ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ViRosh: ಹುಟ್ಟೂರಿನ ಶಾಲಾ ಮಕ್ಕಳಿಗೆ ಸ್ಕಾಲರ್‌ಶಿಪ್‌ ಘೋಷಣೆ ಮಾಡಿದ ವಿಜಯ್‌ ದೇವರಕೊಂಡ; ಇದು ವಿರೋಶ್‌ ವೆಡ್ಡಿಂಗ್‌ ಗಿಫ್ಟ್‌

Vijay Deverakonda Scholarship News: ತಮ್ಮ ಹುಟ್ಟೂರು ತುಮ್ಮನಪೇಟೆಯಲ್ಲಿ ಹೊಸ ಫಾರ್ಮ್‌ಹೌಸ್‌ನ ಗೃಹಪ್ರವೇಶ ನೆರವೇರಿಸಿದ ನಟ ವಿಜಯ್ ದೇವರಕೊಂಡ, ಇದೇ ಸಂದರ್ಭದಲ್ಲಿ ಸರ್ಕಾರಿ ಮಕ್ಕಳಿಗೆ ವಿಶೇಷ ಗಿಫ್ಟ್ ಘೋಷಿಸಿದ್ದಾರೆ. 'ದೇವರಕೊಂಡ ಚಾರಿಟಬಲ್ ಟ್ರಸ್ಟ್' ಮೂಲಕ ಅಚ್ಚಂಪೇಟೆ ವಿಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿವೇತನ' ನೀಡುವುದಾಗಿ ತಿಳಿಸಿದ್ದಾರೆ.

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಸೋಮವಾರ (ಮಾ.2) ತೆಲಂಗಾಣದ ತಮ್ಮ ಹುಟ್ಟೂರಾದ ಆಚಂಪೆಟ್ ತಾಲ್ಲೂಕಿನ ತುಮ್ಮನಪೇಟೆಗೆ ಭೇಟಿ ನೀಡಿದ್ದರು. ತುಮ್ಮನಪೇಟೆಯಲ್ಲಿ ವಿಜಯ್‌ ಅವರು ಹೊಸದಾಗಿ ಒಂದು ಫಾರ್ಮ್‌ಹೌಸ್‌ ನಿರ್ಮಾಣ ಮಾಡಿದ್ದಾರೆ. ಹಾಗಾಗಿ, ಮದುವೆ ಬಳಿಕ ಅದರ ʻಗೃಹಪ್ರವೇಶ’ ಮತ್ತು ‘ಸತ್ಯನಾರಾಯಣ ವ್ರತ’ ಪೂಜೆಯನ್ನು ನೆರವೇರಿಸಿದ್ದಾರೆ. ಹುಟ್ಟೂರಿಗೆ ಬಂದ ವಿಜಯ್‌ಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ಒಂದು ಸೂಪರ್‌ ಗಿಫ್ಟ್‌ ಅನ್ನು ವಿಜಯ್‌ ಘೋಷಣೆ ಮಾಡಿದ್ದಾರೆ.

ಸರ್ಕಾರಿ ಶಾಲೆ ಮಕ್ಕಳಿಗೆ 'ವಿದ್ಯಾರ್ಥಿವೇತನ'

ಹೌದು, ತೆಲಂಗಾಣದ ಅಚ್ಚಂಪೇಟೆ ತಾಲ್ಲೂಕಿನ ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿವೇತನ' ಯೋಜನೆಯನ್ನು ವಿಜಯ್‌ ಘೋಷಿಸಿದ್ದಾರೆ. "ನನ್ನ ದೇವರಕೊಂಡ ಚಾರಿಟಬಲ್ ಟ್ರಸ್ಟ್ ಮೂಲಕ ತೆಲಂಗಾಣದ ಅಚ್ಚಂಪೇಟೆ ವಿಭಾಗದ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇನೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುವ ಮತ್ತು ಆರ್ಥಿಕ ಹೊರೆಯಿಲ್ಲದೆ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ" ಎಂದು ವಿಜಯ್‌ ದೇವರಕೊಂಡ ಹೇಳಿದ್ದಾರೆ.

Virosh Wedding: ಕೊನೆಗೂ ರಶ್ಮಿಕಾ ಮಂದಣ್ಣರ ಇದೊಂದು ಆಸೆ ಈಡೇರಿಸಿದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಅವರ ನಡೆಯನ್ನು ರಶ್ಮಿಕಾ ಶ್ಲಾಘಿಸಿದ್ದಾರೆ. ವಿಜಯ್ ಅವರ ತಾಯಿ ಕೂಡ ಭಾವುಕರಾದರು. ವಿಜಯ್‌ ಘೋಷಣೆ ಮಾಡುತ್ತಿದ್ದಂತೆಯೇ ಜನರು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಇದೇ ವೇಳೆ ಗ್ರಾಮಕ್ಕೆ ಆಗಾಗ ಭೇಟಿ ನೀಡುವುದಾಗಿ ತಮ್ಮ ಹುಟ್ಟೂರಿನ ಜನರಿಗೆ ವಿಜಯ್ ಭರವಸೆ ನೀಡಿದ್ದಾರೆ. ವಿಜಯ್‌ ದೇವರಕೊಂಡ ನಡೆಯನ್ನು ಕೊಂಡಾಡಿರುವ ಜನರು, "ನೀವು ನಿಜವಾದ ಹೀರೋ.." ಎಂದು ಹೊಗಳಿದ್ದಾರೆ.

ದೇಶಾದ್ಯಂತ ಫ್ಯಾನ್ಸ್‌ಗೆ ಸಿಹಿ ವಿತರಣೆ, ದೇವಸ್ಥಾನಗಳಲ್ಲಿ ಅನ್ನದಾನ ಏರ್ಪಡಿಸಿದ 'ವಿರೋಶ್' ಜೋಡಿ; ವಿಜಯ್ ದೇವರಕೊಂಡ - ರಶ್ಮಿಕಾಗೆ ವ್ಯಾಪಕ ಮೆಚ್ಚುಗೆ

ಇನ್ನು, ಮದುವೆಯಲ್ಲಿ ತುಮ್ಮನಪೇಟೆ ಗ್ರಾಮದ ಸುಮಾರು 2000 ಜನರಿಗೆ ವಿಜಯ್‌ ದೇವರಕೊಂಡ ಊಟದ ವ್ಯವಸ್ಥೆ ಮಾಡಿದ್ದರು. ಊರಿನ ಜನರಿಗೆ ವಿತರಣೆಯನ್ನು ಕೂಡ ಮಾಡಿದ್ದಾರೆ. ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ಊರಿಗೆ ಆಗಮಿಸುತ್ತಿದ್ದಂತೆಯೇ ತುಮ್ಮನಪೇಟೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಮಾ.4ರಂದು ಆರತಕ್ಷತೆ

ಇನ್ನು, ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ವಿಜಯ್‌ ದೇವರಕೊಂಡ ಅವರ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ. ಮದುವೆಯನ್ನು ಖಾಸಗಿಯಾಗಿ ಮಾಡಿದ್ದರಿಂದ, ಅಂದು ಸಾಕಷ್ಟು ಮಂದಿ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು, ವಿವಿಧ ಭಾಷೆಯ ಸಿನಿಮಾ ನಿರ್ದೇಶಕರು, ಆಪ್ತರು, ಸ್ನೇಹಿತರು ಆಗಮಿಸಲಿದ್ದಾರೆ. ವಿರೋಶ್‌ ವೆಡ್ಡಿಂಗ್‌ ರಿಸೆಪ್ಷನ್‌ಗೆ ಸಾಕಷ್ಟು ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.