ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Actor Yash: ʼರಾಮಾಯಣʼ ಅಖಾಡಕ್ಕೆ ರಾಕಿ ಭಾಯ್‌ ಎಂಟ್ರಿ; ಮುಂಬೈಯಲ್ಲಿ ಶೂಟಿಂಗ್‌ ಆರಂಭಿಸಿದ ಯಶ್‌

ಸದ್ಯ ʼಟಾಕ್ಸಿಕ್‌ʼ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಯಶ್‌ ʼರಾಮಾಯಣʼ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ನಿತೇಶ್‌ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಯಶ್‌ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈಯ ಕಡಲತಡಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ʼರಾಮಾಯಣʼ ಸಿನಿಮಾ 2 ಭಾಗಗಳಲ್ಲಿ ತೆರೆಗೆ ಬರಲಿದೆ.

ʼರಾಮಾಯಣʼ ಅಖಾಡಕ್ಕೆ ರಾಕಿ ಭಾಯ್‌ ಯಶ್‌ ಎಂಟ್ರಿ

ಯಶ್‌.

Profile Ramesh B Feb 22, 2025 4:11 PM

ಮುಂಬೈ: ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ 'ಕೆಜಿಎಫ್‌' (KGF) ಸರಣಿ ಚಿತ್ರಗಳ ಮೂಲಕ ರಾಕಿ ಭಾಯ್‌ ಆಗಿ ಸಿನಿ ಜಗತ್ತಿನ ಗಮನ ಸೆಳೆದ ಯಶ್‌ (Actor Yash) ಸದ್ಯ 2 ಪ್ಯಾನ್‌ ಇಂಡಿಯಾ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಯಶ್ ಮುಂದಿನ ಚಿತ್ರಕ್ಕಾಗಿ ಕಾದು ಕುಳಿತವರಿಗೆ ಡಬಲ್‌ ಧಮಾಕ ಸಿಗಲಿದೆ. ಈಗಾಗಲೇ ಗೀತು ಮೋಹನ್‌ದಾಸ್‌ ನಿರ್ದೇಶನದ ʼಟಾಕ್ಸಿಕ್‌ʼ (Toxic) ಚಿತ್ರದಲ್ಲಿ ಅಭಿನಯಿಸುತ್ತಿರುವ ಯಶ್‌ ಮತ್ತೊಂದು ಮಹೋನ್ನತ ಚಿತ್ರ 'ರಾಮಾಯಣ' (Ramayana)ದ ಶೂಟಿಂಗ್‌ ಆರಂಭಿಸಿದ್ದಾರೆ. ಬಾಲಿವುಡ್‌ನ ಯಶಸ್ವಿ ನಿರ್ದೇಶಕ, ಸೂಪರ್‌ ಹಿಟ್‌ ಚಿತ್ರಗಳಿಗೆ ಆ್ಯಕ್ಷನ್‌ ಹೇಳಿರುವ ನಿತೇಶ್‌ ತಿವಾರಿ (Nitesh Tiwari) ಅವರ 'ರಾಮಾಯಣ' ಚಿತ್ರದಲ್ಲಿ ಯಶ್‌ ಕಾಣಿಸಿಕೊಳ್ಳುತ್ತಿದ್ದು, ಮುಂಬೈಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಆ ಮೂಲಕ ಯಶ್‌ ಅಧಿಕೃತವಾಗಿ ʼರಾಮಾಯಣʼ ಚಿತ್ರತಂಡವನ್ನು ಕೂಡಿಕೊಂಡಿದ್ದಾರೆ. ಈಗಾಗಲೇ ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಅಖಾಡಕ್ಕೆ ರಾಕಿ ಭಾಯ್‌ ಎಂಟ್ರಿಯಾಗಿದೆ. ಈ ಚಿತ್ರದಲ್ಲಿ ರಾಮನಾಗಿ ರಣಬೀರ್‌ ಕಪೂರ್‌, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದು, ಯಶ್‌ ರಾವಣನಾಗಿ ಅಬ್ಬರಿಸಲಿದ್ದಾರೆ. ತಾರಾಗಣದಿಂದಲೇ ಸಿನಿಪ್ರಿಯರ ಗಮನ ಸೆಳೆದ ʼರಾಮಾಯಣʼ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ʼರಾಮಾಯಣʼ 2 ಭಾಗಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಮುಂಬೈ ತಲುಪಿರುವ ಯಶ್‌ 'ರಾಮಾಯಣ - ಪಾರ್ಟ್‌ 1'ರ ಚಿತ್ರೀಕರಣ ಆರಂಭಿಸಿದ್ದಾರೆ. ಫೆ. 21ರಿಂದಲೇ ಅವರು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, 2 ದಿನಗಳ ಹಿಂದೆ ಅವರ ಕಾಸ್ಟ್ಯೂಮ್‌ ಟ್ರಯಲ್‌ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

ಸದ್ಯ ಚಿತ್ರದ ಪ್ರಮುಖ ಭಾಗವಾದ ಯುದ್ಧದ ದೃಶ್ಯಗಳ ಶೂಟಿಂಗ್‌ ನಡೆಸಲಾಗುತ್ತಿದೆ. ಯುದ್ಧದ ಕೆಲವು ಭಾಗಗಳನ್ನು ಮುಂಬೈಯ ಅಕ್ಸಾ ಬೀಚ್‌ನಲ್ಲಿ ಚಿತ್ರೀಕರಿಸಲು ಸಿನಿಮಾತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಅದಾದ ಬಳಿಕ ದಹಿಸರ್‌ನಲ್ಲಿ ಸ್ಟುಡಿಯೊಕ್ಕೆ ಚಿತ್ರತಂಡ ತೆರಳಲಿದೆ. ʼʼಯುದ್ಧದ ದೃಶ್ಯಗಳನ್ನು ಬಹಳ ಅದ್ಧೂರಿಯಾಗಿ ಕಟ್ಟಿಕೊಡಲಾಗುತ್ತದೆ. ರಾವಣನ ಸಾಮರ್ಥ್ಯವನ್ನು ಅನಾವರಣಗೊಳಿಸುವ ರೀತಿಯಲ್ಲಿ ಸಾಹಸ ದೃಶ್ಯಗಳನ್ನು ಸೆರೆ ಹಿಡಯಲಾಗುತ್ತದೆ. ವಿಎಫ್‌ಎಕ್ಸ್‌ನ ಸಹಾಯದಿಂದ ಹಿಂದೆದೂ ಕಂಡಿರದ ರೀತಿಯ ಆ್ಯಕ್ಷನ್‌ ದೃಶ್ಯಗಳು ಮೂಡಿ ಬರಲಿವೆ. ಇದು ರಾಮ-ರಾವಣರ ಮುಖಾಮುಖಿಯ ದೃಶ್ಯಗಳಲ್ಲ. ಅದನ್ನು ಮುಂದಿನ ದಿನಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಶೀ‍ಘ್ರದಲ್ಲೇ ಇತರ ಕಲಾವಿದರು ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆʼʼ ಎಂದು ವರದಿಯೊಂದು ತಿಳಿಸಿದೆ. ರಣಬೀರ್‌ ಕಪೂರ್‌, ಸಾಯಿ ಪಲ್ಲವಿ , ರವಿ ದುಬೆ ಮತ್ತಿತತರು ತಮ್ಮ ಪಾಲಿನ ದೃಶ್ಯಗಳ ಚಿತ್ರೀಕರಣವನ್ನು ಈಗಾಗಲೇ ಬಹುತೇಕ ಪೂರ್ಣಗೊಳಿಸಿದ್ದಾರಂತೆ.

ಈ ಸುದ್ದಿಯನ್ನೂ ಓದಿ: Ramayana Movie: ಹಿರಿದಾಗುತ್ತಿದೆ 'ರಾಮಾಯಣ' ಪಾತ್ರವರ್ಗ; ಯಶ್‌ ತಾಯಿ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಎಂಟ್ರಿ

ಯಾವಾಗ ರಿಲೀಸ್‌?

ಮೊದಲೇ ಹೇಳಿದಂತೆ ʼರಾಮಾಯಣʼ 2 ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗ 2026ರ ದೀಪಾವಳಿಯಂದು ಮತ್ತು 2ನೇ ಭಾಗ 2027ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಈ ವರ್ಷಾಂತ್ಯದಲ್ಲಿ ಯಶ್‌ ನಟನೆಯ ʼಟಾಕ್ಸಿಕ್‌ʼ ರಿಲೀಸ್‌ ಆಗಲಿದೆ. ಅಲ್ಲಿಗೆ ಮುಂದಿನ ಸತತ 3 ವರ್ಷ ಯಶ್ ಅವರದ್ದೇ ಹವಾ.