2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ನಟ ಯಶ್ ಅವರ 'ಟಾಕ್ಸಿಕ್' ಚಿತ್ರತಂಡವು ಕಿಯಾರಾ ಅಡ್ವಾಣಿ ಅವರ ಪಾತ್ರವನ್ನು ಪರಿಚಯಿಸುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಚಿತ್ರದಲ್ಲಿ ಕಿಯಾರಾ ಅವರು 'ನಾದಿಯಾ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೇ ಟಾಕ್ಸಿಕ್ ಚಿತ್ರದಲ್ಲಿ ಕಿಯಾರಾ ನಟಿಸಿದ್ದಾರೆ ಎಂಬ ಮಾಹಿತಿ ಇತ್ತಾದರೂ, ಚಿತ್ರತಂಡ ಅದನ್ನು ಖಚಿತಪಡಿಸಿರಲಿಲ್ಲ. ಇದೀಗ ಫಸ್ಟ್ ಲುಕ್ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.
ಹೇಗಿದೆ ಫಸ್ಟ್ ಲುಕ್?
ಸದ್ಯ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಕಿಯಾರಾ ಅಡ್ವಾಣಿ ಅವರು ಸರ್ಕಸ್ ಹಿನ್ನೆಲೆಯ ಗ್ಲಾಮರಸ್ ಬೆಳಕಿನಲ್ಲಿದ್ದರೂ, ಅವರ ನೋಟದಲ್ಲಿ ಒಂದು ರೀತಿಯ ದುಃಖ ಮತ್ತು ಭಾವನಾತ್ಮಕತೆ ಎದ್ದು ಕಾಣುತ್ತಿದೆ. ಇದು ಕೇವಲ ಗ್ಲಾಮರ್ ಪಾತ್ರವಲ್ಲದೆ, ನಟನೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವಂತಹ ಶಕ್ತಿಯುತ ಪಾತ್ರ ಎಂಬ ಮುನ್ಸೂಚನೆ ನೀಡಿದೆ. ಇದು ನಟಿ ಕಿಯಾರಾ ವೃತ್ತಿಜೀವನಕ್ಕೆ ಹೊಸ ಮೈಲಿಗಲ್ಲಾಗಬಹುದಾದ ಸಾಧ್ಯತೆ ಇದೆ.
Dhurandhar 2: ಧುರಂಧರ್ 2 ರಿಲೀಸ್ ಡೇಟ್ ಕನ್‌ಫರ್ಮ್; ಯಶ್ 'ಟಾಕ್ಸಿಕ್' ಚಿತ್ರಕ್ಕೆ ರಣವೀರ್ ನೇರಾ ನೇರ ಸವಾಲು
ನಿರ್ದೇಶಕಿ ಗೀತು ಮೋಹನ್‌ದಾಸ್ ಮಾತು
ಕಿಯಾರಾ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ದೇಶಕಿ ಗೀತು ಮೋಹನ್‌ದಾಸ್, "ಕೆಲವು ನಟನೆಯ ಕೇವಲ ಚಿತ್ರಕ್ಕೆ ಸೀಮಿತವಾಗಿರುವುದಿಲ್ಲ, ಅವು ಕಲಾವಿದರನ್ನು ಮರು ವ್ಯಾಖ್ಯಾನಿಸುತ್ತವೆ. ಕಿಯಾರಾ ಈ ಚಿತ್ರದಲ್ಲಿ ನೀಡಿದ ಅಭಿನಯವು ಪರಿವರ್ತನಾತ್ಮಕವಾಗಿದೆ. ಒಬ್ಬ ನಿರ್ದೇಶಕಿಯಾಗಿ ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ನೀಡಿದ ಅಭಿನಯಕ್ಕಾಗಿ ಮತ್ತು ನಮ್ಮ ಜರ್ನಿಯಲ್ಲಿ ಅವರು ತಂದ ನಂಬಿಕೆ ಮತ್ತು ಪ್ರೀತಿಗಾಗಿ ನಾನು ಹೆಮ್ಮೆಪಡುತ್ತೇನೆ" ಎಂದು ಹೇಳಿದ್ದಾರೆ.
Yash: ಟಾಕ್ಸಿಕ್ ಸಿನಿಮಾದಲ್ಲಿ ಅಭಿನಯ! ಯಶ್ ಹೊಗಳಿ ಈ ಬಾಲಿವುಡ್ ನಟಿ ಹೇಳಿದ್ದೇನು?
ಇಂದು ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕೆ ಹುಟ್ಟುಹಬ್ಬ
ಹೌದು, ಡಿಸೆಂಬರ್ 21ರಂದು ಕೆಜಿಎಫ್ ಚಾಪ್ಟರ್ 1 ಸಿನಿಮಾ ತೆರೆಕಂಡಿತ್ತು. ಆ ಹಿನ್ನೆಲೆಯಲ್ಲಿ ಈ ಪೋಸ್ಟರ್ ಅನ್ನು ಯಶ್ ತಂಡ ಹಂಚಿಕೊಂಡಿದೆ. "ಕೆಜಿಎಫ್ 2" ಬಳಿಕ ಬಾಕ್ಸ್ ಆಫೀಸ್ ಇತಿಹಾಸವನ್ನು ಮರು ವ್ಯಾಖ್ಯಾನಗೊಳಿಸಲು 4 ವರ್ಷಗಳ ನಂತರ ರಾಕಿಂಗ್ ಸ್ಟಾರ್ ಯಶ್ ಅವರು 2026 ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ "ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್" ಮೂಲಕ ಬಿಗ್ ಸ್ಕ್ರೀನ್‌ಗೆ ಮರಳುತ್ತಿದ್ದಾರೆ. ಈಗಾಗಲೇ ಟಾಕ್ಸಿಕ್ ಸಿನಿಮಾವು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರದ ಸ್ಕ್ರಿಪ್ಟ್ ಅನ್ನು ಯಶ್ ಮತ್ತು ಗೀತು ಮೋಹನ್‌ದಾಸ್ ಬರೆದಿದ್ದು, ಗೀತು ಮೋಹನ್‌ದಾಸ್ ನಿರ್ದೇಶಿಸಿದಾರೆ. "ಟಾಕ್ಸಿಕ್" ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇನ್ನಿತರ ಭಾಷೆಗಳಿಗೆ ಡಬ್ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ಕಿಯಾರಾ ಪೋಸ್ಟರ್ ಟ್ವೀಟ್ ಮಾಡಿದ ಯಶ್
ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದರೆ, ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಉಜ್ವಲ್ ಕುಲಕರ್ಣಿ ಸಂಕಲನ ಮತ್ತು ಟಿ ಪಿ ಅಬಿದ್ ನಿರ್ಮಾಣ ವಿನ್ಯಾಸವನ್ನು ನಿರ್ವಹಿಸಿದ್ದು, ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ (ಜಾನ್ ವಿಕ್) ಮತ್ತು ಅನ್ಬರಿವ್ ಈ ಚಿತ್ರದ ಸಾಹಸ ಸನ್ನಿವೇಶಗಳನ್ನು ಸಂಯೋಜನೆ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಈ ಚಿತ್ರಕ್ಕೆ ಹಣ ಹಾಕಿದ್ದಾರೆ.