ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಕಾಂತಾರ ಚಾಪ್ಟರ್ 1ನಲ್ಲಿ ಪರಶುರಾಮರ ಪ್ರಸ್ತಾಪ ಏಕಿಲ್ಲ?: ಖಡಕ್ ಉತ್ತರ ಕೊಟ್ಟ ರಿಷಭ್ ಶೆಟ್ಟಿ

ಸೆ. 22 ರಂದು ಕಾಂತಾರ ಚಾಪ್ಟರ್ 1ರ ಟ್ರೈಲರ್ ಬಿಡುಗಡೆ ಮಾಡಲಿದೆ. ಟ್ರೈಲರ್ಗೆ ಅಮೋಘ ರೆಸ್ಪಾನ್ಸ್ ಸಿಕ್ಕಿದ ಬಳಿಕ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಇದರಲ್ಲಿ ರಿಷಭ್ ಶೆಟ್ಟಿ ಪತ್ರಕರ್ತರು ಕೇಳಿದ ಅನೇಲ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಕಾಂತಾರ ಚಾಪ್ಟರ್ 1ನಲ್ಲಿ ಪರಶುರಾಮರ ಪ್ರಸ್ತಾಪ ಏಕಿಲ್ಲ?

Kantara Chapter 1 and Rishab Shetty -

Profile Vinay Bhat Sep 23, 2025 12:34 PM

ಕೇವಲ ಕನ್ನಡ ಸಿನಿರಸಿಕರು ಮಾತ್ರವಲ್ಲದೆ ಇಡೀಗ ವಿಶ್ವವೇ ಕಾತುರದಿಂದ ಕಾಯುತ್ತಿರುವ ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ಇದೇ ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ತೆರೆ ಕಾಣಲಿದೆ. ಇದಕ್ಕೂ ಮುನ್ನ ಸೆ. 22 ರಂದು ಕಾಂತಾರ ಚಾಪ್ಟರ್ 1ರ ಟ್ರೈಲರ್ ಬಿಡುಗಡೆ ಮಾಡಲಿದೆ. ಟ್ರೈಲರ್​ಗೆ ಅಮೋಘ ರೆಸ್ಪಾನ್ಸ್ ಸಿಕ್ಕಿದ ಬಳಿಕ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಇದರಲ್ಲಿ ರಿಷಭ್ ಶೆಟ್ಟಿ ಪತ್ರಕರ್ತರು ಕೇಳಿದ ಅನೇಲ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಕಾಂತಾರ ಚಾಪ್ಟರ್ 1ರ ಟ್ರೈಲರ್‌ ನೋಡಿ ಅನೇಕರು ಫಿದಾ ಆಗಿದ್ದಾರೆ. ಅದರಲ್ಲೂ ಕೊನೆಯಲ್ಲಿ ರಿಷಬ್ ಶೆಟ್ಟಿ ಪಕ್ಕದಲ್ಲಿ ತ್ರಿಶೂಲ ಹಿಡಿದು, ಉರಿಯುವ ಕಣ್ಣುಗಳ ದೃಶ್ಯಗಳು ರೋಮಾಂಚನವನ್ನು ಉಂಟುಮಾಡುತ್ತವೆ. ಟೀಸರ್‌ ರಿಲೀಸ್‌ ಆದಾಗ ಎಲ್ಲರೂ ರಿಷಬ್‌ ಪರಶುರಾಮ ಪಾತ್ರದಲ್ಲಿ ನಟಿಸಿದ್ದಾರೆ ಅಂತ ಅಂದುಕೊಂಡಿದ್ದರು. ಆದರೆ, ಈಗ ಶಿವನ ರೂಪದಲ್ಲಿ ಬಂದಿದ್ದಾರೆ.

ಕಾಂತಾರ ಚಾಪ್ಟರ್ 1 ರಲ್ಲಿ ಪರಶುರಾಮನ ಪ್ರಸಾಪ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಿಷಭ್, ‘‘ಹಾಗೇನಿಲ್ಲ.. ಪರಶುರಾಮ ಸೃಷ್ಟಿ ಎನ್ನುವಂತದ್ದು ಬೆರ್ಮೆರ್ ಸೃಷ್ಟಿ ಎನ್ನುವಂತದ್ದು ಇದು ಅವರವರ ನಂಬಿಕೆಗೆ ಬಿಟ್ಟಿದ್ದು. ನಾವು ಟ್ರೈಲರ್​ನಲ್ಲಿ ಈ ವಿಚಾರವನ್ನು ತಂದಿಲ್ಲ.. ಸಿನಿಮಾದಲ್ಲಿ ಇದೆಯಾ ಅಂತ ನೀವು ಸಿನಿಮಾನೇ ನೋಡಬೇಕು. ನನಗೆ ಈ ಎರಡೂ ವಿಚಾರದಲ್ಲಿ ನಂಬಿಕೆ ಇದೆ. ಈ ಎರಡರಲ್ಲೂ ಏನೇನು ಒಳ್ಳೆಯ ವಿಷಯಗಳು ಇವೆಯೊ ಅದನ್ನು ತೆಗೊಂದು ಮುಂದಕ್ಕೆ ಹೋಗುತ್ತ ಇರುತ್ತೇನೆ’’ ಎಂದು ಹೇಳಿದ್ದಾರೆ.



ರಿಷಬ್‌ ಶೆಟ್ಟಿ ಕಾಂತಾರ ಚಾಪ್ಟರ್‌ 1 ಚಿತ್ರದ ಶೂಟಿಂಗ್‌ ಆರಂಭಿಸಿದಾಗ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ತಾವು ನಟಿಸುವುದನ್ನು ಹೊರತುಪಡಿಸಿ ಬೇರೆ ಯಾವೆಲ್ಲ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನೂ ತಿಳಿಸಿರಲಿಲ್ಲ. ಇತ್ತೀಚೆಗೆ ಒಂದೊಂದೇ ಪೋಸ್ಟರ್‌ ರಿಲೀಸ್‌ ಮಾಡಿ ಪಾತ್ರವರ್ಗವನ್ನು ಪರಿಚಯಿಸಿದ್ದರು. ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದು, ಮುಖ್ಯ ಪಾತ್ರಗಳಲ್ಲಿ ಗುಲ್ಶನ್‌ ದೇವಯ್ಯ, ರಾಕೇಶ್‌ ಪೂಜಾರಿ, ಪ್ರಕಾಶ್‌ ತುಮ್ಮಿನಾಡ್‌ ಮತ್ತಿತರರು ಅಭಿನಯಿಸಿದ್ದಾರೆ.

Kantara: Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಹಾಡುಗಳು ಇನ್ನೂ ಯಾಕೆ ರಿಲೀಸ್ ಆಗಿಲ್ಲ: ಈ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?