ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕದ ದಿಗ್ಬಂಧನದ ನಂತರ ಹೊರ್ಮುಜ್‌ ಜಲಸಂಧಿಯಲ್ಲಿ ಸಿಲುಕಿರುವ 15 ಭಾರತೀಯ ಹಡಗುಗಳು

Indian ships: ಕದನ ವಿರಾಮ ಮಾತುಕತೆ ವಿಫಲವಾದ ನಂತರ ಕನಿಷ್ಠ ಭಾರತೀಯ ಧ್ವಜ ಹೊಂದಿರುವ ಕನಿಷ್ಠ 15 ಹಡಗುಗಳು ಈಗ ಹೊರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಿಲುಕಿಕೊಂಡಿವೆ. ಕನಿಷ್ಠ ಆರು ಭಾರತೀಯ ನೌಕಾಪಡೆಯ ಹಡಗುಗಳು ಪ್ರಸ್ತುತ ಪರ್ಷಿಯನ್ ಕೊಲ್ಲಿಯ ಬಳಿ ನೆಲೆಗೊಂಡಿದ್ದು, ವಾಣಿಜ್ಯ ಸಂಚಾರಕ್ಕಾಗಿ ಸಂವಹನ, ಮೇಲ್ವಿಚಾರಣೆ ಮತ್ತು ಸುರಕ್ಷಿತ ಮಾರ್ಗಕ್ಕೆ ಎದುರು ನೋಡುತ್ತಿವೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಏ. 13: ಕದನ ವಿರಾಮ ಮಾತುಕತೆ ವಿಫಲವಾದ ನಂತರ ಅಮೆರಿಕವು ಇರಾನಿನ (US-Iran) ಬಂದರು ಮತ್ತು ಕರಾವಳಿ ಪ್ರದೇಶಗಳ ಮೇಲೆ ತಡೆ ಘೋಷಿಸಿದ ಹಿನ್ನೆಲೆಯಲ್ಲಿ ಜಗತ್ತಿನ ಅತ್ಯಂತ ಬ್ಯುಸಿ ಇಂಧನ ಸಾಗಾಟ ಮಾರ್ಗಗಳಲ್ಲಿ ಒಂದಾದ ಹೊರ್ಮುಜ್‌ ಜಲಸಂಧಿಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಕನಿಷ್ಠ 15 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಈಗ ಹೊರ್ಮುಜ್ (Strait of Hormuz) ಪಶ್ಚಿಮ ಭಾಗದಲ್ಲಿ ಸಿಲುಕಿಕೊಂಡಿವೆ.

ಅರೇಬಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿಯಾದ್ಯಂತ ಇರಾನಿನ ಬಂದರುಗಳನ್ನು ಒಳಗೊಂಡಂತೆ ಸೋಮವಾರದಿಂದ (ಏಪ್ರಿಲ್‌ 13) ಜಾರಿ ಪ್ರಾರಂಭವಾಗಲಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಹೇಳಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿತು. ಹೊರ್ಮುಜ್ ಜಲಸಂಧಿಯ ಮೂಲಕ ಇರಾನಿನೇತರ ಬಂದರುಗಳ ನಡುವಿನ ಸಾಗಣೆಯನ್ನು ಔಪಚಾರಿಕವಾಗಿ ನಿಲ್ಲಿಸಲಾಗಿಲ್ಲವಾದರೂ, ಪ್ರಕಟಣೆಯ ನಂತರ ಹಡಗು ಚಲನೆ ನಿಧಾನವಾಯಿತು. ಪ್ರಾರಂಭಿಕ ಟ್ರ್ಯಾಕಿಂಗ್ ವರದಿಗಳು ಹಡಗು ದಾಟುವಿಕೆಗಳಲ್ಲಿ ಅಚಾನಕ್ ಕುಸಿತ ಕಂಡುಬಂದಿರುವುದನ್ನು ಸೂಚಿಸಿವೆ.

ಈ ಅಡಚಣೆಯ ನಡುವೆಯೂ ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿ ಹಡಗುಗಳೊಂದಿಗೆ ನಿಕಟ ಸಮನ್ವಯ ಕಾಯ್ದುಕೊಳ್ಳಲು ಮುಂದಾಗಿದೆ. ಕನಿಷ್ಠ ಆರು ಭಾರತೀಯ ನೌಕಾಪಡೆಯ ಹಡಗುಗಳು ಪ್ರಸ್ತುತ ಪರ್ಷಿಯನ್ ಕೊಲ್ಲಿಯ ಬಳಿ ನೆಲೆಗೊಂಡಿದ್ದು, ವಾಣಿಜ್ಯ ಸಂಚಾರಕ್ಕಾಗಿ ಸಂವಹನ, ಮೇಲ್ವಿಚಾರಣೆ ಮತ್ತು ಸುರಕ್ಷಿತ ಮಾರ್ಗ ಸಲಹೆಗಳಿಗೆ ಎದುರು ನೋಡುತ್ತಿವೆ.

ಟ್ರಂಪ್‌ ಹಾರ್ಮೊಜ್‌ ದಿಗ್ಬಂಧನ ಬೆದರಿಕೆ; ಅಮೆರಿಕದಲ್ಲಿನ ತೈಲ ಹೆಚ್ಚಳವನ್ನು ಟೀಕಿಸಿದ ಇರಾನ್‌

ಎಲ್‌ಪಿಜಿ ಟ್ಯಾಂಕರ್ ಜಗ್ ವಿಕ್ರಮ್ ಹಡಗು ಏಪ್ರಿಲ್ 11ರಂದು ಹೊರ್ಮುಜ್ ಜಲಸಂಧಿಯನ್ನು ದಾಟಿ ಮುಂಬೈಗೆ ತೆರಳುತ್ತಿದ್ದು, ಏಪ್ರಿಲ್ 15ರ ಅಂದಾಜು ಆಗಮನವಾಗಲಿದೆ. ಈ ಹಡಗು ಸುಮಾರು 20,400 ಟನ್ ಎಲ್‌ಪಿಜಿಯನ್ನು ಹೊತ್ತೊಯ್ಯುತ್ತಿದ್ದು, 24 ಸಿಬ್ಬಂದಿಯನ್ನು ಹೊಂದಿದೆ. ಇದು ಪ್ರಸ್ತುತ ಭಾರತೀಯ ನೌಕಾಪಡೆಯ ಬೆಂಗಾವಲಿನಡಿ ಅರೇಬಿಯನ್ ಸಮುದ್ರದಲ್ಲಿದೆ.

ಸಮುದ್ರ ಸಂಚಾರವನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು, ವಿಶಾಲ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 25 ಭಾರತೀಯ ಧ್ವಜ ಹೊಂದಿರುವ ಹಡಗುಗಳಲ್ಲಿ 10 ಹಡಗುಗಳು ಈಗಾಗಲೇ ಹೊರ್ಮುಜ್ ಜಲಸಂಧಿಯಿಂದ ಸುರಕ್ಷಿತವಾಗಿ ತೆರಳಿವೆ ಎಂದು ಹೇಳಿದರು. ಸಿಕ್ಕಿಬಿದ್ದ ಗುಂಪಿನಲ್ಲಿ ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ವಾಹಕಗಳು, ಕಚ್ಚಾ ತೈಲ ಟ್ಯಾಂಕರ್‌ಗಳು, ಕಂಟೇನರ್ ಹಡಗುಗಳು, ಡ್ರೆಡ್ಜರ್ ಮತ್ತು ರಾಸಾಯನಿಕ ಟ್ಯಾಂಕರ್ ಸೇರಿವೆ.

ಉದ್ವಿಗ್ನತೆಯ ಹೊರತಾಗಿಯೂ ಈ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ನಿಯೋಜನೆ ಮಾದರಿ ಅಥವಾ ಕಾರ್ಯಾಚರಣೆಯ ಪ್ರೋಟೋಕಾಲ್‌ಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕಡಲ ಭದ್ರತಾ ಸಂಸ್ಥೆಗಳ ಮೂಲಕ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ಭಾರತವು ಗಲ್ಫ್‌ ಮತ್ತು ಅದರ ಸುತ್ತಮುತ್ತಲಿನ ಜಲಪ್ರದೇಶಗಳ ಮೂಲಕ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರ ಹಾಗೂ ನಿರಂತರ ಮೇಲ್ವಿಚಾರಣೆಯನ್ನು ಖಚಿತಪಡಿಸಲು 28 ದೇಶಗಳೊಂದಿಗೆ ಸಮುದ್ರ ಗುಪ್ತಚರ ಮಾಹಿತಿಯನ್ನು ಸಮನ್ವಯಗೊಳಿಸುತ್ತಿದೆ.

ಮಾತುಕತೆ ವೇಳೆ ಅಮೆರಿಕದ ದಾರಿ ತಪ್ಪಿಸಿದ್ದೇ ಇಸ್ರೇಲ್‌; ನೆತನ್ಯಾಹು ಕರೆ ಮಾಡಿದ್ದರಿಂದ ಮುರಿದು ಬಿತ್ತಾ ಒಪ್ಪಂದ?

ಅಮೆರಿಕ–ಇರಾನ್ ನಡುವೆ ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಗಳು ಯಾವುದೇ ಸ್ಪಷ್ಟ ಒಪ್ಪಂದವಿಲ್ಲದೆ ಅಂತ್ಯಗೊಂಡ ನಂತರ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿತು. ಅದರ ನಂತರ ಅಮೆರಿಕವು, ಇರಾನ್‌ನ ಬಂದರುಗಳ ಮೇಲೆ ಸಮುದ್ರ ಮಾರ್ಗದ ಒತ್ತಡವನ್ನು ಹೆಚ್ಚಿಸಲು ಕ್ರಮ ಕೈಗೊಂಡಿತು.

ಅಮೆರಿಕ ನೀಡಿದ ನಿರ್ದೇಶನದ ಪ್ರಕಾರ, ಇರಾನ್‌ಗೆ ಸಂಬಂಧಿಸದ ವಾಣಿಜ್ಯ ಹಡಗುಗಳಿಗೆ ಸಂಚಾರವನ್ನು ಮುಂದುವರಿಸಲು ಅನುಮತಿ ಇದೆ. ಆದರೆ ಇರಾನ್‌ನ ಬಂದರಿಗೆ ಪ್ರವೇಶಿಸುವ ಅಥವಾ ಹೊರಬರುವ ಹಡಗುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಇದಕ್ಕೆ ಇರಾನ್ ಅಧಿಕಾರಿಗಳು ಅಮೆರಿಕಕ್ಕೆ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.