Gauribidanur News: ಗ್ರಾಚ್ಯುಟಿ ಹಣವನ್ನು ಕೂಡಲೇ ನೀಡಬೇಕು : ಸಿದ್ದಗಂಗಪ್ಪ
ಇಂತಹ ಯೋಜನೆಯ ಅಭಿವೃದ್ಧಿಗೆ 150 ಹಾಗೂ 75 ರೂಗಳಿಂದ ಹಿಡಿದು ಸಾವಿರಾರು ಜನ ಕಾರ್ಯ ಕರ್ತರು ಸಹಾಯಕಿಯರು ದುಡಿದಿದ್ದಾರೆ. 25 ಏಪ್ರಿಲ್ 2022 ರಂದು ಸುಪ್ರೀಂಕೋರ್ಟ್ ಅಂಗನ ವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ 1972 ಕಾಯಿದೆ ಅನ್ವಯಿಸುತ್ತವೆ 303 ನಿಬಂಧನೆಗಳು ತೀರ್ಪನ್ನು ನೀಡಿದೆ.
-
Ashok Nayak
Oct 30, 2025 9:09 PM
ಗೌರಿಬಿದನೂರು: 2011 ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸುಪ್ರೀಂಕೋರ್ಟ್ ಆದೇಶದಂತೆ 1972 ರ ಗ್ರಾಚ್ಯುಟಿ ಮೊತ್ತವನ್ನು ನೀಡಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸಿದ್ದಗಂಗಪ್ಪ ಸರ್ಕಾರವನ್ನು ಆಗ್ರಹಿಸಿದರು.
ಅವರು ನಗರದ ಸಿಡಿಪಿಓ ಕಚೇರಿ ಎದುರು ತಮ್ಮ ನ್ಯಾಯ ಸಮ್ಮತ ಬೇಡಿಕೆಗಳಿಗೆ ಪ್ರತಿಭಟನೆ ನಡೆಸುತ್ತಿದ್ದ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡುತ್ತಾ 1975 ಅಕ್ಟೋಬರ್ 2 ರಂದು ಸಮಗ್ರ ಇಂದು ಯೋಜನೆ ಶಿಶು ಅಭಿವೃದ್ಧಿ ಯೋಜನೆ ಶಿಶುವಿನಂತೆ ಇತ್ತು ಸದರಿ ಹೆಮ್ಮರವಾಗಿ ಬೆಳೆದು ರಾಜ್ಯದಲ್ಲಿ ಸುಮಾರು 50 ಲಕ್ಷ ಫಲಾನುಭವಿಗಳು ಇದ್ದಾರೆ ಹಾಗೂ ಮಾನವ ಸಂಪನ್ಮೂಲ ಬೆಳವಣಿಗೆಯನ್ನು ಖಾತ್ರಿ ಪಡಿಸುವ ಯೋಜನೆಯಾಗಿ ಬೆಳೆದಿದೆ.
ಇಂತಹ ಯೋಜನೆಯ ಅಭಿವೃದ್ಧಿಗೆ 150 ಹಾಗೂ 75 ರೂಗಳಿಂದ ಹಿಡಿದು ಸಾವಿರಾರು ಜನ ಕಾರ್ಯ ಕರ್ತರು ಸಹಾಯಕಿಯರು ದುಡಿದಿದ್ದಾರೆ. 25 ಏಪ್ರಿಲ್ 2022 ರಂದು ಸುಪ್ರೀಂಕೋರ್ಟ್ ಅಂಗನ ವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ 1972 ಕಾಯಿದೆ ಅನ್ವಯಿಸುತ್ತವೆ 303 ನಿಬಂಧನೆಗಳು ತೀರ್ಪನ್ನು ನೀಡಿದೆ. ಸದರಿ ತೀರ್ಪನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿ 2023 ಜನವರಿಯಲ್ಲಿ ಪಗರತಿಭಟನೆ ನಡೆಸಿದ ನಂತರ 2/2/2023 ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2023 ಏಪ್ರಿಲ್ ನಿಂದ ಗ್ರಾಚ್ಯುಟಿ ಮೊತ್ತವನ್ನು ಜಾರಿ ಮಾಡಿದೆ.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಈ ಆದೇಶ 2011 ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ ಸುಮಾರು 10.311 ಕಾರ್ಯಕರ್ತೆ ಯರು 11.980 ಸಹಾಯಕಿಯರಿಗೂ ಅನ್ವಯಿಸಬೇಕು ಎಂಬ ಸತತ ಒತ್ತಾಯಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸುಮಾರು 183 ಕೋಟಿ ಅನುದಾನದ ಬಿಡುಗಡೆಗಾಗಿ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಆದರೆ, ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡದೇ ಮೀನಾಮೇಷ ಎಣಿಸುತ್ತಿದೆ. ಆದ್ದರಿಂದ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು..
ಪ್ರತಿಭಟನೆಯಲ್ಲಿ ವೆಂಕಟೇಶ್. ಬಾಬುರೆಡ್ಡಿ. ವೆಂಕಟಲಕ್ಷಮ್ಮ. ಜಯಮಂಗಲ, ರಾಧಮ್ಮ. ನೇತ್ರಾವತಿ, ಹಾಜರಿದ್ದರು.