ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramayana Movie: ರಾಮಾಯಣ ಚಿತ್ರದ ಸಂಭಾವನೆ ದಾನ ಮಾಡ್ತಾರಂತೆ ಈ ಖ್ಯಾತ ನಟ

Vivek Oberoi: ಸಾಥಿಯಾ, ಕ್ರಿಶ್ 3, ಶೂಟ್ ಔಟ್ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದ ವಿವೇಕ್ ಒಬೆರಾಯ್‌ ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಹೀರೊ ಎನಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಹಲವು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಇವರು ಈ ಬಾರಿ ತಮ್ಮ ಬಿಗ್ ಬಜೆಟ್ ಸಿನಿಮಾ ರಾಮಾಯಣದ ಸಂಭಾವನೆ ಮೊತ್ತವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ಈ ಸಲ ತಮ್ಮ ಸಂಭಾವನೆ ಮೊತ್ತವನ್ನೇ ದಾನವಾಗಿ ನೀಡಲು ಮುಂದಾಗಿದ್ದು ಅವರ ಈ ಸಮಾಜ ಸೇವೆಗೆ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ರಾಮಾಯಣ ಚಿತ್ರದ ಸಂಭಾವನೆ ದಾನ ಮಾಡ್ತಾರಂತೆ ಈ ಖ್ಯಾತ ನಟ

ವಿವೇಕ್‌ ಒಬೆರಾಯ್‌ -

Profile Pushpa Kumari Oct 30, 2025 3:42 PM

ನವದೆಹಲಿ: ಬಾಲಿವುಡ್ ನ ಖ್ಯಾತ ನಟ, ಉದ್ಯಮಿ ವಿವೇಕ್ ಒಬೆರಾಯ್ (Vivek Oberoi) ಅವರು ಕಾಮಿಡಿ, ಸೀರಿಯಸ್ ಎಲ್ಲ ಪಾತ್ರದಲ್ಲಿಯೂ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸಾಥಿಯಾ, ಕ್ರಿಶ್ 3, ಶೂಟ್ ಔಟ್ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದ ಅವರು ಸಿನಿಮಾ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಹೀರೊ ಎನಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಹಲವು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಇವರು ಈ ಬಾರಿ ತಮ್ಮ ಬಿಗ್ ಬಜೆಟ್ ಸಿನಿಮಾ ರಾಮಾಯಣದ(Ramayana Movie) ಸಂಭಾವನೆ ಮೊತ್ತವನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ಈ ಸಲ ತಮ್ಮ ಸಂಭಾವನೆ ಮೊತ್ತವನ್ನೇ ದಾನವಾಗಿ ನೀಡಲು ಮುಂದಾಗಿದ್ದು ಅವರ ಈ ಸಮಾಜ ಸೇವೆಗೆ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ರಾಮಾಯಣ ಸಿನಿಮಾವು ರಿಲೀಸ್ ಗೂ ಮೊದಲೇ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸುತ್ತಿರುವ ವಿಚಾರ ನಮಗೆಲ್ಲ ತಿಳಿದೆ ಇದೆ. ರಣ ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ವಿವೇಕ್ ರಾವಣನ ಸಹೋದರ ವಿಭೀಷ ಣನ (Vibhishan) ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದು ಬಿಗ್ ಬಜೆಟ್ ಸಿನಿಮಾವಾಗಿದ್ದು ಸಂಭಾವನೆ ಮೊತ್ತ ಕೂಡ ಭಾರೀ ಮೊತ್ತದಲ್ಲೇ ಇರಲಿದೆ. ಅಂತೆಯೇ ಈ ಸಿನಿಮಾಕ್ಕೆ ನೀಡುವ ಮೊತ್ತವನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ನಟ ವಿವೇಕ್ ಅವರೇ ಹೇಳಿಕೆ ನೀಡಿದ್ದಾರೆ‌.

ಇತ್ತೀಚಿನ ಖಾಸಗಿ ಮಾಧ್ಯಮ ಒಂದರ ಸಂದರ್ಶನ ಸಂದರ್ಭದಲ್ಲಿ ಅವರು ಈ ಬಗ್ಗೆ ಮಾತನಾಡಿ, ರಾಮಾಯಣ ಸಿನಿಮಾದಲ್ಲಿ ಅಭಿನಯಿಸಲು ನನಗೆ ಒಂದು ಪೈಸೆಯೂ ಬೇಡ, ಈ ಸಂಭಾವನೆ ಮೊತ್ತವನ್ನು ನಾನು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ದಾನ ಮಾಡಲು ಬಯ ಸುತ್ತೇನೆ. ಈ ಸಿನಿಮಾ ಮಾಡುತ್ತಿರುವ ಬಗ್ಗೆ ನನಗೆ ತುಂಬಾ ಖುಷಿ ಇದೆ, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಲಾಗುತ್ತಿದ್ದು ಇದಕ್ಕೆ ಎಲ್ಲರ ಬೆಂಬಲವೂ ಅಗತ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ:BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ಬಹುನಿರೀಕ್ಷಿತ ʼಬ್ರ್ಯಾಟ್ʼ ಚಿತ್ರ ಅ.31ಕ್ಕೆ ರಿಲೀಸ್‌

ಬಳಿಕ ಮಾತನಾಡಿ, ರಾಮಾಯಣ ಕುರಿತಾದ ಸಿನಿಮಾವು ಪೌರಾಣಿಕವೇ ಅಥವಾ ಅದು ಐತಿ ಹಾಸಿಕವೇ ಎಂಬ ಚರ್ಚೆ ಈ ಹಿಂದಿನಿಂದಲೂ ನಡೆಯುತ್ತಿದೆ. ಆದರೆ, ನನಗೆ ಇದು ಐತಿಹಾಸಿಕ ಎಂಬ ಭಾವನೆ ಇದೆ. ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ವಿಎಫ್ಎಕ್ಸ್ (VFX) ಕಂಪೆನಿಯ ಸಹಯೋಗ ದೊಂದಿಗೆ ರಾಮಾಯಣ ಚಿತ್ರವು ಸಿದ್ಧವಾಗುತ್ತಿದೆ. ನಟರಾದ ಯಶ್, ರಾಕುಲ್ ಪ್ರೀತ್ ಸಿಂಗ್ ಜೊತೆ ಅಭಿನಯಿಸಲು ಮತ್ತು ನಿರ್ಮಾಪಕ ನಮಿತ್ , ನಿರ್ದೇಶಕ ನಿತೇಶ್ ಅವರೊಂದಿಗೆ ಕೆಲಸ ಮಾಡಲು ನನಗೆ ಬಹಳ ಖುಷಿ ಇದೆ. ಸಿನಿಮಾದಲ್ಲಿ ನನ್ನ ಪಾತ್ರದ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ ಎಂದು ನಟ ವಿವೇಕ್ ಅವರು ಹೇಳಿದ್ದಾರೆ.

ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಅಂತೆಯೇ ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿವೇಕ್ ಒಬೆರಾಯ್ ಅವರು ವಿಭೀಷಣನ ಪಾತ್ರದಲ್ಲಿ, ರವಿ ದುಬೆ ಅವರು ಲಕ್ಷ್ಮಣನ ಪಾತ್ರ, ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರ, ಕಾಜಲ್ ಅಗರ್ವಾಲ್ ಅವರು ಮಂಡೋದರಿ ಪಾತ್ರ ರಾಕುಲ್ ಪ್ರೀತ್ ಸಿಂಗ್ ಅವರು ಶೂರ್ಪನಖಿಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗಲಿದ್ದು ಮೊದಲ ಭಾಗವು 2026ರ ದೀಪಾವಳಿ ಹಾಗೂ ಎರಡನೇ ಭಾಗ 2027ರ ದೀಪಾವಳಿಯಂದು ಬಿಡುಗಡೆಯಾಗಲಿದೆ.