ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಒಲವ ʼಅಮೃತಧಾರೆʼಗೆ ರಾಜೇಶ್‌ ನಟರಂಗ ಭಾವುಕ ವಿದಾಯ; ಕೊನೆ ದಿನ ಶೂಟಿಂಗ್ ಮುಗಿಸಿದ ತಂಡ

Amruthadhaare Serial: ಜೀ ಕನ್ನಡದ ಜನಪ್ರಿಯ 'ಅಮೃತಧಾರೆ' ಧಾರಾವಾಹಿಯ ಶೂಟಿಂಗ್‌ (Amruthadhaare serial End) ಮುಕ್ತಾಯಗೊಂಡಿದೆ. ಕೊನೆಯ ದಿನದ ಶೂಟಿಂಗ್‌ ಫೋಟೋ ವೈರಲ್‌ ಆಗಿದೆ. ಅಷ್ಟೇ ಅಲ್ಲ ನಟ ರಾಜೇಶ್‌ ಭಾವುಕರಾಗಿ ಮಾತನಾಡಿದ್ದಾರೆ. ಈ ಧಾರಾವಾಹಿಯ (Gowri Putra) ಜಾಗಕ್ಕೆ ಹೊಸದಾಗಿ 'ಗೌರಿಪುತ್ರ' ಬರಲಿದ್ದಾನೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡದ ಜನಪ್ರಿಯ 'ಅಮೃತಧಾರೆ' ಧಾರಾವಾಹಿಯ ಶೂಟಿಂಗ್‌ (Amruthadhaare serial End) ಮುಕ್ತಾಯಗೊಂಡಿದೆ. ಕೊನೆಯ ದಿನದ ಶೂಟಿಂಗ್‌ ಫೋಟೋ ವೈರಲ್‌ ಆಗಿದೆ. ಅಷ್ಟೇ ಅಲ್ಲ ನಟ ರಾಜೇಶ್‌ ಭಾವುಕರಾಗಿ ಮಾತನಾಡಿದ್ದಾರೆ. ಈ ಧಾರಾವಾಹಿಯ (Gowri Putra) ಜಾಗಕ್ಕೆ ಹೊಸದಾಗಿ 'ಗೌರಿಪುತ್ರ' ಬರಲಿದ್ದಾನೆ.

7 ಗಂಟೆಗೆ ಅಮೃತಧಾರೆ ಸೀರಿಯಲ್

ಶಕುಂತಲಾ ಮತ್ತು ಜೈದೇವ್ ಅಂತ್ಯ ಹಾಗೂ ಭೂಮಿಕಾ-ದೀಪಿಕಾ ರಹಸ್ಯದ ಬಗ್ಗೆ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿದೆ. ಕೊನೆ ದಿನದ ಚಿತ್ರೀಕರಣ ವೇಳೆ ಕಲಾವಿದರು ಮತ್ತು ತಂತ್ರಜ್ಞರೆಲ್ಲರೂ ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.ಭೂಮಿಕಾ ಬದುಕಿರೋ ವಿಷಯ ತಿಳಿಯದ ಜೈದೇವ್ ಮತ್ತು ಶಕುಂತಲಾ ಮುಂದಿನ ಪ್ಲಾನ್ ಬಗ್ಗೆ ಚರ್ಚಿಸಲು ತಾಯಿ-ಮಗ ಒಂದೆಡೆ ಸೇರುತ್ತಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರನ್ನು ಹಿಡಿಯುವ ಯೋಚನೆಯನ್ನು ಗೌತಮ್ ಮತ್ತು ಪಾರ್ಥ್ ಮಾಡಿದ್ದಾರೆ ನಾಲ್ಕು ವರ್ಷಗಳಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಅಮೃತಧಾರೆ ಸೀರಿಯಲ್ ಪ್ರಸಾರವಾಗುತ್ತಿತ್ತು.

ಇದನ್ನೂ ಓದಿ: Bigg Boss Kannada 13: ಜಗದೀಶ್‌ಗೆ ಕಿಚ್ಚ ಸುದೀಪ್ ಕ್ಲಾಸ್, ನಂಬರ್ 1 ಸ್ಥಾನಕ್ಕಾಗಿ ಮನೆಯವರ ನಡುವೆ ಫೈಟ್!

ಧಾರಾವಾಹಿಯಲ್ಲಿ 'ಗೌತಮ್ ದಿವಾನ್' ಎಂಬ ಪ್ರಮುಖ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ರಾಜೇಶ್, 'ಶುಕ್ರವಾರ ಅಮೃತಧಾರೆ ಧಾರಾವಾಹಿಯ ಕೊನೆಯ ದಿನದ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರತಿಯೊಂದಕ್ಕೂ ಮುಕ್ತಾಯದ ದಿನಾಂಕ ಇದ್ದೇ ಇರುತ್ತದೆ. ಅಂತೆಯೇ ಅಮೃತಧಾರೆಗೂ ಅಂತ್ಯದ ಸಮಯ ಬಂದಿದೆ. ಇನ್ನು ಕೆಲವೇ ಕಂತುಗಳು ಬಾಕಿ ಉಳಿದಿದ್ದು, ಯಾರೂ ಬೇಸರ ಮಾಡಿಕೊಳ್ಳಬೇಡಿ' ಎಂದಿದ್ದಾರೆ.



ಕಳೆದ ಮೂರೂವರೆ ವರ್ಷಗಳಿಂದ ಗೌತಮ್ ದಿವಾನ್‌ ಪಾತ್ರಕ್ಕೆ ಜೀವತುಂಬಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಧಾರಾವಾಹಿಯ ಸಮಸ್ತ ತಾಂತ್ರಿಕ ವರ್ಗ, ಕಲಾವಿದರು ಹಾಗೂ ಮುಖ್ಯವಾಗಿ ಭೂಮಿಕಾ ಪಾತ್ರದಲ್ಲಿ ನಟಿಸಿದ ಛಾಯಾ ಸಿಂಗ್ ಅವರಿಗೆ ನನ್ನ ಕೃತಜ್ಞತೆಗಳು. 20 ವರ್ಷಗಳ ನಂತರ ಕಿರುತೆರೆಯಲ್ಲಿ ಇಷ್ಟು ಸುದೀರ್ಘ ಪಯಣ ಮಾಡುತ್ತೇನೆ ಎಂದು ಭಾವಿಸಿರಲಿಲ್ಲ.

ಇದನ್ನೂ ಓದಿ: Bigg Boss Kannada 13: ಪತ್ರ ಪಡೆಯುವ ವೇಳೆ ಗಾನವಿ ಹೈಡ್ರಾಮ; ಮೊಸಳೆ ಕಣ್ಣೀರಿನ ಕಥೆ ಬಿಚ್ಚಿಟ್ಟ ಕಿಚ್ಚ

ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಸಣ್ಣ ಭಯವಿತ್ತು. ಆದರೆ ಜನ ನೀಡಿದ ಅಪಾರ ಪ್ರೀತಿಗೆ ಕೃತಜ್ಞತೆ ತಿಳಿಸಲು ಮಾತುಗಳೇ ಸಾಲುತ್ತಿಲ್ಲ' ಎಂದು ಹೇಳಿದ್ದಾರೆ.

Yashaswi Devadiga

View all posts by this author