ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yash: ನೀವು 'ಟಾಕ್ಸಿಕ್‌' ಸಿನಿಮಾಗೆ ಟಿಕೆಟ್‌ ಬುಕ್‌ ಮಾಡ್ತಿದ್ದೀರಾ? ಅದಕ್ಕೂ ಮುನ್ನ ಈ ವಿಚಾರ ನಿಮ್ಮ ಗಮನದಲ್ಲಿರಲಿ!

ʻಟಾಕ್ಸಿಕ್‌ʼ ಸಿನಿಮಾದ ಟಿಕೆಟ್‌ ಬುಕಿಂಗ್ ವಿಚಾರದಲ್ಲಿ ಅಭಿಮಾನಿಗಳು ಒಂದು ನಿಯಮ ಗಮನಿಸಬೇಕು. ಯಶ್ ನಟನೆಯ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಚಿತ್ರಮಂದಿರಗಳಿಗೆ ಪ್ರವೇಶವಿಲ್ಲ. ಹಾಗಾಗಿ, ಚಿತ್ರಮಂದಿರಗಳಲ್ಲಿ ಅನಗತ್ಯ ಗೊಂದಲ ತಡೆಯಲು ಪೋಷಕರು ಮಕ್ಕಳನ್ನು ಕರೆತರದಂತೆ ಮುನ್ನೆಚ್ಚರಿಕೆ ವಹಿಸಬೇಕು

'ರಾಕಿಂಗ್‌ ಸ್ಟಾರ್‌' ಯಶ್‌ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್‌' ಸಿನಿಮಾವು ಆಗಸ್ಟ್‌ 26ರಂದು ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಮುಂಗಡ ಟಿಕೆಟ್‌ ಬುಕಿಂಗ್‌ (Advance Booking) ಆರಂಭವಾಗಿದ್ದು, ಬೆಂಗಳೂರಿನಲ್ಲಿ ಬಹುತೇಕ ಪ್ರದರ್ಶನಗಳು ಹೌಸ್‌ಫುಲ್‌ ಆಗಿವೆ. ಮಲ್ಟಿಪ್ಲೆಕ್ಸ್‌ ಹಾಗೂ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಬಿಸಿ ದೋಸೆಯಂತೆ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಆದರೆ, ಅತಿಯಾದ ಉತ್ಸಾಹದಲ್ಲಿ ಟಿಕೆಟ್‌ ಬುಕ್ ಮಾಡುವವರು ಈ ಮುಖ್ಯ ವಿಚಾರವನ್ನು ಗಮನಿಸಲೇಬೇಕು!

'ಟಾಕ್ಸಿಕ್‌' ಸಿನಿಮಾಗೆ 'ಎ' ಪ್ರಮಾಣಪತ್ರ

ಯಶ್‌ ನಟನೆಯ 'ಟಾಕ್ಸಿಕ್‌' ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯು 'ಎ' (A - Adults Only) ಪ್ರಮಾಣಪತ್ರ ನೀಡಿದೆ. ಹಾಗಾಗಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಸಿನಿಮಾವನ್ನು ನೋಡುವಂತಿಲ್ಲ. ಮುಖ್ಯವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ನಿಯಮವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. "ನಮ್ಮ ಅಣ್ತಮ್ಮ ಯಶ್ ಸಿನಿಮಾ..." ಎಂಬ ಅಭಿಮಾನದಿಂದ ಮಕ್ಕಳಿಗೂ ಸೇರಿಸಿ ಟಿಕೆಟ್‌ ಕಾಯ್ದಿರಿಸಿದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಯಾವುದೇ ಕಾರಣಕ್ಕೂ ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಇದರಿಂದ ಚಿತ್ರಮಂದಿರದ ಬಳಿ ಅನಗತ್ಯ ಗೊಂದಲಗಳು ಸೃಷ್ಟಿಯಾಗಬಹುದು.

'ಜನ ನಾಯಗನ್‌' ಚಿತ್ರಕ್ಕೆ ಎದುರಾಗಿತ್ತು ಇದೇ ಸ್ಥಿತಿ!

ಇತ್ತೀಚೆಗೆ 'ದಳಪತಿ' ವಿಜಯ್ ಅವರ 'ಜನ ನಾಯಗನ್' ಚಿತ್ರಕ್ಕೂ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿತ್ತು. ಆದಾಗ್ಯೂ, ಚೆನ್ನೈನಲ್ಲಿ ಕೆಲವರು ಮಕ್ಕಳ ಸಮೇತ ಚಿತ್ರಮಂದಿರಕ್ಕೆ ತೆರಳಿದ್ದರು. ಚೆನ್ನೈನ ಪಿವಿಆರ್ ಅಂಪಾ ಮಾಲ್ ಸೇರಿದಂತೆ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರಮಂದಿರದ ಒಳಗೆ ಮಕ್ಕಳು ಇರುವುದನ್ನು ಅಧಿಕಾರಿಗಳು ಗಮನಿಸಿದ್ದರು. ಕಾನೂನಿನ ಪ್ರಕಾರ 18 ವರ್ಷದೊಳಗಿನವರಿಗೆ ಪ್ರವೇಶವಿಲ್ಲದ ಕಾರಣ, ಪೊಲೀಸರ ಮಧ್ಯಪ್ರವೇಶದಿಂದಾಗಿ ಪ್ರದರ್ಶನವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಮಕ್ಕಳನ್ನು ಹೊರಗೆ ಕಳುಹಿಸಲು ಮುಂದಾದಾಗ ಪೋಷಕರು ಮತ್ತು ಚಿತ್ರಮಂದಿರದ ಸಿಬ್ಬಂದಿ ನಡುವೆ ತೀವ್ರ ವಾಗ್ವಾದವೇ ನಡೆದಿತ್ತು.

ಇಂತಹ ಸಮಸ್ಯೆಗಳು 'ಟಾಕ್ಸಿಕ್' ವಿಚಾರದಲ್ಲಿ ಮರುಕಳಿಸಬಾರದು ಎಂದರೆ, ಮಕ್ಕಳ ಜೊತೆಗೆ ಸಿನಿಮಾ ನೋಡುವ ಯೋಜನೆಯನ್ನು ಕೈಬಿಡುವುದು ಉತ್ತಮ. ಅಲ್ಲದೆ, ನಟ ಯಶ್ ಕೂಡ "ಈ ಸಿನಿಮಾವನ್ನು ದೊಡ್ಡವರಿಗೋಸ್ಕರ ಮಾಡಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

Yash-Radhika Pandit: ರಾಕಿ ಭಾಯ್‌‌ಗೆ ಮದುವೆ ಆನಿವರ್ಸರಿ ಸಂಭ್ರಮ; ಯಶ್-ರಾಧಿಕಾ ಜೋಡಿ ದಾಂಪತ್ಯ ಜೀವನಕ್ಕೆ ಈಗ ಎಂಟರ ನಂಟು!

ಟಿಕೆಟ್‌ ಬುಕಿಂಗ್‌ನಲ್ಲಿ 'ಟಾಕ್ಸಿಕ್‌' ಮುನ್ನಡೆ

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್‌ 21ರ ಬೆಳಗ್ಗೆಯಿಂದಲೇ ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ. ಬೆಂಗಳೂರಿನಲ್ಲಂತೂ ಪ್ರೇಕ್ಷಕರು ಮುಗಿಬಿದ್ದು ಟಿಕೆಟ್‌ ಕಾಯ್ದಿರಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಟಿಕೆಟ್‌ ದರ ₹1,500ರವರೆಗೆ ಇದ್ದರೂ ಪ್ರೇಕ್ಷಕರು ಲೆಕ್ಕಿಸದೆ ಖರೀದಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಪ್ರದರ್ಶನಗಳು ನಿಗದಿಯಾಗಿವೆ. ಸದ್ಯಕ್ಕೆ ಚೆನ್ನೈ, ಹೈದರಾಬಾದ್‌ ಹಾಗೂ ಕೊಚ್ಚಿ ನಗರಗಳಲ್ಲಿ ಬುಕಿಂಗ್‌ ಆರಂಭವಾಗಬೇಕಿದೆ.