Katrina Kaif: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂತಾನ ಭಾಗ್ಯ ಪೂಜೆ; ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಕತ್ರಿನಾ-ವಿಕ್ಕಿ
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ (Vicky Kaushal) ಪೋಷಕರಾಗುವ ಕುರಿತು ಹಲವು ಆಗಾಗ ಸುದ್ದಿ ಹರಿದಾಡುತ್ತಿರುತ್ತದೆ. ಇದೀಗ ದಂಪತಿಯೇ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಪ್ರೆಗ್ನೆಸ್ಸಿ ಕುರಿತು ಈ ಜೋಡಿ ಇನ್ಸ್ಟಾಗ್ರಾಂನಲ್ಲಿ ಅಧಿಕೃತ ಘೋಷಣೆ ಮಾಡಿದೆ.

-

ಮುಂಬೈ: ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ (Vicky Kaushal) ಪೋಷಕರಾಗುವ ಕುರಿತು ಹಲವು ಆಗಾಗ ಸುದ್ದಿ ಹರಿದಾಡುತ್ತಿರುತ್ತದೆ. (Katrina Kaif) ಇದೀಗ ದಂಪತಿಯೇ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಪ್ರೆಗ್ನೆಸ್ಸಿ ಕುರಿತು ಈ ಜೋಡಿ ಇನ್ಸ್ಟಾಗ್ರಾಂನಲ್ಲಿ ಅಧಿಕೃತ ಘೋಷಣೆ ಮಾಡಿದೆ. ಬಿಳಿ ಬಣ್ಣದ ಉಡುಗೆ ತೊಟ್ಟಿರುವ ಕತ್ರಿನಾ ಅವರ ಬೇಬಿ ಬಂಬ್ ಮೇಲೆ ವಿಕ್ಕಿ ಕೈ ಇಟ್ಟುಕೊಂಡು ಫೋಟೋ ತೆಗೆಸಿದ್ದಾರೆ. ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷದಿಂದ ಆಚರಿಸಲು ಸಿದ್ಧರಾಗಿದ್ದೇವೆಂದು ಅವರು ಬರೆದುಕೊಂಡಿದ್ದಾರೆ. ಕತ್ರಿನಾ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಮತ್ತು ಮಗು ಅಕ್ಟೋಬರ್-ನವೆಂಬರ್‌ನಲ್ಲಿ ಜನಿಸಲಿದೆ ಎಂದು ಅವರ ಆಪ್ತ ಬಳಗವೊಂದು ತಿಳಿಸಿತ್ತು.
ಇದೇ ವರ್ಷದ ಮೇ ತಿಂಗಳಿನಲ್ಲಿ, ಕತ್ರಿನಾ ತನ್ನ ಪತಿ ಹಾಗೂ ನಟ ವಿಕ್ಕಿ ಕೌಶಲ್ ಅವರೊಂದಿಗೆ ಲಂಡನ್‌ನಲ್ಲಿ ಓಡಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಕತ್ರಿನಾ ಕೈಫ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರಬಹುದು. ಹಾಗಾಗಿ ಯಾರಿಗೂ ಅನುಮಾನ ಬಾರದಂತೆ ದೊಡ್ಡದಾದ ಬ್ಲೇಜರ್ ಧರಿಸಿರಿವುದನ್ನು ಫೋಟೋದಲ್ಲಿ ನಾವು ಕಾಣಬಹುದು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು. ಮಾಧ್ಯಮ ಮತ್ತು ಫ್ಯಾನ್ಸ್ಗಳಿಗೆ ಗೊತ್ತಾಗಬಾರದರು ಎಂಬ ಕಾರಣದಿಂದ ವಿಕ್ಕಿ ಕೌಶಲ್ ಪತ್ನಿಯನ್ನು ಲಂಡನ್ಗೆ ತೆರಳಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Katrina Kaif: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ- ವಿಕ್ಕಿ ದಂಪತಿ; ಆಪ್ತ ಬಳಗ ಹೇಳಿದ್ದೇನು?
ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ 2021 ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದ ಸುಂದರವಾದ ಸ್ಥಳದಲ್ಲಿ ವಿವಾಹವಾಗಿದ್ದರು. ಅದಾದ ಬಳಿಕ ಇಬ್ಬರು ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸಂತಾನ ಪೂಜೆ ಮಾಡಿದ್ದರು. ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದರು. ಇದಾದ ಬಳಿಕ ಕತ್ರಿನಾ ಸಿಹಿ ಸುದ್ದಿ ನೀಡಿದ್ದಾರೆ.