ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿನೋದ್‌ ಪ್ರಭಾಕರ್‌ ನಟನೆಯ ‘ಬಲರಾಮನ ದಿನಗಳು’ ರಿಲೀಸ್‌ ಡೇಟ್‌ ಫಿಕ್ಸ್‌; ಚಿತ್ರತಂಡಕ್ಕೆ ಸಾಥ್‌ ನೀಡಿದ ಕೆವಿಎನ್ ಪ್ರೊಡಕ್ಷನ್ಸ್

ಸ್ಯಾಂಡಲ್‌ವುಡ್‌ನ ಕಲ್ಟ್ ಕ್ಲಾಸಿಕ್ 'ಆ ದಿನಗಳು' ಚಿತ್ರದ ಮುಂದುವರಿದ ಅಧ್ಯಾಯವಾಗಿ ಮೂಡಿಬರುತ್ತಿರುವ, ನಿರ್ದೇಶಕ ಕೆ.ಎಂ. ಚೈತನ್ಯ ಅವರ 'ಬಲರಾಮನ ದಿನಗಳು' ಸಿನಿಮಾ ಜೂನ್ 26 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. 'ಮರಿ ಟೈಗರ್' ವಿನೋದ್ ಪ್ರಭಾಕರ್ ನಾಯಕರಾಗಿ ಹಾಗೂ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಕ್ಲಾಸಿಕ್ ಹಿಟ್ ‘ಆ ದಿನಗಳು’ ಚಿತ್ರದ ಮುಂದುವರಿದ ಅಧ್ಯಾಯ ಎಂದೇ ಬಿಂಬಿತವಾಗಿರುವ, ಸದ್ಯ ತೀವ್ರ ಕುತೂಹಲ ಮೂಡಿಸಿರುವ ‘ಬಲರಾಮನ ದಿನಗಳು’ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಈ ಸಿನಿಮಾದ ವಿತರಣೆಯನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ಹೊತ್ತುಕೊಂಡಿದ್ದು, ‘ಬಲರಾಮನ ದಿನಗಳು’ ಸಿನಿಮಾವು ಜೂನ್ 26ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.

‘ಆ ದಿನಗಳು’ ಚಿತ್ರದ ಮೂಲಕ ಕಲ್ಟ್ ಕ್ಲಾಸಿಕ್ ಸಿನಿಮಾ ಕೊಟ್ಟಿದ್ದ ಖ್ಯಾತ ನಿರ್ದೇಶಕ ಕೆ. ಎಂ. ಚೈತನ್ಯ ಮತ್ತೊಮ್ಮೆ ‘ಬಲರಾಮನ ದಿನಗಳು’ ಸಿನಿಮಾದ ಮೂಲಕ ಅಂಡರ್‌ವರ್ಲ್ಡ್ ಕಥಾಹಂದರ ಹಿಡಿದು ಮರಳಿದ್ದಾರೆ. ಪದ್ಮಾವತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಭಾರಿ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ವಿಭಿನ್ನ ಹಾಡುಗಳು ಹಾಗೂ ಟೀಸರ್ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ.

Maadeva Movie: ವಿನೋದ್ ಪ್ರಭಾಕರ್ ಅಭಿನಯದ ʼಮಾದೇವʼ ಚಿತ್ರದ ‘ಎದೇಲಿ ತಂಗಾಳಿʼ ಸಾಂಗ್‌ ಔಟ್‌

80ರ ದಶಕದ ಕಥೆಯಲ್ಲಿ ವಿನೋದ್ ಪ್ರಭಾಕರ್

‘ಬಲರಾಮನ ದಿನಗಳು’ ಚಿತ್ರವು 1980ರ ದಶಕದ ಬೆಂಗಳೂರು ಭೂಗತ ಲೋಕದ ನೈಜ ಘಟನೆಗಳನ್ನು ಆಧರಿಸಿದೆ. ‘ಮರಿ ಟೈಗರ್’ ವಿನೋದ್ ಪ್ರಭಾಕರ್ ಇಲ್ಲಿ ‘ಬಲರಾಮ’ನಾಗಿ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡುವ ಮುನ್ಸೂಚನೆ ಸಿಕ್ಕಿದೆ. ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಬಹುಭಾಷಾ ನಟಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಈ ಹಿಂದೆ ರಾಜಕುಮಾರ, ಜೇಮ್ಸ್‌, ಆರೆಂಜ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಪ್ರಿಯಾ, ಇದೀಗ ‘ಬಲರಾಮನ ದಿನಗಳು’ ಚಿತ್ರದ ಮೂಲಕ ಕನ್ನಡಕ್ಕೆ ಮರಳಿದ್ದಾರೆ.

ಈ ಸಿನಿಮಾದ ತಾರಾಗಣವೇ ಹೈಲೈಟ್

‘ಬಲರಾಮನ ದಿನಗಳು’ ಸಿನಿಮಾದ ಮತ್ತೊಂದು ದೊಡ್ಡ ಹೈಲೈಟ್ ಎಂದರೆ ‘ಆ ದಿನಗಳು’ ಚಿತ್ರದಲ್ಲಿದ್ದ ಐಕಾನಿಕ್ ಪಾತ್ರಗಳು ಮತ್ತು ಕಲಾವಿದರು ಇಲ್ಲೂ ಮುಂದುವರಿದಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಹಾಗೂ ಆಶೀಶ್ ವಿದ್ಯಾರ್ಥಿ ಅಬ್ಬರಿಸಿದ್ದಾರೆ. ಇವರ ಜೊತೆಗೆ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿದಂತೆ ಸ್ಯಾಂಡಲ್‌ವುಡ್‌ನ ಇನ್ನೂ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

Maadeva Movie: ನಟ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ ʼಮಾದೇವʼ ಚಿತ್ರ ಜೂನ್ 6ಕ್ಕೆ ರಿಲೀಸ್‌

ಸ್ಯಾಂಡಲ್‌ವುಡ್‌ಗೆ ಬಂದ ಸಂತೋಷ್ ನಾರಾಯಣ್

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ (Santhosh Narayanan) ಮೊದಲ ಬಾರಿಗೆ ಕೆ.ಎಂ. ಚೈತನ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ. ಹಿರಿಯ ಛಾಯಾಗ್ರಾಹಕ ಹೆಚ್.ಸಿ. ವೇಣು ಅವರ ಅದ್ಭುತ ಕ್ಯಾಮೆರಾ ಕೈಚಳಕ ಹಾಗೂ ‘ಕೆಜಿಎಫ್’ ಖ್ಯಾತಿಯ ಹರಿದಾಸ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರತಂಡ ಸದ್ಯದಲ್ಲೇ ಚಿತ್ರದ ಅದ್ದೂರಿ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ಜೂನ್ 26ಕ್ಕೆ ಬಲರಾಮ ಅಖಾಡಕ್ಕೆ ಇಳಿಯಲಿದ್ದಾನೆ.