ಬೆಂಗಳೂರು: ಇತ್ತೀಚೆಗಷ್ಟೇ ಝೀ 5 (ZEE5) ಕನ್ನಡ ಪ್ರೇಕ್ಷಕರಿಗಾಗಿ ಮಿನಿ ವೆಬ್ ಸಿರೀಸ್ ಪರಿಚಯಿಸಿ ಯಶಸ್ವಿ ಕಂಡಿದೆ. ಇದೀಗ ಝೀ 5 ಮತ್ತೊಂದು ತನ್ನ ಹೊಸ ಅಧ್ಯಾಯವನ್ನು ಅನಾವರಣ ಮಾಡಿದೆ. ಭಾರತದ ಅಗ್ರಗಣ್ಯ ಒಟಿಟಿ ವೇದಿಕೆಗಳಲ್ಲಿ ಒಂದಾಗಿರುವ ಝೀ 5 ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿದೆ. ʼಬಹುಭಾಷೆಗಳು, ಅನಂತ ಕಥೆಗಳುʼ ಎಂಬ ಹೊಸ ಅಧ್ಯಾಯ ಪರಿಚಯಿಸಿದೆ. ಅಂದರೆ ಇನ್ಮುಂದೆ ನಿಮ್ಮ ನಿಮ್ಮ ಭಾಷೆಗಳಲ್ಲಿ ಸಿನಿಮಾ, ಸಿರೀಸ್ ನೋಡುವ ಅವಕಾಶ ಒದಗಿಸಿದೆ. ಭಾರತದ ಪ್ರಮುಖ ಭಾಷೆಗಳೊಂದಿಗೆ ಝೀ 5 ತನ್ನ ಪ್ರೇಕ್ಷಕರೊಂದಿಗಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸಿದೆ.
ಕನ್ನಡ ಸೇರಿದಂತೆ ಹಲವು ಭಾಷೆಗಳಿಗಾಗಿ ಝೀ 5 ಲಾಂಗ್ವೇಜ್ ಪ್ಯಾಕ್ ಅವಕಾಶ ನೀಡಿದೆ. ಇಲ್ಲಿ ನಿಮ್ಮಿಷ್ಟದ ಭಾಷೆಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಲಾಂಗ್ವೇಜ್ ಪ್ಯಾಕ್‌ಗಳು ತಿಂಗಳಿಗೆ 120 ರೂ.ಯಿಂದ ಪ್ರಾರಂಭವಾಗುತ್ತದೆ. ಎಲ್ಲ ಭಾಷೆಯ ಪ್ಯಾಕ್ ತಿಂಗಳಿಗೆ 320 ರೂ.ಗೆ ಲಭ್ಯ ಮತ್ತು ಎಲ್ಲ ಪ್ಯಾಕ್‌ಗಳು ವಾರ್ಷಿಕ ಪ್ಯಾಕ್ ರೂಪಾಂತರಗಳನ್ನು ಕೂಡ ಹೊಂದಿರುತ್ತವೆ. ಹಿಂದಿ ಪಂಜಾಬಿ ಮತ್ತು ಭೋಜ್‌ಪುರಿ ವಿಷಯ ಸೇರಿದಂತೆ ಬೆಲೆ 220 ರೂ. ಆಗಿದೆ. ಝೀ 5 ವೀಕ್ಷಕರಿಗೆ ಪ್ರೀಮಿಯಂ-ಗುಣಮಟ್ಟದ ಸ್ಟ್ರೀಮಿಂಗ್ ಅನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
ಭಾರತೀಯ ಪ್ರೇಕ್ಷಕರ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ನಮ್ಮ ಹೊಸ ಬ್ರ್ಯಾಂಡ್ ಗುರುತು ಒಂದು ಪ್ರಮುಖ ಹೆಜ್ಜೆಯಾಗಿದೆ. ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಲು ಇದು ಉತ್ತಮ ಸಮಯ ಎಂದು ಝೀ ಎಂಟರ್‌ಟೈನ್‌ಮೆಂಟ್ ಎಂಟರ್ ಪ್ರೈಸಸ್ಲಿಮಿಟೆಡ್ ಡಿಜಿಟಲ್ ವ್ಯವಹಾರಗಳು ಮತ್ತು ವೇದಿಕೆಗಳ ಅಧ್ಯಕ್ಷ ಅಮಿತ್ ಗೋಯೆಂಕಾ ಹೇಳಿದ್ದಾರೆ.
ಇದನ್ನು ಓದಿ: SSMB29 Movie: ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಮಾಧವನ್ ಎಂಟ್ರಿ?
ʼಬಹುಭಾಷಾ, ಅನಂತ ಕಥೆಗಳು' ಎಂಬ ಟ್ಯಾಗ್‌ಲೈನ್‌ನೊಂದಿಗೆ ನಮ್ಮ ಬ್ರ್ಯಾಂಡ್ ಅಭಿಯಾನವು ಪ್ರತಿಯೊಬ್ಬ ವ್ಯಕ್ತಿಯ ಭಾಷಾ ಭಾವನೆಯ ಆಚರಣೆಯಾಗಿದೆ. ಈ ಅಭಿಯಾನವು ನಿಮ್ಮ ಭಾಷೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಅದರ ಜತೆ ಕಥೆಗಳಿಗೆ ಅಂತ್ಯವಿಲ್ಲ ಎಂಬ ಝೀ 5 ನಂಬಿಕೆಗೆ ಜೀವ ತುಂಬುತ್ತದೆ. ಝೀ 5 ಮೂಲಕ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಝೀ ಎಂಟರ್‌ಟೈನ್‌ಮೆಂಟ್ ಎಂಟಪ್ರೈಸಸ್ ಲಿಮಿಟೆಡ್ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ಮಹಾದೇವ್ ಭರವಸೆ ನೀಡಿದ್ದಾರೆ.