ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Toxic Movie: ಟಾಕ್ಸಿಕ್ ಬಿಡುಗಡೆಗೂ ಮುನ್ನ ಯಶ್‌ ಮನವಿ ಮಾಡಿದ್ದೇನು?

Toxic Movie: ‘ಟಾಕ್ಸಿಕ್’ (Toxic) ಸಿನಿಮಾ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಿದೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಗೆ ‘ಟಾಕ್ಸಿಕ್’ ಶೋ ಆರಂಭವಾಗಿದೆ. ‘ರಾಕಿಂಗ್ ಸ್ಟಾರ್’ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ (Fans) ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಟಾಕ್ಸಿಕ್‌ ಸಿನಿಮಾ

ಟಾಕ್ಸಿಕ್’ (Toxic) ಸಿನಿಮಾ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಿದೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಗೆ ‘ಟಾಕ್ಸಿಕ್’ ಶೋ ಆರಂಭವಾಗಿದೆ. ‘ರಾಕಿಂಗ್ ಸ್ಟಾರ್’ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ (Fans) ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಬೆಂಬಲಕ್ಕೆ ಧನ್ಯವಾದ

‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಎನ್ನುವುದು ನಮಗೆ ಕೇವಲ ಒಂದು ಸಿನಿಮಾವಷ್ಟೇ ಅಲ್ಲ; ಇದು ನಾವು ಪ್ರತಿ ಫ್ರೇಮ್, ಪ್ರತಿ ದೃಶ್ಯ ಹಾಗೂ ಪ್ರತಿಯೊಂದು ಆಯ್ಕೆಯನ್ನು ಅತ್ಯಂತ ಜಾಗರೂಕತೆಯಿಂದ ಸೃಷ್ಟಿಸಿ, ವರ್ಷಗಳ ಕಾಲ ನಮ್ಮ ಹೃದಯವನ್ನು ಧಾರೆ ಎರೆದು ಕಟ್ಟಿದ ಒಂದು ಜಗತ್ತು. ಈ ಸಿನಿಮಾದ ನಿರ್ಮಾಣ ಮತ್ತು ಬಿಡುಗಡೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ತಂತ್ರಜ್ಞ, ಕಲಾವಿದ ಮತ್ತು ತಾಂತ್ರಿಕ ವರ್ಗದ ಸಿಬ್ಬಂದಿಯ ಆಶಯವೂ ಒಂದೇ .



ಇದನ್ನೂ ಓದಿ: Kuku Kohli: ಖ್ಯಾತ ನಿರ್ದೇಶಕ, ಅರುಣಾ ಇರಾನಿ ಪತಿ ಕುಕು ಕೊಹ್ಲಿ ನಿಧನ

ನೀವೆಲ್ಲರೂ ಚಿತ್ರಮಂದಿರಗಳಲ್ಲಿ ದೊಡ್ಡ ಪರದೆಯ ಮೇಲೆ ಒಂದು ಸಮುದಾಯವಾಗಿ ಜೊತೆಯಾಗಿ ಕುಳಿತು ಈ ಅದ್ಭುತ ಅನುಭವವನ್ನು ಪಡೆದುಕೊಳ್ಳಬೇಕು ಎಂಬುದಾಗಿದೆ. ಈ ಸಿನಿಮಾಗೆ ನೀವು ಈಗಾಗಲೇ ತೋರಿಸುತ್ತಿರುವ ಅಪಾರ ಪ್ರೀತಿ, ತೋರುತ್ತಿರುವ ಉತ್ಸಾಹ ಮತ್ತು ಮುಂಗಡ ಬುಕಿಂಗ್ ಮೂಲಕ ನೀಡುತ್ತಿರುವ ಭರ್ಜರಿ ಬೆಂಬಲಕ್ಕೆ ಧನ್ಯವಾದ ಹೇಳಲು ನಮಗೆ ಪದಗಳು ಸಾಲುತ್ತಿಲ್ಲ. ನಮ್ಮ ಈ ಇಡೀ ಪ್ರಯಾಣಿಯುದ್ದಕ್ಕೂ ನೀವು ನೀಡಿದ ನಿರಂತರ ಬೆಂಬಲಕ್ಕೆ ನಾವು ಸದಾ ಕೃತಜ್ಞರು. ಈ ಕ್ಷಣದಲ್ಲಿ ನಾವು ನಿಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.’

ಈ ಸಿನಿಮಾ ಯಾವ ರೀತಿ ನಿಮಗಾಗಿ ರೂಪುಗೊಂಡಿದೆಯೋ, ಅದೇ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲು ಬಿಡಿ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವಾಗ ದೃಶ್ಯಗಳನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಡಿ. ಸಿನಿಮಾದ ಪ್ರಮುಖ ಕಥಾಹಂದರ ಹಾಗೂ ಟ್ವಿಸ್ಟ್‌ಗಳನ್ನು ಬಿಟ್ಟುಕೊಟ್ಟು ಇತರರ ವೀಕ್ಷಣೆಯ ಅನುಭವವನ್ನು ಕೆಡಿಸಬೇಡಿ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಇದಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: Unmadham OTT: ಸೈಕಲಾಜಿಕಲ್ ಥ್ರಿಲ್ಲರ್ ಈ ಮಲಯಾಳಂ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

1940-70ರ ಕಾಲಘಟ್ಟವನ್ನು ಮರುಸೃಷ್ಟಿಸಲು ಬೆಂಗಳೂರು, ಮುಂಬೈ, ಗೋವಾ, ತೂತುಕುಡಿ ಮತ್ತು ಜೈಪುರಗಳಲ್ಲಿ ಬೃಹತ್ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ.

Yashaswi Devadiga

View all posts by this author