ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಾಲಿವುಡ್‌ ಸ್ಟೈಲ್‌ನಲ್ಲಿ ‘ಟಾಕ್ಸಿಕ್‌’ ಇಂಗ್ಲಿಷ್‌ ಟ್ರೇಲರ್; ಭಾರತೀಯ ಭಾಷೆಗಳಿಗಿಂತ ಇದು ಭಿನ್ನ, ಹೆಚ್ಚು ಎಫೆಕ್ಟೀವ್‌ ಆಗಿರುವುದು ಏಕೆ?

ʻಟಾಕ್ಸಿಕ್‌ʼ ಸಿನಿಮಾದ ಇಂಗ್ಲಿಷ್‌ ಟ್ರೇಲರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಡಬ್ಬಿಂಗ್ ಬದಲಿಗೆ ನೇರವಾಗಿ ಇಂಗ್ಲಿಷ್‌ನಲ್ಲೇ ಚಿತ್ರೀಕರಣಗೊಂಡಿರುವ ಈ ಆವೃತ್ತಿಯಲ್ಲಿ ಯಶ್ ಅವರ ನೈಜ ಧ್ವನಿ ಹಾಗೂ ಗಾಂಭೀರ್ಯ ಎದ್ದು ಕಾಣುತ್ತಿದೆ. ಗೋವಾದ ಹಿನ್ನೆಲೆಯ ರಕ್ತಸಿಕ್ತ ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಿದ್ದಾರೆ.

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಇಂಗ್ಲಿಷ್ ಟ್ರೇಲರ್ ಆಗಸ್ಟ್ 19 ರಂದು ಬಿಡುಗಡೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದ್ದ ಭಾರತೀಯ ಭಾಷೆಗಳ ಟ್ರೇಲರ್‌ಗಿಂತ ಇಂಗ್ಲಿಷ್ ಆವೃತ್ತಿಯು ಹಾಲಿವುಡ್ ದರ್ಜೆಯ ಮೇಕಿಂಗ್‌ನಿಂದಾಗಿ ಪ್ರೇಕ್ಷಕರನ್ನು ಹೆಚ್ಚು ಸೆಳೆದಿದೆ.

ಇಂಗ್ಲಿಷ್ ಟ್ರೇಲರ್‌ನ ಪ್ರಮುಖ ಬದಲಾವಣೆಗಳು

ಇದು ಕೇವಲ ಡಬ್ ಮಾಡಿದ ಆವೃತ್ತಿಯಲ್ಲ. ಚಿತ್ರತಂಡ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಏಕಕಾಲದಲ್ಲಿ ನಟರೊಂದಿಗೆ ಪ್ರತ್ಯೇಕವಾಗಿ ಶೂಟ್ ಮಾಡಿದೆ. ಹೀಗಾಗಿ ಯಶ್ ಅವರ ಧ್ವನಿ, ಮುಖಭಾವ ಹಾಗೂ ಲಿಪ್‌ ಸಿಂಕ್ ಅತ್ಯಂತ ನ್ಯಾಚುರಲ್‌ ಆಗಿ ಮೂಡಿಬಂದಿದೆ. ಯಶ್ ಯಾವುದೇ ಅತಿಯಾದ ವಿದೇಶಿ ಆಕ್ಸೆಂಟ್ ಬಳಸದೆ, ತಮ್ಮದೇ ಆದ ಗಾಂಭೀರ್ಯದ ಧ್ವನಿಯಲ್ಲಿ ಇಂಗ್ಲಿಷ್ ಸಂಭಾಷಣೆಗಳನ್ನು ಹೇಳಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತೀಯ ಆವೃತ್ತಿಗಿಂತ ಇಂಗ್ಲಿಷ್ ಟ್ರೇಲರ್ 11 ಸೆಕೆಂಡುಗಳಷ್ಟು ಕಡಿಮೆಯಿದ್ದು, ಗನ್‌ಪಾಯಿಂಟ್ ಡೈಲಾಗ್ ಮತ್ತು ಕ್ರೆಡಿಟ್ಸ್ ಭಾಗದಲ್ಲಿ ಕತ್ತರಿ ಪ್ರಯೋಗ ಮಾಡಲಾಗಿದೆ. ಅಲ್ಲದೆ "ಹೆಡ್‌ಫೋನ್ ಬಳಸಿ" ಎಂಬ ಸಂದೇಶವನ್ನು ಕೈಬಿಟ್ಟು, ಅಂತರರಾಷ್ಟ್ರೀಯ ವೇಗಕ್ಕೆ ತಕ್ಕಂತೆ ಕಟ್ ಮಾಡಲಾಗಿದೆ.

ʻಟಾಕ್ಸಿಕ್‌ʼ ಸಿನಿಮಾದ ಕಥೆ ಏನು?

ಪೋರ್ಚುಗೀಸ್ ಆಳ್ವಿಕೆಯ ಅಂತಿಮ ದಿನಗಳ ಕಾಲ್ಪನಿಕ ಗೋವಾದ ಹಿನ್ನೆಲೆಯಲ್ಲಿ ಈ ಗ್ಯಾಂಗ್‌ಸ್ಟರ್ ಆ್ಯಕ್ಷನ್ ಕಥೆ ಸಾಗಲಿದ್ದು, ಯಶ್ 'ರಾಯ' ಮತ್ತು 'ಟಿಕೆಟ್' ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಜಾನ್ ವಿಕ್’ ಮತ್ತು ‘ಫಾಸ್ಟ್ & ಫ್ಯೂರಿಯಸ್’ ಖ್ಯಾತಿಯ ಖ್ಯಾತ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆ.ಜೆ. ಪೆರ್ರಿ ಸಾಹಸ ನಿರ್ದೇಶನ ಮಾಡಿದ್ದಾರೆ.

ಅಂದು ʻಆಟೋಗ್ರಾಫ್‌ ಪ್ಲೀಸ್‌ʼ ಎಂದಿದ್ದ ಯಶ್‌ಗೆ ಅವಮಾನ ಮಾಡಿದ್ದ ಆ‌ ಸ್ಟಾರ್ ನಟ! ʻರಾಕಿ ಭಾಯ್‌ʼ ಬದಲಾಗಲು ಕಾರಣವಾಯ್ತು ಆ ಘಟನೆ

ಡಾರ್ಕ್ ಮೂಡ್, ರಕ್ತಸಿಕ್ತ ಹಿಂಸಾಚಾರ ಹಾಗೂ ವೆಸ್ಟರ್ನ್ ಶೈಲಿಯ ಮೇಕಿಂಗ್ ಹೊಂದಿರುವ ಈ ಚಿತ್ರಕ್ಕೆ ಇಂಗ್ಲಿಷ್ ಆವೃತ್ತಿಯೇ ಪರ್ಫೆಕ್ಟ್ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವರ್ಲ್ಡ್‌ ಮಾರ್ಕೆಟ್‌ ಅನ್ನು ಗುರಿಯಾಗಿಸಿಕೊಂಡಿರುವ ಈ ಸಿನಿಮಾ ಆಗಸ್ಟ್ 26 ರಂದು ವಿಶ್ವಾದ್ಯಂತ ತೆರೆಕಾಣಲಿದೆ.