ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯಗಳಿಗೆ ಕಿಚ್ಚ ಸುದೀಪ್ (Sudeep) ಅವರ ಹಾಡು ಹಾಕಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಡಾಗ್ ಸತೀಶ್ (Dog Satish) ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಇದಾಗಲೇ ಅವರ ಬಗ್ಗೆ ದೂರುಗಳೂ ದಾಖಲಾಗಿವೆ. ಬಿಗ್‌ಬಾಸ್ ವಿಜೇತ ವಿನಯ್ ಗೌಡ (Vinay Gowda) ಅವರು ಡಾಗ್ ಸತೀಶ್ ಬಗ್ಗೆ ಸಂದರ್ಶನವೊಂದರಲ್ಲಿ (Interview) ಅತ್ಯಂತ ಖಡಕ್ ಆಗಿ ಮಾತಾಡಿದ್ದಾರೆ.
ಕಾನೂನಿನ ಬಗ್ಗೆ ಅರಿವಿಲ್ಲ
ವಿನಯ್ ಗೌಡ ಮಾತನಾಡಿ, ಕಮೆಂಟ್ ಮಾಡೋರಿಗೆ ಮಾತಾಡೋರು ಎಲ್ಲಿ ಹೋದ್ರು ಸಿಗ್ತಾರೆ. ಕನ್ನಡಕ್ಕೆ ಕೊಡುಗೆ ಆಗಿರೋ ಸುದೀಪ್ ಅವರ ಬಗ್ಗೆ , ನಟರ ಹಾಡನ್ನು ಬಳಸಿ ವಿಡಿಯೋ ಹಾಕಿದ್ದಾರೆ. ನ್ಯೂಸ್ ಆಗುತ್ತೆ ಅಂತ ವಿಡಿಯೋ ಪೋಸ್ಟ್ ಮಾಡಿದೆ ಅಂತ ಡಾಗ್ ಸತೀಶ್ ಅವರು ಹೇಳಿಕೆನೂ ಕೊಡ್ತಾರೆ. ಅವರಿಗೆ ಈ ಬಗ್ಗೆ ಅರಿವು ಇಲ್ಲ.
ಇದನ್ನೂ ಓದಿ: Cocktail 2: 'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ; ಫಸ್ಟ್ ಲುಕ್ ಪೋಸ್ಟರ್ ಔಟ್
ಕಾನೂನು ಪ್ರಕಾರ ಇದು ತುಂಬಾ ತಪ್ಪು. ಅದು ಅವರಿಗೆ ಅರಿವಿಗೆ ಬರಬೇಕಿದೆ. ಅವರಿಗೆ ಗೂಗಲ್ ಬಗ್ಗೆ ಗೊತ್ತಿದೆ. ಗೂಗಲ್‌ನಲ್ಲಿ ನಾನೇ ನಂಬರ್ ಒನ್ ಡಾಗ್ ಬ್ರೀಡರ್ ಎಂದು ಬರುತ್ತದೆ ಎಂದು ಹೇಳಿಕೊಂಡು ತಿರುಗುತ್ತಾರೆ. ಇದು ನಿಜನೇ. ಆದರೆ, ನಾಲ್ಕಾರು ಸಂದರ್ಶನದಲ್ಲಿ ನಾನೇ ನಂಬರ್ ಒನ್ ಎಂದು ಹೇಳುತ್ತಾ ಹೋದರೆ ಗೂಗಲ್ ಅದನ್ನೇ ಪಿಕ್ ಮಾಡಿ ಹಾಕುತ್ತದೆ. ನೀವು ಕೆಳಗೆ ಸ್ಕ್ರೋಲ್ ಮಾಡಿದರೆ ಅಲ್ಲಿ ಇದು ಗೂಗಲ್ ಹೇಳುವುದಲ್ಲ ಎಂದಿದ್ದಾರೆ.
ತಪ್ಪುಗಳನ್ನು ತಿದ್ದಿಕೊಂಡ್ವಿ
ನಾವು ಕೂಡ ಲಾವ್ ಬಗ್ಗೆ ಗೊತ್ತಿಲ್ಲದೇ ಜೈಲ್ ಹೋಗಿ ಬಂದ್ವಿ. ತಪ್ಪುಗಳನ್ನು ತಿದ್ದಿಕೊಂಡ್ವಿ. ಆದರೆ ಸತೀಶ್ ಅವರಿಗೆ ಈ ಬಗ್ಗೆಯೂ ಅರಿವು ಇರಬೇಕು. ಸಿಎಂ ಬಂದರೂ ವಿಡಿಯೋ ಡಿಲೀಟ್ ಮಾಡಲ್ಲ ಎನ್ನುವ ಮೂಲಕ ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿ ಕ್ರಿಮಿನಲ್ ಆಫೆನ್ಸ್ ಮಾಡಿದ್ದಾರೆ.
ಇನ್ನು ಸುದೀಪ್ ಅವರ ಬಗ್ಗೆ ಗೂಗಲ್ ಹಾಕಿ ಕೇಳಬೇಕು ಅಂತಿಲ್ಲ. ಗೂಗಲ್ ಹೋಗಿಬಿಟ್ಟು ಸುದೀಪ್ ಸರ್ ಯಾರು ಎಂದು ಕೇಳಬೇಕಿಲ್ಲ. ಡಾಗ್ ಸತೀಶ್ ಅವರಿಗೆ ಎಷ್ಟೋ ನಾಯಿಗಳ ಹೆಸರೇ ಗೊತ್ತಿಲ್ಲ. ಭಾರತೀಯ ಡಾಗ್ ಅಸೋಸಿಯೇಷನ್ ಅವರು ಇವರನ್ನು ಬ್ಯಾನ್ ಮಾಡುವ ಅಗತ್ಯವಿದೆ. ಒದ್ದು ಓಡಿಸಬೇಕಿದೆ.
ನನಗೆ ಅವರ ಬಗ್ಗೆ ಮಾತನಾಡಬೇಕಾದರೆ ಕೆಟ್ಟ ಕೆಟ್ಟ ಪದಗಳು ಬರತ್ತೆ. ಅವರಿಗೆ ಮಾನಸಿಕ ಸಮಸ್ಯೆ ಇದೆ. ಆಸ್ಪತ್ರೆಗೆ ದಾಖಲು ಮಾಡಿ ಟ್ರೀಟ್‌ಮೆಂಟ್ ಕೊಡಬೇಕು. ಅಗತ್ಯ ಇದೆ ಅವರಿಗೆ. ಮಾಧ್ಯಮಗಳ ಮುಂದೆಯೂ ರಾಜಾರೋಷವಾಗಿ ಮಾತಾಡ್ತಾರೆ.
ಇದನ್ನೂ ಓದಿ: MGR : ಎಂಜಿಆರ್ ಬಗ್ಗೆ ಕೀಳು ಮಾತು; ಜನರ ಬಳಿ ಕೈಮುಗಿದು ಕ್ಷಮೆ ಕೇಳಿದ ರಾಜೇಂದ್ರ ಪ್ರಸಾದ್
ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಇವರು ಮಾಡ್ತಾ ಇರೋದು ಸುಮ್ಮನೆ ವಿವಾದ ಸೃಷ್ಟಿಸೋಕು. ನಾನು ಬಿಗ್ ಬಾಸ್ ಮನೆಯಲ್ಲಿ 17 ದಿನ ಇದೆ. ಹೆಸರು ಮಾಡಿದೆ ಅನ್ನೋ ಕಾರಣಕ್ಕೆ ಹೊಟ್ಟೆಕಿಚ್ಚು ಅಂತಾರೆ ಎಂದಿದ್ದಾರೆ.