ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Zee Kannada: ಸದಾ ನಿಮ್ಮೊಂದಿಗೆ ನಿಮ್ಮ ಝೀ ಕನ್ನಡ - ಇದು ಝೀ ಕನ್ನಡದ ಹೊಸ ಅಧ್ಯಾಯ!

ಝೀ ಕನ್ನಡ ವಾಹಿನಿ ‘ಸದಾ ನಿಮ್ಮೊಂದಿಗೆ’ ಎಂಬ ಬ್ರಾಂಡ್ ಟ್ಯಾಗ್ ಲೈನ್ ಮೂಲಕ ಹೊಸತನದೊಂದಿಗೆ ನಿಮ್ಮ ಮುಂದೆ ಬಂದಿದೆ. ಸದಾ ನಿಮ್ಮೊಂದಿಗೆ ಎಂಬ ಅಭಿಯಾನವು ಕರುನಾಡಿನ ಸಂಸ್ಕೃತಿ ಮತ್ತು ಒಗ್ಗಟ್ಟನ್ನು ಬಿಂಬಿಸುತ್ತದೆ. 'ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಅರ್ಥವನ್ನು ಇಟ್ಟುಕೊಂಡು ಮಾಡಿರುವ ಈ ಅಭಿಯಾನವು ಎಲ್ಲರೂ ಜೊತೆಯಾಗಿ ಬೆಳೆಯೋಣ, ಜೊತೆ ಯಾಗಿ ಸಂಭ್ರಮಿಸೋಣ ಮತ್ತು ಜೊತೆಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಸುಂದರವಾಗಿ ತೋರಿಸಿಕೊಡಲಿದೆ.

ಬೆಂಗಳೂರು: ಕನ್ನಡಿಗರ ನೆಚ್ಚಿನ ಝೀ ಕನ್ನಡ ವಾಹಿನಿ (Zee Kannada) ಒಂದು ತಿಂಗಳಲ್ಲಿ 12.2ಮಿಲಿಯನ್ ಮನೆಗಳ 45 ಕ್ಕೂ ಅಧಿಕ ಮಿಲಿಯನ್ ವೀಕ್ಷಕರನ್ನು ತಲುಪಿದ್ದು, ಈಗ ‘ಸದಾ ನಿಮ್ಮೊಂದಿಗೆ’ (Sadaa Nimmondige) ಎಂಬ ಬ್ರಾಂಡ್ ಟ್ಯಾಗ್ ಲೈನ್ ಮೂಲಕ ಹೊಸತನದೊಂದಿಗೆ ನಿಮ್ಮ ಮುಂದೆ ಬಂದಿದೆ. ಸದಾ ನಿಮ್ಮೊಂದಿಗೆ ಎಂಬ ಅಭಿಯಾನವು ಕರುನಾಡಿನ ಸಂಸ್ಕೃತಿ ಮತ್ತು ಒಗ್ಗಟ್ಟನ್ನು ಬಿಂಬಿಸುತ್ತದೆ. 'ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಅರ್ಥವನ್ನು ಇಟ್ಟುಕೊಂಡು ಮಾಡಿರುವ ಈ ಅಭಿಯಾನವು ಎಲ್ಲರೂ ಜೊತೆಯಾಗಿ ಬೆಳೆಯೋಣ, ಜೊತೆಯಾಗಿ ಸಂಭ್ರಮಿಸೋಣ ಮತ್ತು ಜೊತೆಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಸುಂದರವಾಗಿ ತೋರಿಸಿಕೊಡಲಿದೆ

ಝೀ ಕನ್ನಡದ ಬ್ರಾಂಡ್ ಫಿಲಂ ನಲ್ಲಿ ಕನ್ನಡಿಗರ ವಿಶ್ವಾಸ, ಪ್ರೀತಿ, ಒಗ್ಗಟ್ಟು ಹಾಗು ಹಳೆಯ ಮತ್ತು ಶ್ರೇಷ್ಠವಾದ ಪರಂಪರೆ ಯನ್ನು ತುಂಬಾ ಸುಂದರವಾಗಿ ತೋರಿಸಲಾಗಿದೆ.ಮಂಡ್ಯದ ಕಣ್ಣುಕುಕ್ಕುವ ಪ್ರಕೃತಿ ಸೌಂದರ್ಯದ ನಡುವೆ ಸೆರೆಹಿಡಿ ಯಲಾದ ಈ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಮದುವೆಯು ಕಂಡುಬರುತ್ತದೆ. ಇಲ್ಲಿ ಕಾಣಿಸುವ ಪುರಾತನ ದೇವಸ್ಥಾನ , ರಂಗುರಂಗಾದ ರಂಗೋಲಿ, ಚಪ್ಪರ, ಅರಶಿನ ಶಾಸ್ತ್ರ ಸೇರಿ ಬಗೆ ಬಗೆಯ ಸಾಂಸ್ಕೃತಿಕ ಅಂಶಗಳು ಸುಂದರ ವಾದ ದೃಶ್ಯಕಾವ್ಯವೇ ಸರಿ!

ಮಗಳ ಮದುವೆಯ ಹಿಂದಿನ ದಿನ ಕರ್ತವ್ಯ ನಿಷ್ಠೆಯ ನಿಮಿತ್ತ ಮತ್ತೆ ಸೈನ್ಯಕ್ಕೆ ಹೋಗುವ ಅಪ್ಪನ ಭಾಗಣೆಗಳನ್ನು ಈ ಚಿತ್ರದಲ್ಲಿ ತುಂಬಾ ಭಾವನಾತ್ಮಕವಾಗಿ ತೋರಿಸಲಾಗಿದೆ. ತಂದೆಯ ಅನುಪಸ್ಥಿತಿಯಲ್ಲಿ ಇಡೀ ಗ್ರಾಮವೇ ತಾಯಿಯ ಬೆಂಬ ಲಕ್ಕೆ ಬಂದು ಮದುವೆಯ ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರು ಹೊತ್ತುಕೊಂಡು ಸಲೀಸಾಗಿ ಮಗಳ ಮದುವೆಯನ್ನು ನೆರವೇರಿಸಲು ಸಹಾಯ ಮಾಡುತ್ತಾರೆ. ಸೈನಿಕ ವಾಪಾಸಾದಾಗ ಆತನ ಹೆಂಡತಿ "ಇಷ್ಟು ದೊಡ್ಡ ಕುಟುಂಬವೇ ನಮ್ಮ ಜೊತೆ ಇದ್ದ ಮೇಲೆ, ನಮಗೇನು ಚಿಂತೆ" ಎನ್ನುತ್ತಾಳೆ. "ಕೂಡಿ ಬಾಳಿದರೆ ಸ್ವರ್ಗ ಸುಖ" ಎಂಬುದು ಈ ಅಭಿಯಾನದ ಮುಖ್ಯ ಅಂಶವಾಗಿದೆ.

ಝೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ "ಸದಾ ನಿಮ್ಮೊಂದಿಗೆ ನಿಮ್ಮ ಝೀ ಕನ್ನಡ ಅಭಿಯಾನವು ನಾವು ನಮ್ಮ ವೀಕ್ಷಕರ ಜೊತೆಗೆ ಹೊಂದಿರುವ ಭಾವನೆಗಳ ಸಂಭ್ರಮಾಚರಣೆ. ಝೀ ಕನ್ನಡದ ಬ್ರಾಂಡ್ ಫಿಲಂ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುತ್ತದೆ. ಇದು ಬರೀ ರಿಬ್ರ್ಯಾಂಡಿಂಗ್ ಆಗಿರದೆ ವೀಕ್ಷಕರ ಜೊತೆಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಲಿದೆ" ಎಂದರು.

ಇದನ್ನು ಓದಿ: Agnyathavasi Movie: Zee5 ಒಟಿಟಿಗೆ ʼಅಜ್ಞಾತವಾಸಿʼ ಎಂಟ್ರಿ; ಯಾವಾಗ ಪ್ರಸಾರ?

23ನೇ ಜೀ ಸಿನಿ ಅವಾರ್ಡ್ಸ್ 2025 ರ ಪ್ರಸಾರದ ಸಂದರ್ಭದಲ್ಲಿ ಈ ಅಭಿಯಾನವನ್ನು ಅನಾವರಣಗೊಳಿಸಲಾಯಿತು. ಎಲ್ಲಾ ಏಳು ಭಾಷೆಯಲ್ಲಿ ಈ ಅಭಿಯಾನವು ಏಕಕಾಲದಲ್ಲಿ ಪ್ರದರ್ಶನ ಗೊಳ್ಳುವುದರೊಂದಿಗೆ ಒಂದೇ ಸಮಯದಲ್ಲಿ ಏಳು ವಿಭಿನ್ನ ಧ್ವನಿಗಳ ಮೂಲಕ ಒಂದೇ ಕಲ್ಪನೆಯನ್ನು ಅನುಭವಿಸುವ ವಿಭಿನ್ನ ಅವಕಾಶ ಪ್ರೇಕ್ಷಕರಿಗೆ ದೊರಕಿತು. ಝೀ ಕನ್ನಡದ ‘ಸದಾ ನಿಮ್ಮೊಂದಿಗೆ ನಿಮ್ಮ ಝೀ ಕನ್ನಡ’ ಅಭಿಯಾನ ಪ್ರಸಾರ ಆದ ನಂತರ, ಧಾರಾವಾಹಿಗಳು, ನಾನ್ ಫಿಕ್ಷನ್ ಷೋಗಳಲ್ಲಿ ಅಭಿಯಾನದ ಮುಖ್ಯ ದ್ಯೇಯವನ್ನು ಕಥೆ, ಸ್ಕಿಟ್ ಗಳ ಮೂಲಕ ವೀಕ್ಷಕರಿಗೆ ಇನ್ನಷ್ಟು ತಲುಪಿಸುವ ಪ್ರಯತ್ನ ಮಾಡ ಲಾಗುತ್ತದೆ ‘ಸದಾ ನಿಮ್ಮೊಂದಿಗೆ ನಿಮ್ಮ ಝೀ ಕನ್ನಡ’ ಅಭಿಯಾನದಿಂದ ಝೀ ಕನ್ನಡ ಬರೀ ಕಂಟೆಂಟ್ ಪ್ರೊವೈಡರ್ ಆಗಿರದೇ, ಒಗ್ಗಟ್ಟು, ಮೌಲ್ಯಗಳು, ಸಾಂಸ್ಕೃತಿಕ ಹಾಗು ಕನ್ನಡನಾಡಿನ ಪರಂಪರೆಯನ್ನು ಎತ್ತಿಹಿಡಿಯುವ ಕಲ್ಚರಲ್ ಪ್ರೊವೈಡರ್ ಕೂಡ ಆಗಲಿದೆ.