ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ500 ರೂಪಾಯಿ ಸಂಬಳಕ್ಕಾಗಿ ಮದುವೆ ಮನೆಗಳಲ್ಲಿ 8 ಗಂಟೆ ನಿಲ್ಲುತ್ತಿದ್ದೆʼ; ಕಷ್ಟದ ದಿನಗಳನ್ನು ನೆನೆದ ನಟಿ ಸಮಂತಾ ರುತ್‌ ಪ್ರಭು

ನಟಿ ಸಮಂತಾ ತಮ್ಮ ಸ್ವಂತ ನಿರ್ಮಾಣದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರದ ವೇಳೆ ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗಾಗಿ ಮದುವೆ ಮನೆಗಳಲ್ಲಿ 500 ರೂಪಾಯಿ ಸಂಬಳಕ್ಕೆ 8 ಗಂಟೆಗಳ ಕಾಲ ನಿಂತು ಕೆಲಸ ಮಾಡುತ್ತಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಿಗೆ ಸಂಬಂಧಿಸಿದ ಕೆಲವು ರೋಚಕ ವಿಷಯಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ತಾವು ಆಚಾನಕ್‌ ಆಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಒಂದು ವೇಳೆ ತಮ್ಮ ಬಾಲ್ಯದ ಕನಸು ನನಸಾಗಿದ್ದರೆ ಇಂದು ಚಿತ್ರರಂಗದಲ್ಲೇ ನಾನು ಇರುತ್ತಿರಲಿಲ್ಲ ಎಂಬ ವಿಚಾರವನ್ನು ಕೂಡ ಅವರು ಹೇಳಿಕೊಂಡಿದ್ದಾರೆ.

ಸಮಂತಾ ನಿರ್ಮಿಸಿ, ನಟಿಸಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರದ ವೇಳೆ ನಿರೂಪಕಿ ಸುಮಾ ಕನಕಾಲ ಒಂದು ಚಾಟ್‌ ಶೋ ನಡೆಸಿಕೊಟ್ಟಿದ್ದರು. ಈ ವೇಳೆ ಸಮಂತಾ ಅವರೊಂದಿಗೆ ನಂದಿನಿ ರೆಡ್ಡಿ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮಂತಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. "ಕಾಲೇಜು ದಿನಗಳಲ್ಲಿ ತಮ್ಮ ಪಾಕೆಟ್ ಮನಿಗಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ" ಎಂದು ಸಮಂತಾ ಹೇಳಿಕೊಂಡಿದ್ದಾರೆ.

ದಿನಕ್ಕೆ 500 ರೂ. ಸಂಬಳ!

"ಹೋಟೆಲ್‌ಗಳಲ್ಲಿ ನಡೆಯುವ ಅದ್ದೂರಿ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಬರುವ ಅತಿಥಿಗಳನ್ನು ಸ್ವಾಗತಿಸುವ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತಿದ್ದೆ. ಆ ಕೆಲಸಕ್ಕಾಗಿ ದಿನಕ್ಕೆ ನನಗೆ 500 ರೂಪಾಯಿ ಸಂಭಾವನೆ ಸಿಗುತ್ತಿತ್ತು. ಆದರೆ ಆ 500 ರೂಪಾಯಿಗಾಗಿ ಸರಿಸುಮಾರು 8 ಗಂಟೆಗಳ ಕಾಲ ಸತತವಾಗಿ ನಿಂತುಕೊಳ್ಳಬೇಕಾಗುತ್ತಿತ್ತು. ಆ ಸಮಯದಲ್ಲಿ ಆರ್ಥಿಕ ಸಂಕಷ್ಟಗಳಿದ್ದರೂ, ಜೀವನದಲ್ಲಿ ಹೇಗಾದರೂ ಮಾಡಿ ಒಂದು ಉತ್ತಮ ಸ್ಥಾನ ತಲುಪಬೇಕೆಂಬ ಹಠ ತನ್ನಲ್ಲಿ ಬಲವಾಗಿತ್ತು" ಎಂದು ಸಮಂತಾ ಸ್ಪಷ್ಟಪಡಿಸಿದ್ದಾರೆ.

Samantha: ರಾಜ್ ಜೊತೆ ಸಮಂತಾ, ಶೋಭಿತಾ ಜೊತೆ ನಾಗ ಚೈತನ್ಯ; ಒಂದೇ ಇವೆಂಟ್‌ನಲ್ಲಿ ಭಾಗಿ!

ಆಸ್ಟ್ರೇಲಿಯಾಕ್ಕೆ ಹೋಗೋ ಪ್ಲ್ಯಾನ್‌ ಇತ್ತು

ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಬೇಕೆಂದು ಸಮಂತಾ ತುಂಬಾ ಆಸೆ ಪಟ್ಟಿದ್ದರು, ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಆ ಕನಸು ನನಸಾಗಲಿಲ್ಲ. "ಹೌದು, ನಾನು ವಿದೇಶದಲ್ಲಿ ಓದಬೇಕೆಂದು ಅಂದುಕೊಂಡಿದ್ದೆ. ಆದರೆ ಮನೆಯಲ್ಲಿ ಅಷ್ಟೊಂದು ಖರ್ಚು ಭರಿಸುವ ಪರಿಸ್ಥಿತಿ ಇಲ್ಲದ ಕಾರಣ ಹೋಗಲು ಸಾಧ್ಯವಾಗಲಿಲ್ಲ. ಆ ನಂತರವೇ ಮಾಡೆಲಿಂಗ್ ಕ್ಷೇತ್ರದತ್ತ ಗಮನ ಹರಿಸಿ, ಆಡಿಷನ್‌ಗಳನ್ನು ನೀಡಲು ಪ್ರಾರಂಭಿಸಿದೆ. ಒಂದು ವೇಳೆ ಅಂದು ನಾನು ಆಸ್ಟ್ರೇಲಿಯಾಕ್ಕೆ ಹೋಗಿದ್ದರೆ ಖಂಡಿತವಾಗಿಯೂ ಈ ಗ್ಲಾಮರ್ ಪ್ರಪಂಚದಲ್ಲಿ ಇರುತ್ತಿರಲಿಲ್ಲ" ಎಂದು ಸಮಂತಾ ಹೇಳಿದ್ದಾರೆ.

Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?

ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಮೇಲೆ ನಟಿ ಸಮಂತಾ ಅವರು 'ಮಯೋಸೈಟಿಸ್' ಎಂಬ ಕಾಯಿಲೆಗೆ ತುತ್ತಾಗಿದ್ದರೂ, ಆ ಕಾಯಿಲೆಯಿಂದ ಗುಣಮುಖರಾದ ಸಮಂತಾ, ಆನಂತರ ನಿರ್ದೇಶಕ ರಾಜ್‌ ನಿಡಿಮೋರು ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಅಲ್ಲದೆ, ತಮ್ಮದೇ ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಎಂಬ ಬ್ಯಾನರ್‌ ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ನಟನೆಯನ್ನ ಮುಂದುವರಿಸಿದ್ದಾರೆ. ಪ್ರಸ್ತುತ ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ಅವರು ನಟಿಸಿದ್ದು, ಆ ಸನಿಮಾವು, ಜೂನ್‌ 19 ರಂದು ತೆರೆಗೆ ಬರಲಿದೆ.