ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೊದಲ ದಿನದ ಕಲೆಕ್ಷನ್‌ನಲ್ಲಿಯೇ ಹೊಸ ದಾಖಲೆ ಬರೆಯಲಿದೆಯೇ 'ಟಾಕ್ಸಿಕ್‌'? ವಿದೇಶಿ ಮಾರುಕಟ್ಟೆಯಲ್ಲಿ ಯಾರೂ ಮಾಡದ ಸಾಧನೆ ಮಾಡ್ತಿದ್ದಾರೆ ಯಶ್!‌

Toxic Movie: ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ 'ಟಾಕ್ಸಿಕ್' ಚಿತ್ರವು ಜಾಗತಿಕ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ಮುಂಗಡ ಬುಕಿಂಗ್ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆಗೂ ಮುನ್ನವೇ ಬುಕ್‌ಮೈಶೋನಲ್ಲಿ ಲಕ್ಷಾಂತರ ಟಿಕೆಟ್‌ಗಳು ಮಾರಾಟವಾಗಿದ್ದು, ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ.

'ಟಾಕ್ಸಿಕ್' ಚಿತ್ರವು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗುತ್ತಿದ್ದು, 'ರಾಕಿಂಗ್ ಸ್ಟಾರ್' ಯಶ್ ಅವರನ್ನು ತೆರೆಮೇಲೆ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. 'ಕೆಜಿಎಫ್' ಸರಣಿಯ ಅದ್ಭುತ ಯಶಸ್ಸಿನ ನಂತರ 'ಟಾಕ್ಸಿಕ್‌' ಸಿನಿಮಾದಲ್ಲಿ ಯಶ್‌ ಏನು ಹೇಳಲು ಹೊರಟಿದ್ದಾರೆ ಎಂಬುದು ಸದ್ಯದ ಕುತೂಹಲ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ದಾಖಲೆ ಬರೆಯುವುದು ಖಚಿತ ಎಂಬುದಕ್ಕೆ ಈಗಾಗಲೇ ಸಾಕಷ್ಟು ಮುನ್ಸೂಚನೆಗಳು ಸಿಕ್ಕಿವೆ.

ಸದ್ಯದ ಅಂಕಿಅಂಶಗಳ ಪ್ರಕಾರ ಈ ಚಿತ್ರಕ್ಕೆ ಐತಿಹಾಸಿಕ ಓಪನಿಂಗ್ ಸಿಗುವುದು ಪಕ್ಕಾ ಆಗಿದೆ. ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಮುಂಗಡ ಬುಕಿಂಗ್ ಭರ್ಜರಿಯಾಗಿ ಸಾಗುತ್ತಿದ್ದು, ಬೆಂಗಳೂರಿನಲ್ಲಿ ಬಹುತೇಕ ಪ್ರದರ್ಶನಗಳು ಈಗಾಗಲೇ ಹೌಸ್‌ಫುಲ್‌ ಆಗಿವೆ. ಕೇವಲ ಕರ್ನಾಟಕದಲ್ಲಿಯೇ ಚಿತ್ರದ ಮುಂಗಡ ಬುಕಿಂಗ್ ಕಲೆಕ್ಷನ್‌ 17 ಕೋಟಿ ರೂಪಾಯಿ ದಾಟಿದೆ.

6 ಲಕ್ಷಕ್ಕೂ ಅಧಿಕ ಟಿಕೆಟ್‌ ಮಾರಾಟ!

ಬುಕ್‌ಮೈಶೋ (BookMyShow) ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಡುಗಡೆಗೆ ಕೇವಲ 2 ದಿನ ಬಾಕಿ ಇರುವಾಗ, ಇದೊಂದೇ ಪ್ಲಾಟ್‌ಫಾರ್ಮ್‌ನಲ್ಲಿ ಬರೋಬ್ಬರಿ 6.83 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ಈ ಮೂಲಕ ಸಾರ್ವಕಾಲಿಕ ಪ್ರೀ-ಸೇಲ್ಸ್‌ನ ಟಾಪ್‌ 10 ಪಟ್ಟಿಯಲ್ಲಿ 'ಟಾಕ್ಸಿಕ್' 7ನೇ ಸ್ಥಾನ ಪಡೆದುಕೊಂಡಿದ್ದು, 'ಕಲ್ಕಿ 2898 ಎಡಿ' ಹಾಗೂ 'ಜೈಲರ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ.

ಬುಕ್‌ಮೈಶೋ ಸಾರ್ವಕಾಲಿಕ ಟಾಪ್ 10 ಪ್ರೀ-ಸೇಲ್ಸ್ ಪಟ್ಟಿ

ಕೂಲಿ - 1.34 ಮಿಲಿಯನ್ (13.4 ಲಕ್ಷ)

ಲಿಯೋ - 1.28 ಮಿಲಿಯನ್ (12.8 ಲಕ್ಷ)

ಪುಷ್ಪ 2 - 1.17 ಮಿಲಿಯನ್ (11.7 ಲಕ್ಷ)

ಧುರಂಧರ್ 2 - 1.10 ಮಿಲಿಯನ್ (11.0 ಲಕ್ಷ)

ಎಲ್2: ಎಂಪುರಾನ್ - 9.99 ಲಕ್ಷ

ಜವಾನ್ - 8.16 ಲಕ್ಷ

ಟಾಕ್ಸಿಕ್ - 6.83 ಲಕ್ಷ

ಕಲ್ಕಿ 2898 ಎಡಿ - 6.59 ಲಕ್ಷ

ಜೈಲರ್ - 6.36 ಲಕ್ಷ

ದಿ ಗೋಟ್ - 5.65 ಲಕ್ಷ

ಮಲ್ಟಿಪ್ಲೆಕ್ಸ್‌ಗಳಲ್ಲಿ 'ಟಾಕ್ಸಿಕ್‌' ಅಬ್ಬರ

ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಜಾಲದಲ್ಲಿ 'ಟಾಕ್ಸಿಕ್' ಚಿತ್ರದ ಪ್ರಾಬಲ್ಯ ಎದ್ದು ಕಾಣುತ್ತಿದೆ. 'PIC' ವಿಭಾಗದಲ್ಲಿ (PVR, INOX ಮತ್ತು Cinepolis) ಮುಂಗಡ ಬುಕಿಂಗ್ ಸಂಖ್ಯೆಗಳು ಭರ್ಜರಿಯಾಗಿವೆ. 1,700ಕ್ಕೂ ಅಧಿಕ ಪ್ರದರ್ಶನಗಳಿಂದ ಸುಮಾರು 7.90 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಪಿವಿಆರ್ (PVR) ಮುಂಚೂಣಿಯಲ್ಲಿದ್ದರೆ, ಐನಾಕ್ಸ್ (INOX) ಸುಮಾರು 5.40 ಕೋಟಿ ರೂ. ಮತ್ತು ಸಿನಿಪೊಲಿಸ್ (Cinepolis) ಸುಮಾರು 1.85 ಕೋಟಿ ರೂ. ಗಳಿಸಿವೆ. ಇದೆಲ್ಲವೂ ಸಿನಿಮಾ ಬಿಡುಗಡೆಗೂ ಮುನ್ನವೇ ಆಗಿರುವ ಗಳಿಕೆಯಾಗಿದೆ.

Yash-Radhika Pandit: ಯಶ್​ ಮನೆಯಲ್ಲಿ ಕ್ರಿಸ್​ಮಸ್ ಸೆಲೆಬ್ರೇಷನ್​! ಚೆಂದದ ವಿಡಿಯೊ ಶೇರ್ ಮಾಡಿದ​ ರಾಧಿಕಾ ಪಂಡಿತ್

ಹಿಂದಿ ಆವೃತ್ತಿಯಿಂದಲೇ ಭರ್ಜರಿ ವ್ಯವಹಾರ

ಈ ಎಲ್ಲಾ ಅಂಕಿಅಂಶಗಳನ್ನು ಗಮನಿಸಿದರೆ, ಕೇವಲ ಹಿಂದಿ ಆವೃತ್ತಿಯೊಂದೇ ಮೊದಲ ದಿನ ಬರೋಬ್ಬರಿ 40 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ. ಈಗಾಗಲೇ ರಾಷ್ಟ್ರೀಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಹಿಂದಿ ಆವೃತ್ತಿಯ 80,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಒಟ್ಟಾರೆಯಾಗಿ ಸುಮಾರು 33 ಕೋಟಿ ರೂ. ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿವೆ. ಈ ಮೂಲಕ ಯಶ್ ಮತ್ತೊಮ್ಮೆ ತಮ್ಮ ಪ್ಯಾನ್-ಇಂಡಿಯಾ ಜನಪ್ರಿಯತೆಯನ್ನು ಸಾಬೀತುಪಡಿಸಲು ಸಜ್ಜಾಗಿದ್ದಾರೆ.

Toxic Movie: 'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ 'ರಾಕಿ ಭಾಯ್‌' ಯಶ್ ಖಡಕ್ ಉತ್ತರ!

ವಿದೇಶಿ ಮಾರುಕಟ್ಟೆಯಲ್ಲೂ 'ಟಾಕ್ಸಿಕ್' ಹವಾ

ಅಂತಾರಾಷ್ಟ್ರೀಯ ಮಟ್ಟದಲ್ಲೂ 'ಟಾಕ್ಸಿಕ್' ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. ಯುಕೆಯಲ್ಲಿ (UK) ಬರೋಬ್ಬರಿ 400ಕ್ಕೂ ಅಧಿಕ ಪರದೆಗಳಲ್ಲಿ ಪ್ರದರ್ಶನ ಕಾಣುವ ಮೂಲಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರುವ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತ ಯುಎಸ್‌ಎ (USA) ಪ್ರೀಮಿಯರ್ ಪ್ರೀ-ಸೇಲ್ಸ್‌ನಲ್ಲೂ ಭರ್ಜರಿ ಏರಿಕೆ ಕಂಡುಬಂದಿದೆ. ಮೂಲಗಳ ಪ್ರಕಾರ, 362 ಚಿತ್ರಮಂದಿರಗಳ 873 ಪ್ರದರ್ಶನಗಳಿಂದ ಈಗಾಗಲೇ 2,92,541 ಡಾಲರ್ ಕಲೆಕ್ಷನ್ ಆಗಿದ್ದು, 13,000ಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ಯುಎಸ್ ಮಾರುಕಟ್ಟೆಯಲ್ಲಿ ತೆಲುಗು ಮತ್ತು ಕನ್ನಡ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

ಈ ಟ್ರೆಂಡ್ ಹೀಗೆಯೇ ಮುಂದುವರಿದರೆ, 'ಕೆಜಿಎಫ್ 2' ನಂತರ ಯಶ್ ಅವರ ಖಾತೆಗೆ ಮತ್ತೊಂದು ₹100 ಕೋಟಿ ಫಸ್ಟ್‌ ಡೇ ಓಪನಿಂಗ್ ಕಲೆಕ್ಷನ್‌ ಗ್ಯಾರಂಟಿ ಎನ್ನಬಹುದು. ಇದು ಅವರ ಮುಂದಿನ 'ರಾಮಾಯಣ' ಚಿತ್ರಕ್ಕೂ ಭರ್ಜರಿ ಪ್ಲಸ್ ಪಾಯಿಂಟ್ ಆಗಲಿದೆ ಎಂಬುದು ಬಾಕ್ಸ್‌ ಆಫೀಸ್‌ ಪಂಡಿತರ ಮಾತುಗಳು.