ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yuvarajkumar: ಕೇದಾರನಾಥಕ್ಕೆ ತೆರಳಿ ಶಿವನ ದರ್ಶನ ಪಡೆದ ಯುವ ರಾಜಕುಮಾರ್; ಪೋಸ್ಟ್‌ನಲ್ಲಿ ಏನಿದೆ?

Yuvarajkumar: ಯುವರಾಜಕುಮಾರ್ ಕೇದಾರನಾಥಕ್ಕೆ ತೆರಳಿ, ಶಿವನ ದರ್ಶನ (Shiva) ಪಡೆದು ಬಂದಿದ್ದಾರೆ,ಕೇದಾರನಾಥ ದೇವಸ್ಥಾನ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಯಾತ್ರೆಯಲ್ಲಿ ತಾನು ಜಿವನದ ಬಗ್ಗೆ ಏನೇನು ಕಲಿತೆ ಎನ್ನುವುದನ್ನು ನಟ ತಿಳಿಸಿದ್ದಾರೆ. ಸಾಮಾನ್ಯರಂತೆ ಕೇದಾರನಾಥ ದೇವಸ್ಥಾನಕ್ಕೆ ಚಾರಣ ಮಾಡುವ ಮೂಲಕ ತಲುಪಿದ್ದಾರೆ.

ಯುವ ರಾಜ್‌ಕುಮಾರ್‌

ನಟ ಯುವರಾಜಕುಮಾರ್ (Yuva Rajkumar) ಕೇದಾರನಾಥಕ್ಕೆ ತೆರಳಿ, ಶಿವನ ದರ್ಶನ (Shiva) ಪಡೆದು ಬಂದಿದ್ದಾರೆ,ಕೇದಾರನಾಥ ದೇವಸ್ಥಾನ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಯಾತ್ರೆಯಲ್ಲಿ ತಾನು ಜಿವನದ ಬಗ್ಗೆ ಏನೇನು ಕಲಿತೆ ಎನ್ನುವುದನ್ನು ನಟ ತಿಳಿಸಿದ್ದಾರೆ. ಸಾಮಾನ್ಯರಂತೆ ಕೇದಾರನಾಥ (Kedarnath) ದೇವಸ್ಥಾನಕ್ಕೆ ಚಾರಣ ಮಾಡುವ ಮೂಲಕ ತಲುಪಿದ್ದಾರೆ.

ನಾನು ಅವರ ಸಾನ್ನಿಧ್ಯದಲ್ಲಿ ನಿಂತಿದ್ದೇನೆ

ನಿಜವಾಗಿಯೂ ದೇವರ ಸಾನ್ನಿಧ್ಯದಲ್ಲಿದ್ದೇವೆ ಅನ್ನೋ ಭಾವನೆ ಬಂದಾಗ, ಏನನ್ನೂ ಕೇಳಬೇಕು ಅನ್ನಿಸೋದಿಲ್ಲ. ಏನನ್ನೂ ಬೇಡಬೇಕು ಅನ್ನಿಸೋದಿಲ್ಲ. ಅವರು ಇದ್ದಾರೆ ಅನ್ನೋ ಭರವಸೆ ಸಾಕು. ನನ್ನನ್ನು ಇಲ್ಲಿವರೆಗೆ ತಂದ ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ತಪ್ಪು, ಪ್ರತಿಯೊಂದು ಸರಿಯಾದ ಕೆಲಸ, ಕಲಿತದ್ದು, ಕಲಿಯದೇ ಉಳಿದದ್ದು, ಒಳ್ಳೆಯದು, ಕೆಟ್ಟದ್ದು.. ಎಲ್ಲವೂ ಸೇರಿ ನನ್ನನ್ನು ಈ ಜಾಗಕ್ಕೆ ತಂದಿವೆ. ಇಂದು ನಾನು ಅವರ ಸಾನ್ನಿಧ್ಯದಲ್ಲಿ ನಿಂತಿದ್ದೇನೆ.

ಇದನ್ನೂ ಓದಿ: Naga Chaitanya: ಸಮಂತಾಗೆ ಮೋಸ ! ವೃತ್ತಿಜೀವನವನ್ನು ಹಾಳು ಮಾಡಿದ್ರಿ ಎಂದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ನಾಗ ಚೈತನ್ಯ

ನಾನು ಇರಬೇಕಾದ ಜಾಗದಲ್ಲೇ ಇದ್ದೇನೆ.. ನನ್ನನ್ನು ಇಲ್ಲಿವರೆಗೆ ತಂದಿದ್ದರೆ, ನಾನು ಮಾಡಿದ ಪ್ರತಿಯೊಂದನ್ನೂ ಮತ್ತೆ ಮಾಡುತ್ತೇನೆ. ಹೆಮ್ಮೆಯಿಂದ ಮಾಡುತ್ತೇನೆ. ಯಾಕಂದ್ರೆ ಎಲ್ಲವೂ ಅವರೇ. ಹರ ಹರ ಮಹಾದೇವ. ಇನ್ನೊಂದು ವಿಷಯವೂ ಕಲಿತೆ. ಸುತ್ತಲೂ ನೋಡಿದಾಗ, ಕಿವಿಗೊಟ್ಟಾಗ. ಆ ಹಿಮಾಲಯ ಪರ್ವತಗಳು, ಮಧ್ಯದಲ್ಲಿ ದೇವಾಲಯ, ಆ ಜನ, ಆ ಕುದುರೆಗಳು, ಪ್ರಾರ್ಥನೆಗಳು, ಗಂಟೆಗಳ ಶಬ್ದ, ಹರಿಯುವ ನದಿ ಇಷ್ಟೆಲ್ಲಾ ಶಬ್ದಗಳ ಮಧ್ಯೆಯೂ, ಅತ್ಯಂತ ಜೋರಾಗಿ ಕೇಳಿಸಿದ್ದು ಮೌನ."

ನಿಜವಾಗಿಯೂ ದೇವರ ಸಾನ್ನಿಧ್ಯದಲ್ಲಿದ್ದೇವೆ ಅನ್ನೋ ಭಾವನೆ ಬಂದಾಗ, ಏನನ್ನೂ ಕೇಳಬೇಕು ಅನ್ನಿಸೋದಿಲ್ಲ. ಅವರು ಇದ್ದಾರೆ ಅನ್ನೋ ಭರವಸೆ ಸಾಕು. ನನ್ನನ್ನು ಇಲ್ಲಿವರೆಗೆ ತಂದ ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ತಪ್ಪು, ಪ್ರತಿಯೊಂದು ಸರಿಯಾದ ಕೆಲಸ, ಕಲಿತದ್ದು, ಕಲಿಯದೇ ಉಳಿದದ್ದು.



ಇಂದು ನಾನು ಅವರ ಸಾನ್ನಿಧ್ಯದಲ್ಲಿ ನಿಂತಿದ್ದೇನೆ. ನಾನು ಇರಬೇಕಾದ ಜಾಗದಲ್ಲೇ ಇದ್ದೇನೆ.. ನನ್ನನ್ನು ಇಲ್ಲಿವರೆಗೆ ತಂದಿದ್ದರೆ, ನಾನು ಮಾಡಿದ ಪ್ರತಿಯೊಂದನ್ನೂ ಮತ್ತೆ ಮಾಡುತ್ತೇನೆ. ಹೆಮ್ಮೆಯಿಂದ ಮಾಡುತ್ತೇನೆ. ಯಾಕಂದ್ರೆ ಎಲ್ಲವೂ ಅವರೇ. ಹರ ಹರ ಮಹಾದೇವ. ಇನ್ನೊಂದು ವಿಷಯವೂ ಕಲಿತೆ. ಸುತ್ತಲೂ ನೋಡಿದಾಗ, ಕಿವಿಗೊಟ್ಟಾಗ.ಆ ಹಿಮಾಲಯ ಪರ್ವತಗಳು, ಮಧ್ಯದಲ್ಲಿ ದೇವಾಲಯ, ಆ ಜನ, ಆ ಕುದುರೆಗಳು, ಪ್ರಾರ್ಥನೆಗಳು, ಗಂಟೆಗಳ ಶಬ್ದ, ಹರಿಯುವ ನದಿ.

ಇದನ್ನೂ ಓದಿ: Ajith Kumar: ನಟ ಅಜಿತ್ ತಾಯಿ ಮೋಹಿನಿ ಮಣಿ ನಿಧನ

ಇಷ್ಟೆಲ್ಲಾ ಶಬ್ದಗಳ ಮಧ್ಯೆಯೂ, ಅತ್ಯಂತ ಜೋರಾಗಿ ಕೇಳಿಸಿದ್ದು ಮೌನ." ನನ್ನ ಮುಂದಿನ ಹೆಜ್ಜೆ ಏನು? ಮುಂದಿನ ಸಿನಿಮಾ ಯಾವುದು? ಮುಂದಿನ ಉತ್ತರ ಏನು? ಅಂತ ಕೇಳುವ ಎಲ್ಲರಿಗೂ... ಮೌನವನ್ನು ಆನಂದಿಸಿ. ಯಾಕಂದ್ರೆ... ಹರ ಹರ ಮಹಾದೇವ ಎಂದು ಬರೆದುಕೊಂಡಿದ್ದಾರೆ.

Yashaswi Devadiga

View all posts by this author