಿಯಮ ಜಾರಿಗೆ ತಂದ ಬಿಸಿಸಿಐ

IPL Celebration: ಯಾವುದೇ ಐಪಿಎಲ್ ತಂಡಗಳು ಟ್ರೋಫಿ ಜಯಿಸಿದ ನಂತರ ಸಂಬಂಧಪಟ್ಟ ತವರು ರಾಜ್ಯದಲ್ಲಿ ವಿಜಯೋತ್ಸವ ಆಚರಣೆ ಮಾಡುವುದಕ್ಕೆ ಬಿಸಿಸಿಐನಿಂದ ಮೊದಲೇ ಅನುಮತಿ ಪಡೆಯಬೇಕು. ಸುರಕ್ಷತೆಗಾಗಿ ಹಲವು ಹಂತದ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಬಿಸಿಸಿಐನಿಂದ ಲಿಖಿತ ಅನುಮತಿ ಪಡೆದ ನಂತರವೇ ಆಚರಣೆಗೆ ಅವಕಾಶ ನೀಡಲಾಗುತ್ತದೆ ಎಂದು ಸೈಕಿಯಾ ತಿಳಿಸಿದ್ದಾರೆ.

IPL 2025: ವಿರಾಟ್ ಕೊಹ್ಲಿಯನ್ನು ಹೊರಗಿಟ್ಟು 2025ರ ಐಪಿಎಲ್‌ ತಂಡ ಕಟ್ಟಿದ ಆರ್‌ ಅಶ್ವಿನ್!

ಕೊಹ್ಲಿಯನ್ನು ಬಿಟ್ಟು 2025ರ ಐಪಿಎಲ್‌ ತಂಡ ಕಟ್ಟಿದ ಆರ್‌ ಅಶ್ವಿನ್‌!

R Ashwin’s Picks IPL 2025 team: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 6 ರನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್, ಮೂವರು ಆರ್‌ಸಿಬಿ ಆಟಗಾರರಿಗೆ ಸ್ಥಾನ ಕಲ್ಪಿಸಿ ತಮ್ಮ 2025ರ ಐಪಿಎಲ್‌ನ ಬಲಿಷ್ಠ ತಂಡವನ್ನು ಕಟ್ಟಿದ್ದಾರೆ.

ʻವಿರಾಟ್‌ ಕೊಹ್ಲಿ ಒಮ್ಮೆ ನನ್ನ ಜೊತೆ ಮುನಿಸಿಕೊಂಡಿದ್ದರುʼ: ಅಚ್ಚರಿ ಹೇಳಿಕೆ ನೀಡಿದ ಎಬಿಡಿ!

ತಮ್ಮ ಜೊತೆ ಕೊಹ್ಲಿ ಮುನಿಸಿಕೊಂಡಿದ್ದ ಘಟನೆ ನೆನೆದ ಎಬಿಡಿ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಇಬ್ಬರೂ 2011ರಿಂದ ಇಲ್ಲಿಯವರೆಗೂ ಅದ್ಭುತ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ, ಒಮ್ಮೆ ವಿರಾಟ್‌ ಕೊಹ್ಲಿ ತಮ್ಮ ಜತೆ ಮಾತು ನಿಲ್ಲಿಸಿದ್ದ ಪ್ರಸಂಗವನ್ನು ಎಬಿ ಡಿ ವಿಲಿಯರ್ಸ್‌ ಬಹಿರಂಗಪಡಿಸಿದ್ದಾರೆ.

ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ ಅನುಭವಿಸಿದ್ದ ಕರಾಳ ದಿನಗಳನ್ನು ನೆನೆದ ಎಬಿ ಡಿ ವಿಲಿಯರ್ಸ್‌!

ಡೆಲ್ಲಿ ಡೇರ್‌ಡೆವಿಲ್ಸ್‌ ಬಗ್ಗೆ ಗಂಭೀರ ಆರೋಪ ಮಾಡಿದ ಎಬಿಡಿ!

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್‌ ಅವರು ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ತಮ್ಮ ವೃತ್ತಿ ಜೀವನದ ಬಹುತೇಕ ಅವಧಿಯನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಸವೆಸಿದ್ದಾರೆ. ಆದರೆ, ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಐಪಿಎಲ್‌ ವೃತ್ತಿ ಜೀವನವನ್ನು ಆರಂಭಿಸಿದ್ದ ಎಬಿ ಡಿ ವಿಲಿಯರ್ಸ್‌, ನಂತರ ಆರ್‌ಸಿಬಿಗೆ ಬಂದಿದ್ದರು.

ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕನ ಜೊತೆ ಕಾವ್ಯಾ ಮಾರನ್‌ ಮದುವೆ?

ಸಂಗೀತ ನಿರ್ದೇಶಕನ ಜೊತೆ ಕಾವ್ಯಾ ಮಾರನ್‌ ಮದುವೆ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ತಂಡವಾದ ಸನ್‌ರೈಸರ್ಸ್ ಹೈದರಾಬಾದ್‌ನ ಒಡತಿ ಕಾವ್ಯಾ ಮಾರನ್, ದಕ್ಷಿಣ ಭಾರತದ ಖ್ಯಾತ ಸಂಗೀತಗಾರನೊಂದಿಗೆ ಡೇಟಿಂಗ್‌ ನಡೆಸುತ್ತಿದ್ದಾರೆಂಬ ವದಂತಿಗಳಿವೆ. ಅಲ್ಲದೆ ಈ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

18 ವರ್ಷಗಳ ಬಳಿಕ ಆರ್‌ಸಿಬಿ ಕಪ್‌ ಗೆದ್ದ ಬಗ್ಗೆ ಭಾವನಾತ್ಮಕ ಸಂದೇಶ ಹಂಚಿಕೊಂಡ ಎಬಿಡಿ!

ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಹಂಚಿಕೊಂಡ ಎಬಿಡಿ!

ABD on RCB's Maiden Tittle: ಸತತ 18 ವರ್ಷಗಳ ಬಳಿಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್‌ ದೀರ್ಘಾವಧಿ ಕನಸನ್ನು ನನಸಾಗಿಸಿಕೊಂಡಿತ್ತು. ಆರ್‌ಸಿಬಿ ಕಪ್‌ ಗೆದ್ದ ಹಲವು ದಿನಗಳ ಬಳಿಕ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

RCB franchise: ನಾನೇನೂ ಹುಚ್ಚನಲ್ಲ: ಆರ್‌ಸಿಬಿ ಖರೀದಿ ಬಗ್ಗೆ ಡಿಕೆಶಿ ಶಾಕಿಂಗ್ ರಿಯಾಕ್ಷನ್!

ನಾನೇನೂ ಹುಚ್ಚನಲ್ಲ; ಆರ್‌ಸಿಬಿ ಖರೀದಿ ಬಗ್ಗೆ ಡಿಕೆಶಿ ರಿಯಾಕ್ಷನ್!

RCB franchise: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್‌ ಕಪ್‌ ಗೆದ್ದ ಸಂಭ್ರಮಾಚರಣೆ ನಡೆಸುವಾಗ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆರ್‌ಸಿಬಿಯನ್ನು ಬ್ಯಾನ್‌ ಮಾಡಲಾಗುವುದು, ಮಾರಾಟ ಮಾಡಲು ಅದರ ಮಾಲೀಕ ಸಂಸ್ಥೆ ಯೋಚಿಸುತ್ತಿದೆ ಎನ್ನಲಾಗಿತ್ತು. ಈ ನಡುವೆ ಆರ್‌ಸಿಬಿ ಖರೀದಿ ವದಂತಿ ಹರಿದಾಡುತ್ತಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

RCB Fans Brutally Troll: ಚೆನ್ನೈ ಮಾಜಿ ಆಟಗಾರನನ್ನು ಟ್ರೋಲ್‌ ಮಾಡಿದ ಆರ್‌ಸಿಬಿ ಅಭಿಮಾನಿ

ಚೆನ್ನೈ ಮಾಜಿ ಆಟಗಾರನನ್ನು ಟ್ರೋಲ್‌ ಮಾಡಿದ ಆರ್‌ಸಿಬಿ ಅಭಿಮಾನಿ

ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ಮಾರಾಟವಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದನ್ನು ಆರ್‌ಸಿಬಿ ಮಾಲಕತ್ವ ಹೊಂದಿರುವ ಯುನೈಟೆಡ್‌ ಸ್ಪಿರಿಟ್‌ನ ಮಾತೃ ಸಂಸ್ಥೆ ಡಿಯಾಜಿಯೊ ತಳ್ಳಿ ಹಾಕಿದೆ. ನಮ್ಮ ತಂಡ ಮಾರಾಟಕ್ಕಿಲ್ಲ ಇವೆಲ್ಲ ಬರೀ ವದಂತಿಗಳಷ್ಟೇ ಎಂದು ಹೇಳಿದೆ.

RCB: ಆರ್‌ಸಿಬಿ ಮಾರಾಟಕ್ಕಿಲ್ಲ; ವದಂತಿಗೆ ತೆರೆ ಎಳೆದ ಮಾಲೀಕ

ಆರ್‌ಸಿಬಿ ಮಾರಾಟಕ್ಕಿಲ್ಲ: ವದಂತಿಗೆ ತೆರೆ ಎಳೆದ ಮಾಲೀಕ

16,834 ಕೋಟಿ ರೂ.ಗೆ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಯೋಚಿಸಲಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ, ಇವೆಲ್ಲ ಸುಳ್ಳು ಎಂದು ಡಿಯಾಜಿಯೊ ಸ್ಪಷ್ಟನೆ ನೀಡಿ ಈ ವದಂತಿಗೆ ಡಿಯಾಜಿಯೊ ತೆರೆ ಎಳೆದಿದೆ. ಇದರಿಂದ ಅಭಿಮಾನಿಗಳ ನಿರಾಳರಾಗಿದ್ದಾರೆ.

Indian Premier League: ಐಪಿಎಲ್ ಕ್ರೀಡೆ ಮಾತ್ರವಲ್ಲ ಮನೋರಂಜನೆಯ ಭಾಗ; ಪ್ರಾದೇಶಿಕ ಆರ್ಥಿಕ ವೃದ್ಧಿಗೆ ಬಲ

ಐಪಿಎಲ್ ಕ್ರೀಡೆ ಮಾತ್ರವಲ್ಲ ಮನೋರಂಜನೆಯ ಭಾಗ

Indian Premier League: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕೇವಲ ಕ್ರಿಕೆಟ್ ಟೂರ್ನಮೆಂಟ್ ಮಾತ್ರವಲ್ಲ. ಇದು ಭಾರತದ ಆರ್ಥಿಕತೆ ಬೆಳವಣಿಗೆಗೆ ಬಲ ನೀಡುವ ಪ್ರಮುಖ ಸಾಧನವಾಗಿದೆ. ಇದು ಪ್ರಾದೇಶಿಕ ಆರ್ಥಿಕತೆಯ ಅಂಗಾಂಗಗಳಿಗೆ ಜೀವತುಂಬುತ್ತದೆ, ಉದ್ಯೋಗ ಸೃಷ್ಟಿಸುತ್ತದೆ.

Bengaluru Stampede: ʻತುಂಬಾ ಬೇಸರವಾಯಿತುʼ-ಕಾಲ್ತುಳಿತ ಪ್ರಕರಣದ ಬಗ್ಗೆ ರಾಹುಲ್‌ ದ್ರಾವಿಡ್‌ ಪ್ರತಿಕ್ರಿಯೆ!

ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ರಾಹುಲ್‌ ದ್ರಾವಿಡ್‌ ಪ್ರತಿಕ್ರಿಯೆ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಚೊಚ್ಚಲ ಐಪಿಎಲ್‌ ಟ್ರೋಫಿ ಗೆಲುವಿನ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಸಾವಿಗೀಡಾಗಿದ್ದರು ಹಾಗೂ 47 ಮಂದಿ ಗಾಯಕ್ಕೆ ತುತ್ತಾಗಿದ್ದರು. ಈ ದುರ್ಘಟನೆಯ ಬಗ್ಗೆ ಭಾರತೀಯ ಕ್ರಿಕೆಟ್‌ ದಿಗ್ಗಜ ಹಾಗೂ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಪ್ರತಿಕ್ರಿಯೆ ನೀಡಿದ್ದಾರೆ.

ಫ್ರಾಂಚೈಸಿ ಮಾರಾಟ ಮಾಡಲು ಮುಂದಾದ ಆರ್‌ಸಿಬಿ ಮಾಲೀಕರು

ಮಾರಾಟಕ್ಕಿದೆ ಆರ್‌ಸಿಬಿ ಫ್ರಾಂಚೈಸಿ!; ಎಷ್ಟು ಕೋಟಿ ಮೊತ್ತ?

2008 ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮಾಲೀಕರಾಗಿದ್ದ ವಿಜಯ್ ಮಲ್ಯ ಅವರು ಆರ್‌ಸಿಬಿ ಫ್ರಾಂಚೈಸಿಯನ್ನು ಸ್ಥಾಪಿಸಿದ್ದರು. ಆದರೆ ಮಲ್ಯ ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಬಳಿಕ ಅವರು ಫ್ರಾಂಚೈಸಿಯನ್ನು ಡಯಾಜಿಯೊಗೆ ಭಾರತದಲ್ಲಿನ ತನ್ನ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್‌ಗೆ ಮಾರಾಟ ಮಾಡಿದ್ದರು.

ʻಪ್ರಬುದ್ದತೆಯನ್ನು ತರುತ್ತದೆʼ:ನಾಯಕತ್ವದ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ ಶ್ರೇಯಸ್‌ ಅಯ್ಯರ್‌!

ನಾಯಕತ್ವದ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ ಅಯ್ಯರ್‌!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಫೈನಲ್‌ವರೆಗೂ ಮುನ್ನಡೆಸಿದ್ದ ಶ್ರೇಯಸ್‌ ಅಯ್ಯರ್‌, ತಮ್ಮ ನಾಯಕತ್ವದ ಬಗ್ಗೆ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಅವರು ನಾಯಕತ್ವದ ಬಗ್ಗೆ ತಮ್ಮದೇ ಆದ ನಿಲುವನ್ನು ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾಗೆ ನಾಯಕತ್ವ ನೀಡಿ ಬಲಿಷ್ಠ ಐಪಿಎಲ್ ತಂಡ ಕಟ್ಟಿದ ನವಜೋತ್ ಸಿಂಗ್ ಸಿಧು!

ತಮ್ಮ ನೆಚ್ಚಿನ ಐಪಿಎಲ್‌ ತಂಡ ಕಟ್ಟಿದ ನವಜೋತ್‌ ಸಿಂಧು!

Navjot Singh Sidhu picked his IPL 2025 Team: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ಬೆನ್ನಲ್ಲೇ ಕ್ರಿಕೆಟ್ ವಿಶ್ಲೇಷಕ ಹಾಗೂ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಅವರು ತಮ್ಮ ನೆಚ್ಚಿನ ಐಪಿಎಲ್‌ ತಂಡವನ್ನು ಪ್ರಕಟಿಸಿದ್ದಾರೆ. ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಚಾಂಪಿಯನ್ ನಾಯಕ ರಜತ್ ಪಾಟಿದಾರ್ ಹಾಗೂ ಶ್ರೇಯಸ್ ಅಯ್ಯರ್ ರನ್ನು ಕಡೆಗಣಿಸಿದ ಸಿಧು, ಹಿಟ್‌ಮ್ಯಾನ್ ರೋಹಿತ್ ಶರ್ಮಾಗೆ ನಾಯಕತ್ವವನ್ನು ನೀಡಿದ್ದಾರೆ.

IPL 2025 Revenue: ಐಪಿಎಲ್ 2025ರಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು?

ಐಪಿಎಲ್ 2025ರಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು?

ಟಾಟಾ ಗ್ರೂಪ್ 2024 ರಿಂದ 2028 ರವರೆಗಿನ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾಗಿದ್ದು, ಒಟ್ಟು ₹2,500 ಕೋಟಿ ಮೌಲ್ಯದ ಒಪ್ಪಂದವನ್ನು ಹೊಂದಿದೆ. ಅಂದರೆ ಐಪಿಎಲ್ 2025 ಸೇರಿದಂತೆ ಪ್ರತಿ ಋತುವಿನಲ್ಲಿ ಟಾಟಾದಿಂದಲೇ ₹500 ಕೋಟಿ ಆದಾಯ ಬರುತ್ತದೆ.

ಭಾರತ ತಂಡದ ನಾಯಕತ್ವದ ರೇಸ್‌ನಲ್ಲಿ ಶ್ರೇಯಸ್‌ ಅಯ್ಯರ್‌! ಅಧಿಕಾರಿ ಹೇಳಿದ್ದೇನು?

ಭಾರತ ತಂಡದ ನಾಯಕತ್ವದ ರೇಸ್‌ನಲ್ಲಿ ಶ್ರೇಯಸ್‌ ಅಯ್ಯರ್!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದ ಸಾಮರ್ಥ್ಯವನ್ನು ಬಿಸಿಸಿಐ ಪರಿಶೀಲಿಸುತ್ತಿದೆ ಹಾಗೂ ಭಾರತ ವೈಟ್‌ಬಾಲ್‌ ತಂಡದ ನಾಯಕತ್ವದ ರೇಸ್‌ಗೆ ಅವರು ಮರಳಿದ್ದಾರೆಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ 4 ಸ್ಟಾರ್‌ಗಳನ್ನು ಆರಿಸಿದ ಮಲ್ಯ!

Vijay mallya on Match winners for RCB: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ನಡುವೆ ಈ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರ ಸಂದರ್ಶನವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಬೆಂಗಳೂರು ಫ್ರಾಂಚೈಸಿ ವಿಜಯ್‌ ಮಲ್ಯಗೆ ಮೊದಲ ಆಯ್ಕೆಯಾಗಿರಲಿಲ್ಲ: ಲಲಿತ್‌ ಮೋದಿ!

ಬೆಂಗಳೂರು ಫ್ರಾಂಚೈಸಿ ಮಲ್ಯಗೆ ಮೊದಲ ಆಯ್ಕೆಯಾಗಿರಲಿಲ್ಲ: ಲಲಿತ್‌ ಮೋದಿ

Lalit Modi on Bengaluru franchise: 2008ರಲ್ಲಿ ಆರಂಭವಾಗಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬೆಂಗಳೂರು ಫ್ರಾಂಚೈಸಿ ವಿಜಯ್‌ ಮಲ್ಯಗೆ ಮೊದಲ ಆಯ್ಕೆಯಾಗಿರಲಿಲ್ಲ. ಅವರು ಮುಂಬೈ ಫ್ರಾಂಚೈಸಿಯನ್ನು ಖರೀದಿಸಲು ಬಯಸಿದ್ದರು. ಆದರೆ, ಅದು ಸಿಗದ ಕಾರಣ ಬೆಂಗಳೂರು ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದರು ಎಂದು ಐಪಿಎಲ್‌ ಸಂಸ್ಥಾಪಕ ಲಲಿತ್‌ ಮೋದಿ ತಿಳಿಸಿದ್ದಾರೆ.

Bengaluru Stampede: ಬೆಂಗಳೂರು ಕಾಲ್ತುಳಿತ; ನೈತಿಕ ಹೊಣೆ ಹೊತ್ತು ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ

ಬೆಂಗಳೂರು ಕಾಲ್ತುಳಿತ; ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ

Bengaluru Stampede: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಕಾರ್ಯದರ್ಶಿ ಶಂಕರ್ ಹಾಗೂ ಕೆಎಸ್​​ಸಿಎ ಖಜಾಂಚಿ ಜೈರಾಮ್ ನೈತಿಕ ಹೊಣೆ ಹೊತ್ತು ಹುದ್ದೆಗೆ ರಾಜಿನಾಮೆ (Resignation) ನೀಡಿದ್ದಾರೆ. ಪದಾಧಿಕಾರಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಶಂಕರ್, ಜೈರಾಮ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

Loading...