ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Yash: ʻಟಾಕ್ಸಿಕ್‌ʼ ಸಿನಿಮಾದ ಹಿಂದಿ ವರ್ಷನ್‌ ಹಕ್ಕುಗಳನ್ನು ಖರೀದಿಸಿದ ಬಾಲಿವುಡ್ ನಟಿ ರವೀನಾ ಟಂಡನ್‌ ಪತಿ!

Toxic Movie Hindi Rights: ಟಾಕ್ಸಿಕ್‌ ಸಿನಿಮಾ ಉತ್ತರ ಭಾರತ ಮತ್ತು ನೇಪಾಳದ ವಿತರಣಾ ಹಕ್ಕುಗಳು ಬಾಲಿವುಡ್ ವಿತರಣಾ ದೈತ್ಯ ಅನಿಲ್ ಥಡಾನಿ ಅವರ ಪಾಲಾಗಿದೆ. ಯಶ್ ಅವರ 'ಕೆಜಿಎಫ್' ಸರಣಿಯನ್ನು ಉತ್ತರ ಭಾರತದಲ್ಲಿ ಯಶಸ್ವಿಯಾಗಿ ವಿತರಿಸಿದ್ದ ಅನಿಲ್ ಥಡಾನಿ, ಈಗ 'ಟಾಕ್ಸಿಕ್' ಸಿನಿಮಾವನ್ನು ಉತ್ತರ ಭಾರತ ಮತ್ತು ನೇಪಾಳದಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರ ಟಾಕ್ಸಿಕ್‌ ಸಿನಿಮಾವು ವಿತರಣಾ ಹಕ್ಕುಗಳ ಮಾರಾಟದ ವಿಚಾರದಲ್ಲಿ ಭಾರಿ ಸೌಂಡು ಮಾಡುತ್ತಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹಾಗೂ ಓವರ್‌ ಸೀಸ್‌ ಹಕ್ಕುಗಳ ಮಾರಾಟದಿಂದಲೇ 225 ಕೋಟಿ ರೂ. ಬಾಚಿಕೊಂಡಿರುವ ಟಾಕ್ಸಿಕ್‌ ನಿರ್ಮಾಪಕರು ಈಗ ಉತ್ತರ ಭಾರತದ ಹಾಗೂ ನೇಪಾಳದ ವಿತರಣಾ ಹಕ್ಕುಗಳನ್ನು ದುಬಾರಿ ಮೊತ್ತಕ್ಕೆ ಮಾರಿದ್ದಾರೆ.

ರವೀನಾ ಟಂಡನ್‌ ಪತಿ ಪಾಲಿಗೆ ಹಕ್ಕುಗಳು

ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಅನುಭವಿ ವಿತರಣಾ ಸಂಸ್ಥೆಗಳಲ್ಲಿ ಒಂದಾದ 'ಎಎ ಫಿಲ್ಮ್ಸ್' (AA Films), ಯಶ್ ಅವರ 'ಟಾಕ್ಸಿಕ್' ಚಿತ್ರದ ಉತ್ತರ ಭಾರತ ಮತ್ತು ನೇಪಾಳದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಮೂಲಕ ದಕ್ಷಿಣದ ಮಾರುಕಟ್ಟೆಗಳನ್ನು ಮೀರಿ ಚಿತ್ರದ ರಾಷ್ಟ್ರೀಯ ಹೆಜ್ಜೆಗುರುತನ್ನು ಇನ್ನಷ್ಟು ಬಲಪಡಿಸಿದೆ. ಅಂದಹಾಗೆ, 'ಎಎ ಫಿಲ್ಮ್ಸ್' ಮಾಲೀಕರು ನಟಿ ರವೀನಾ ಟಂಡನ್‌ ಅವರ ಪತಿ ಅನಿಲ್‌ ಥಡಾನಿ. ಈ ಹಿಂದೆ ಯಶ್‌ ಅವರ 'ಕೆಜಿಎಫ್: ಚಾಪ್ಟರ್ 1' ಮತ್ತು 'ಕೆಜಿಎಫ್: ಚಾಪ್ಟರ್ 2' ಸಿನಿಮಾಗಳ ವಿತರಣೆಯ ನಂತರ, ಅನಿಲ್‌ ಥಡಾನಿ ಈಗ ಮತ್ತೆ ಯಶ್ ಅವರೊಂದಿಗೆ ಕೈಜೋಡಿಸಿದ್ದಾರೆ.

Yash Toxic teaser: ಯಶ್ ಟಾಕ್ಸಿಕ್‌ ಟೀಸರ್, ರಣವೀರ್ ಸಿಂಗ್ ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ

ಪ್ಯಾನ್-ಇಂಡಿಯಾ ಎಂಬ ಪದವು ಚಾಲ್ತಿಗೆ ಬರುವ ಮುಂಚೆಯೇ ಉದ್ಯಮಗಳ ನಡುವೆ ಸೇತುವೆಯಾಗಿದ್ದ ಪ್ರವರ್ತಕ ಎಂದು ಕರೆಯಲ್ಪಡುವ ಅನಿಲ್ ಥಡಾನಿ, ಬಾಹುಬಲಿ, ಕೆಜಿಎಫ್, ಪುಷ್ಪ, ಕಾಂತಾರ ಮತ್ತು ಕಲ್ಕಿ ಮುಂತಾದ ಐತಿಹಾಸಿಕ ಚಿತ್ರಗಳನ್ನು ಉತ್ತರ ಭಾರತದಲ್ಲಿ ರಿಲೀಸ್‌ ಮಾಡಿ, ಗೆಲುವು ಕಂಡಿದ್ದಾರೆ.

'ಟಾಕ್ಸಿಕ್‌ʼ ಜತೆಗಿನ ಬಾಕ್ಸ್‌ ಆಫೀಸ್‌ ವಾರ್‌ ತಪ್ಪಿಸಲು 'ಧುರಂಧರ್ 2' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ? ವೈರಲ್ ಪೋಸ್ಟ್‌ನ‌ ಅಸಲಿಯತ್ತೇನು?

ಎಎ ಫಿಲ್ಮ್ಸ್‌ನ ಸ್ಥಾಪಕ ಅನಿಲ್ ಥಡಾನಿ ಹೇಳಿದ್ದೇನು?

"ಟಾಕ್ಸಿಕ್ ಮಹತ್ವಾಕಾಂಕ್ಷೆಯ ಸಿನಿಮಾ. ನಾವು ಈ ಕಥೆಯನ್ನು ಕೇಳಿದ ಕ್ಷಣವೇ, ಇದು ದೊಡ್ಡ ಪರದೆಗಾಗಿಯೇ ವಿನ್ಯಾಸಗೊಳಿಸಲಾದ ಸಿನಿಮಾ ಎಂಬುದು ಸ್ಪಷ್ಟವಾಯಿತು. ಇದರ ದೃಶ್ಯ ವೈಭವ, ಕಥೆಯ ಆಳ ಮತ್ತು ತಾಂತ್ರಿಕ ನೈಪುಣ್ಯತೆಗಾಗಿ ಇಂದಿನ ಎಲ್ಲಾ ಭಾಷೆಯ ಪ್ರೇಕ್ಷಕರು ಹಸಿದಿದ್ದಾರೆ. ಯಶ್ ಅವರು ಪ್ಯಾನ್-ಇಂಡಿಯಾ ಸ್ಟಾರ್ ಎಂಬ ಪರಿಕಲ್ಪನೆಯನ್ನು ನಿರಂತರವಾಗಿ ಉನ್ನತೀಕರಿಸಿದ್ದಾರೆ. 'ಟಾಕ್ಸಿಕ್' ಮೂಲಕ ಅವರು ಆ ಪರಿಧಿಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಈ ಸಿನಿಮಾವನ್ನು ನಾವು ಉತ್ತರ ಭಾರತ ಮತ್ತು ನೇಪಾಳದ ಪ್ರೇಕ್ಷಕರಿಗೆ ತಲುಪಿಸಲು ನಾವು ಹೆಮ್ಮೆಪಡುತ್ತೇವೆ" ಎಂದು ಹೇಳಿದ್ದಾರೆ ಅನಿಲ್‌ ಥಡಾನಿ.

Yash Birthday: ಬರ್ತ್‌ಡೇ ಬಾಯ್‌ ಯಶ್‌ ಈಗ ಗ್ಲೋಬಲ್‌ ಸ್ಟಾರ್‌; 'ಟಾಕ್ಸಿಕ್‌' ಜತೆ ಒಪ್ಪಿಕೊಂಡ ಇತರ ಚಿತ್ರಗಳು ಯಾವ್ಯಾವು?

"ಕೆವಿಎನ್ ಪ್ರೊಡಕ್ಷನ್ಸ್‌ನ 'ಟಾಕ್ಸಿಕ್' ಒಂದು ಬೃಹತ್ ಪ್ಯಾನ್-ಇಂಡಿಯನ್ ಸಿನಿಮಾವಾಗಿದ್ದು, ಇದಕ್ಕೆ ದೊಡ್ಡ ಮಟ್ಟದ ಸ್ಕೇಲ್, ಶಿಸ್ತು ಮತ್ತು ಅಸಾಧಾರಣ ವಿತರಣಾ ಬೆನ್ನೆಲುಬಿನ ಅಗತ್ಯವಿದೆ. ಅನಿಲ್ ಥಡಾನಿ ಮತ್ತು ಎಎ ಫಿಲ್ಮ್ಸ್ ರೂಪದಲ್ಲಿ ನಾವು ಈ ಜವಾಬ್ದಾರಿಯನ್ನು ಮೂಲಭೂತ ಮಟ್ಟದಲ್ಲಿ ಅರ್ಥಮಾಡಿಕೊಂಡಿರುವ ಪಾಲುದಾರರನ್ನು ಪಡೆದಿದ್ದೇವೆ. ಅನಿಲ್ ಥಡಾನಿ ಪ್ಯಾನ್-ಇಂಡಿಯಾ ಕಲ್ಚರ್‌ ಆರಂಭದ ಪ್ರಮುಖ ರೂವಾರಿಗಳಲ್ಲಿ ಒಬ್ಬರು. ಎಎ ಫಿಲ್ಮ್ಸ್ ನಮ್ಮೊಂದಿಗೆ ಈ ಪಯಣದಲ್ಲಿ ಕೈಜೋಡಿಸಿರುವುದರಿಂದ, ಸರಿಯಾದ ದೃಷ್ಟಿಕೋನ ಮತ್ತು ಮೂಲಸೌಕರ್ಯದ ಬೆಂಬಲವಿದ್ದರೆ ಭಾರತೀಯ ಕಥೆಗಳು ಏನನ್ನು ಸಾಧಿಸಬಹುದು ಎಂಬುದನ್ನು ಈ ಚಿತ್ರ ಸಾಬೀತುಪಡಿಸಲಿದೆ ಎಂದು ನಾವು ನಂಬುತ್ತೇವೆ" ಎಂದು ನಿರ್ಮಾಪಕ ಕೆ ವೆಂಕಟ್‌ ನಾರಾಯಣ್‌ ಹೇಳಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಹಲವು ಭಾಷೆಗಳಲ್ಲಿ ಮಾ.19ರಂದು ತೆರೆಕಾಣಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಮತ್ತು ಯಶ್ ಈ ಸಿನಿಮಾಕ್ಕೆ ಹಣ ಹಾಕಿದ್ದಾರೆ.