ʻದಳಪತಿʼ ವಿಜಯ್ ನಟನೆಯ ಬಹುನಿರೀಕ್ಷಿತ ʻಜನ ನಾಯಗನ್ʼ ಸಿನಿಮಾವು ಯಾವಾಗ ತೆರೆಗೆ ಬರಲಿದೆ ಎಂಬುದು ಇನ್ನೂ ನಿಗೂಢವಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜನವರಿ 9ರಂದು ಸಂಕ್ರಾಂತಿ ಹಬ್ಬದಂದು ತೆರೆಗೆ ಬರಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿಮಾ ಬಿಡುಗಡೆ ಪದೇಪದೇ ಮುಂದಕ್ಕೆ ಹೋಗುತ್ತಿದೆ. ಈ ಮಧ್ಯೆ ಚಿತ್ರದ ಓಟಿಟಿ ಡೀಲ್ ಕ್ಯಾನ್ಸಲ್ ಆದ ಸುದ್ದಿ ಬಹಳ ವೈರಲ್ ಆಗಿತ್ತು. ಇದೀಗ ಮತ್ತೊಂದು ಒಟಿಟಿಯಿಂದ ಆಫರ್ ಬಂದಿದೆ.
ಅಮೇಜಾನ್ ಪ್ರೈಮ್‌ನಿಂದ ಡೀಲ್ ಕ್ಯಾನ್ಸಲ್
ಜನ ನಾಯಗನ್ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ಖರೀದಿ ಮಾಡಿತ್ತು. ಸುಮಾರು 120 ಕೋಟಿ ರೂ.ಗಳನ್ನು ನೀಡಿ, ಈ ಹಕ್ಕುಗಳನ್ನ ಖರೀದಿ ಮಾಡಲಾಗಿತ್ತು. ಆದರೆ ಯಾವಾಗ ಈ ಸಿನಿಮಾವು ಅಂದುಕೊಂಡ ಸಮಯಕ್ಕೆ ತೆರೆಕಾಣಲಿಲ್ಲವೋ, ಅಮೇಜಾನ್ ಪ್ರೈಮ್ ಡಿಜಿಟಲ್ ಹಕ್ಕುಗಳ ಒಪ್ಪಂದವನ್ನು ರದ್ದು ಮಾಡಿಕೊಂಡಿತ್ತು. ಇದು ಜನ ನಾಯಗನ್ ನಿರ್ಮಾಪಕರಿಗೆ ದೊಡ್ಡ ಹಿನ್ನಡೆ ಆಗಿತ್ತು ಎಂದು ಮೂಲಗಳು ಹೇಳಿದ್ದವು.
ಆದರೆ, ಇದೀಗ ʻಜನ ನಾಯಗನ್ʼ ನಿರ್ಮಾಪಕರಿಗೆ ಹೊಸದೊಂದು ಒಟಿಟಿ ಡೀಲ್ ಬಂದಿದೆಯಂತೆ. ಹೌದು, ಜೀ ಸ್ಟುಡಿಯೋಸ್ ಸಂಸ್ಥೆಯು ಎಲ್ಲಾ ಭಾಷೆಗಳ ಡಿಜಿಟಲ್ ಹಕ್ಕುಗಳಿಗಾಗಿ 50 ಕೋಟಿ ರೂಪಾಯಿಗಳ ಆಫರ್ ನೀಡಿದೆಯಂತೆ. ಈ ಹಿಂದೆ ಅಮೇಜಾನ್ ಪ್ರೈಮ್ ಮಾಡಿಕೊಂಡಿದ್ದ ಒಪ್ಪಂದದ ಬೆಲೆಯ ಅರ್ಧಕ್ಕಿಂತಲೂ ಕಡಿಮೆ ಹಣವನ್ನು ಜೀ ಸ್ಟುಡಿಯೋಸ್ ಆಫರ್ ಮಾಡಿದೆ. ಆದರೆ, ಈ ಆಫರ್ ಅನ್ನು ಚಿತ್ರತಂಡ ಒಪ್ಪಿಕೊಂಡಿದೆಯಾ? ಸದ್ಯಕ್ಕಂತೂ ಆ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.
ಒಂದು ಸಂದರ್ಭದಲ್ಲಿ ಭಾರಿ ಸದ್ದು ಮಾಡಿದ್ದ ಜನ ನಾಯಗನ್ ಸಿನಿಮಾವು ಸದ್ಯ ತೆರೆಕಾಣಲು ಕಷ್ಟಪಡುತ್ತಿದೆ. ಸದ್ಯಕ್ಕೆ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ರಿವೈಸಿಂಗ್ ಕಮಿಟಿಯು ಸಿನಿಮಾ ವೀಕ್ಷಿಸಿದ್ದರೂ, ಸೆನ್ಸಾರ್ ಪ್ರಮಾಣಪತ್ರ ಇನ್ನು ದೊರೆತಿಲ್ಲ. ಮೇ 4ರಂದು ತಮಿಳುನಾಡು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಆನಂತರ ʻಜನ ನಾಯಗನ್ʼ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
Jana Nayagan: 'ಜನ ನಾಯಗನ್' ದೃಶ್ಯ ಲೀಕ್; ಬೆಂಬಲಕ್ಕೆ ನಿಂತ ತಾರೆಯರು
ಎಚ್. ವಿನೋದ್ ನಿರ್ದೇಶನ ಮಾಡಿರುವ ಜನ ನಾಯಗನ್ ಸಿನಿಮಾದಲ್ಲಿ ಮಮಿತಾ ಬೈಜು, ಪೂಜಾ ಹೆಗ್ಡೆ, ಪ್ರಕಾಶ್ ರಾಜ್, ಬಾಬಿ ಡಿಯೋಲ್ ಮುಂತಾದವರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.