ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

8 ವರ್ಷಗಳ ಹಿಂದೆಯೇ ತೆರೆಮೇಲೆ ಶಾಸ್ತ್ರೋಕ್ತವಾಗಿ ನಡೆದಿತ್ತು ವಿಜಯ್‌ ದೇವರಕೊಂಡ - ರಶ್ಮಿಕಾ ಮದುವೆ; ವೈರಲ್‌ ಆಯ್ತು ವಿಡಿಯೋ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಂದು (ಫೆ.26) ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೋಗಳಿಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಮಧ್ಯೆ 2018ರ 'ಗೀತಾ ಗೋವಿಂದಂ' ಚಿತ್ರದ ಮದುವೆಯ ದೃಶ್ಯವೊಂದು ವೈರಲ್ ಆಗುತ್ತಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ದೂರದ ಉದಯಪುರದಲ್ಲಿ ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ಧಾರೆ. ತೆಲುಗು ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ವಿಜು - ರಶೀ ಸತಿಪತಿಗಳಾಗಿದ್ದಾರೆ. ಆದರೆ ಇವರ ಮದುವೆಯ ಫೋಟೋ- ವಿಡಿಯೋ ಎಲ್ಲಿಯೂ ಲೀಕ್‌ ಆಗಿಲ್ಲ. ಆದರೂ ಫ್ಯಾನ್ಸ್‌ ಮಾತ್ರ ಇವರ ಮದುವೆ ವಿಡಿಯೋವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಅದು ಹೇಗೆ ಸಾಧ್ಯ? ಸಾಧ್ಯವಿದೆ, ಆದರೆ ಇದು ಇಂದಿನದ್ದಲ್ಲ, 8 ವರ್ಷಗಳ ಹಿಂದಿನದ್ದು!

ವೈರಲ್‌ ಆಯ್ತು ಗೀತಾ ಗೋವಿಂದಂ ವಿಡಿಯೋ

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ʻಗೀತಾ ಗೋವಿಂದಂʼ ಸಿನಿಮಾದಲ್ಲಿ! ಇದೀಗ ಈ ಸಿನಿಮಾದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಚಿತ್ರದ "ತೆಲ್ಲ ತೆಲ್ಲ ವಾರೇ..." ಹಾಡಿನಲ್ಲಿ ರಶ್ಮಿಕಾ ವಧುವಿನ ಉಡುಪಿನಲ್ಲಿ ಬರುವುದು ಮತ್ತು ವಿಜಯ್ ದೇವರಕೊಂಡ ಅವರ ಕಲ್ಪನೆಯಲ್ಲಿ ತಾಳಿ ಕಟ್ಟುವ ದೃಶ್ಯವನ್ನು ನಿರ್ದೇಶಕ ಪರಶುರಾಮ್ ಅತ್ಯಂತ ರೋಮ್ಯಾಂಟಿಕ್ ಆಗಿ ಚಿತ್ರಿಸಿದ್ದರು. ಇದೀಗ ಈಗ ನಿಜಜೀವನದಲ್ಲೂ ಈ ಜೋಡಿ ಮದುವೆಯಾಗಿರುವುದನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಗೀತಾ ಗೋವಿಂದಂ ಸಿನಿಮಾದ ವೈರಲ್‌ ವಿಡಿಯೋ





Rashmika Vijay Wedding: ಕುಟುಂಬದೊಂದಿಗೆ ಉದಯಪುರಕ್ಕೆ ರಶ್ಮಿಕಾ-ವಿಜಯ್ ಪ್ರಯಾಣ! ಜೋಡಿ ಲುಕ್‌ ಕಂಡು ಫ್ಯಾನ್ಸ್‌ ಖುಷ್‌

"2026ರಲ್ಲಿ ನಡೆಯುವ ಈ ಘಟನೆಯನ್ನು ಎಂಟು ವರ್ಷಗಳ ಹಿಂದೆಯೇ ಊಹಿಸಿದ್ದ ಪರಶುರಾಮ್ ಒಬ್ಬ ವಿಜನರಿ ಡೈರೆಕ್ಟರ್..‌" ಎಂದು ಅಭಿಮಾನಿಗಳು ಪ್ರಶಂಸಿಸುತ್ತಿದ್ದಾರೆ. ʻಗೀತಾ ಗೋವಿಂದಂʼ ಸಿನಿಮಾದ ಕ್ಲಿಪ್‌ಗಳು ಈಗ ಎಲ್ಲೆಡೆ ಟ್ರೆಂಡ್ ಆಗುತ್ತಿವೆ. ವಿಜಯ್‌ ಮತ್ತು ರಶ್ಮಿಕಾ ಒಟ್ಟಿಗೆ ನಟಿಸಿದ್ದ ಮೊದಲ ಸಿನಿಮಾವೇ ಮದುವೆ ಕುರಿತಂತೆ ಇತ್ತು. ಚಿತ್ರದಲ್ಲೂ ಮದುವೆಯ ದೃಶ್ಯಗಳು ಇದ್ದಿದ್ದು, ಈಗ ನಿಜ ಬದುಕಿನಲ್ಲಿಯೂ ಅವರಿಬ್ಬರು ಮದುವೆ ಆಗಿದ್ದಾರೆ. ಅಂದು ತೆರೆಯ ಮೇಲೆ ಮದುವೆಯಾಗಿದ್ದ ಈ ಜೋಡಿ ಇಂದು ನಿಜ ಜೀವನದಲ್ಲೂ ಒಂದಾಗಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

Vijay Deverakonda: ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡ ರಶ್ಮಿಕಾ-ವಿಜಯ್; ಕಾರಣ ಇದು

ಗೀತಾ ಗೋವಿಂದಂ ಸಿನಿಮಾ ಬಗ್ಗೆ..

2018ರಲ್ಲಿ ಬಿಡುಗಡೆಯಾದ 'ಗೀತಾ ಗೋವಿಂದಂ' ಸಿನಿಮಾ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಕೇವಲ 5 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರ ವಿಶ್ವಾದ್ಯಂತ ಸುಮಾರು 130+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ರಶ್ಮಿಕಾ ಮತ್ತು ವಿಜಯ್‌ಗೆ ಟಾಲಿವುಡ್‌ನಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತ್ತು. ವಿಜಯ್ - ರಶ್ಮಿಕಾ ಕೆಮಿಸ್ಟ್ರಿ, ಪರಶುರಾಮ್ ನಿರ್ದೇಶನ ಮತ್ತು ಗೋಪಿ ಸುಂದರ್ ಅವರ ಸಂಗೀತ ಈ ಚಿತ್ರವನ್ನು ಕ್ಲಾಸಿಕ್ ಲವ್ ಸ್ಟೋರಿಯನ್ನಾಗಿ ಮಾಡಿತ್ತು.