ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಹಾಡುಗಳು ಇನ್ನೂ ಯಾಕೆ ರಿಲೀಸ್ ಆಗಿಲ್ಲ: ಈ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

Kantara: Chapter 1: ಇದೀಗ ಇದೇ ಅಕ್ಟೋಬರ್ 2ಕ್ಕೆ ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಲಿದ್ದು ಸೆ. 22ರಂದು ಇದರ ಟ್ರೇಲರ್ ಅನ್ನು ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಇದರ ಪತ್ರಿಕಾಗೋಷ್ಠಿಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ತಂಡ ಆಗಮಿಸಿದ್ದು ಈ ವೇಳೆ ಅನೇಕ ವಿಚಾರದ ಬಗ್ಗೆ ಮಾತ ನಾಡಿದ್ದಾರೆ. ಕಾಂತಾರಾ ಸಿನಿಮಾದ ಹಾಡುಗಳು ಯಾಕೆ ಬಿಡುಗಡೆಯಾಗಿಲ್ಲ‌ ಎಂಬುದಕ್ಕೂ ಕೂಡ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾದ ಹಾಡುಗಳು ಇನ್ನೂ ಯಾಕೆ ರಿಲೀಸ್ ಆಗಿಲ್ಲ ಗೊತ್ತಾ?

ಕಾಂತಾರ ಚಾಪ್ಟರ್ 1 -

Profile Pushpa Kumari Sep 23, 2025 12:30 PM

ನವದೆಹಲಿ: ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತು. ಜನರನ್ನು ನಿರೀಕ್ಷೆಗೂ ಮೀರಿ ತನ್ನತ್ತ ಸೆಳೆದ ಈ ಸಿನಿಮಾ ಬಳಿಕ ಬೇರೆ ಭಾಷೆಯಲ್ಲಿ ಕೂಡ ರಿಲೀಸ್ ಆಯಿತು. ಯಾವುದೇ ಪ್ರಚಾರ ಇಲ್ಲದೆ ಈ ಸಿನಿಮಾ ಹಿಟ್ ಲಿಸ್ಟ್ ಗಳಿಸಿತ್ತು. ವಿಭಿನ್ನ ಕಥೆ, ಛಾಯಾಗ್ರಹಣ ಮತ್ತು ಮ್ಯೂಸಿಕಲ್ ಹಿಟ್ ಈ ಸಿನಿಮಾದ ಪ್ಲಸ್ ಪಾಯಿಂಟ್‌ ಆಗಿದ್ದು ಇದರ ಪಾರ್ಟ್ 2 ತೆರೆಮೇಲೆ ಬರಬೇಕು‌ ಎಂದು ಬಹುತೇಕ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಆ ಬಳಿಕ‌ ಕಾಂತಾರ ಸಿನಿಮಾ ಪ್ರಿಕ್ವೆಲ್ ತರಲು ನಟ ರಿಷಬ್ ಶೆಟ್ಟಿ ಒಪ್ಪಿಕೊಂಡಿದ್ದು ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲ ಈ ಸಿನಿಮಾದ ಕೆಲಸ ಕಾರ್ಯ ನಡೆಯುತ್ತಿದೆ. ಇದೀಗ ಇದೇ ಅಕ್ಟೋಬರ್ 2ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು ಸೆ. 22ರಂದು ಇದರ ಟ್ರೇಲರ್ ಅನ್ನು ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಇದರ ಪತ್ರಿಕಾಗೋಷ್ಠಿಯಲ್ಲಿ ಕಾಂತಾರ ಚಾಪ್ಟರ್ 1 (Kantara: Chapter 1) ಸಿನಿಮಾ ತಂಡ ಆಗಮಿಸಿದ್ದು ಈ ವೇಳೆ ಅನೇಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಕಾಂತಾರಾ ಸಿನಿಮಾದ ಹಾಡುಗಳು ಯಾಕೆ ಬಿಡುಗಡೆಯಾಗಿಲ್ಲ‌ ಎಂಬುದಕ್ಕೂ ಕೂಡ ರಿಷಭ್ ಸ್ಪಷ್ಟನೆ ನೀಡಿದ್ದಾರೆ.

ನಟ ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿದ್ದ ಕಾಂತಾರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಕಾಂತಾರ ಚಿತ್ರ ರಿಲೀಸ್ ಆಗಿದ್ದಾಗ ಅದರ ಹಾಡುಗಳು ಕೂಡ ಫೇಮಸ್ ಆಗಿತ್ತು. ಸಿನಿಮಾ ರಿಲೀಸ್‌ಗೂ ಮುನ್ನವೇ ಕೆಲವು ಹಾಡು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿ ಹಾಡುಗಳು ಬಿಡುಗಡೆ ಆಗಿಲ್ಲ. ಮೊದಲು ಟ್ರೇಲರ್ ಲಾಂಚ್ ಮಾಡ ಲಾಗಿದೆ. ಇದರ ಬಗ್ಗೆ ಮಾಧ್ಯಮದವರು ಕಾಂತಾರ ಸಿನಿಮಾ ತಂಡಕ್ಕೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ನಟ ರಿಷಬ್ ಶೆಟ್ಟಿ ಅವರೇ ಉತ್ತರ ನೀಡಿದ್ದಾರೆ.

ಈ ಬಗ್ಗೆ ನಟ ರಿಷಬ್ ಶೆಟ್ಟಿ ಅವರು ಮಾತನಾಡಿ, ಅಜನೀಶ್ ಅವರು ಇಂದಿನ ಕಾರ್ಯಕ್ರಮಕ್ಕೆ ಯಾಕೆಬಂದಿಲ್ಲ ಎಂದು ತಿಳಿದುಕೊಂಡರೆ ನಿಮಗೂ ಗೊತ್ತಾಗಬಹುದು. ಹಾಡಿನ ಎಡಿಟಿಂಗ್ ಇತರ ಕೆಲಸ ಕಾರ್ಯಗಳು ನಡೆಯುತ್ತಿವೆ. ಸುಮಾರು ಆರೇಳು ಭಾಷೆಯಲ್ಲಿ ಕಂಟೆಂಟ್ ಕ್ರಿಯೇಟ್ ಮಾಡು ವುದು ಎಲ್ಲವೂ ನಮಗೂ ಹೊಸ ವಿಷಯವಾಗಿದೆ. ಹೀಗಾಗಿ ಅಜನೀಶ್ ಅವರ ಕೆಲಸ ಕಾರ್ಯ ಬಾಕಿ ಉಳಿದಿದೆ. ಹೀಗಾಗಿ ಈ ಹಿಂದೆ ಟೀಸರ್, ಮೇಕಿಂಗ್ ವಿಡಿಯೋ ಬಿಟ್ಟು ಬಳಿಕ ಈಗ ಟ್ರೈಲರ್ ಬಿಟ್ಟಿ ದ್ದೇವೆ. ಹೀಗಾಗಿ ಸಿನಿಮಾ ರಿಲೀಸ್ ಗೂ ಮುನ್ನವೆ ಹಾಡನ್ನು ಬಿಡುವ ಯೋಜನೆ ಇದೆ ಎಂದು ಹೇಳಿದ್ದಾರೆ.

ಕಾಂತಾರ ಸಿನಿಮಾದ ಬಳಿಕ ಮುಂದಿನ ಯೋಚನೆ ಏನು ಎಂಬುದರ ಬಗ್ಗೆ ಕೂಡ ನಟ ರಿಷಬ್ ಶೆಟ್ಟಿ ಅವರು ಮಾತನಾಡಿದ್ದಾರೆ. ಸುಮಾರು 5 ವರ್ಷದಿಂದ ಕಾಂತಾರ ಸಿನಿಮಾದ ಎರಡು ಭಾಗಕ್ಕಾಗಿ ಊರಲ್ಲಿ ನಾನು ಹೆಚ್ಚು ಇದ್ದೆ‌. ಈ ಪ್ರಾಜೆಕ್ಟ್ ಬಳಿಕ ಏನು ಎಂಬುದು ಈಗಲೇ ತಾನು ಡಿಸೈಡ್ ಮಾಡಿಲ್ಲ. ಜನರ ಅಭಿರುಚಿ ಆಗಾಗ ಬದಲಾಗುತ್ತೆ ಹೀಗಾಗಿ ಆ ಕಾಲಕ್ಕೆ ತಕ್ಕನಾಗಿ ಯಾವುದಾದರು ಹೊಸ ವಿಚಾರ ಸಿಕ್ಕರೆ ಸಿನಿಮಾ ಮಾಡ್ತಿವಿ. ಸು ಫ್ರಂ ಸೋ ಸಿನಿಮಾ ಕೂಡ ಅಷ್ಟೇ ಅದು ಜನರೆ ಮೆಚ್ಚಿಕೊಂಡ ಸಿನಿಮಾ. ಹೀಗಾಗಿ ಜನರು ಏನು ನಮ್ಮಿಂದ ನಿರೀಕ್ಷೆ ಮಾಡ್ತಾರೆ ನಮಗೂ ಗೊತ್ತಿಲ್ಲ. ಸಿನಿಮಾ ಮಾಡ್ತೀವಿ ಜನರಿಗೆ ಇಷ್ಟ ಆದರೆ ಆ ಸಿನಿಮಾ ಹಿಟ್ ಆಗುತ್ತೆ ಎಂದಿದ್ದಾರೆ.

ಇದನ್ನು ಓದಿ:Kantara: Chapter 1: 30 ದೇಶಗಳು, 6500 ಸ್ಕ್ರೀನ್ಸ್; ಕಾಂತಾರ ರಿಲೀಸ್‌ ಬಗ್ಗೆ ಟೀಂ ಹೇಳಿದ್ದೇನು ಗೊತ್ತಾ?

ಬಳಿಕ ಅಮೇರಿಕಾದಲ್ಲಿ ಯಾವ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತೆ ಎಂದು ಮಾಧ್ಯಮ ದವರು ಪ್ರಶ್ನಿಸಿದ್ದಾರೆ‌. ಅದಕ್ಕೆ ಉತ್ತರಿಸಿದ್ದ ನಟ ರಿಷಬ್ ಶೆಟ್ಟಿ ಅವರು ಅಲ್ಲಿಯೂ ಕನ್ನಡಕ್ಕೆ ಮೊದಲ ಆಧ್ಯತೆ ಇರುತ್ತದೆ ಅಂದಿದ್ದಾರೆ. ಅದಾದ ಮೇಲೆ ಬೇರೆ ಇತರ ಭಾಷೆಯಲ್ಲೂ ಈ ಸಿನಿಮಾ ಇರುತ್ತದೆ. ಪ್ಯಾನ್ ಇಂಡಿಯಾ ಮಟ್ಟಕ್ಕೆ ಕರೆದುಕೊಂಡು ಹೋಗಿದ್ದು ನೀವು. ಹೀಗಾಗಿ ಈಗ ಅವರವರ ಭಾಷೆಯಲ್ಲಿ ನಾವು ರೀಚ್ ಆಗುವಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದಿದ್ದಾರೆ.