ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುರ್ಗಾ ಪೂಜೆಗೂ ಮುನ್ನ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಿರುಗಾಳಿ: 17 ಎನ್‌ಸಿಪಿಐ ಸಂಸದರು ಬಿಜೆಪಿ ಸೇರ್ಪಡೆ

NCPI MPs to Join BJP: ದುರ್ಗಾ ಪೂಜೆಗೂ ಮುನ್ನ 17 ಎನ್‌ಸಿಪಿಐ ಸಂಸದರು ಬಿಜೆಪಿ ಸೇರಲಿದ್ದಾರೆ ಎಂದು ಟಿಎಂಸಿ ಬಂಡಾಯ ನಾಯಕ ಜಗದೀಶ್ ಚಂದ್ರ ಬರ್ಮಾ ಬಸುಣಿಯಾ ಹೇಳಿದ್ದಾರೆ. ಆರಂಭದಲ್ಲಿ ನಮ್ಮ ಯೋಜನೆಯು ಬಿಜೆಪಿಗೆ ಸೇರುವುದೇ ಆಗಿತ್ತು. ಆದರೆ ಕೆಲವರ ಆಕ್ಷೇಪಣೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲು ಎನ್‌ಸಿಪಿಐ ಪಕ್ಷಕ್ಕೆ ತಾತ್ಕಾಲಿಕ ಸೇರಲಾಯಿತು ಎಂದು ಅವರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕೋಲ್ಕತಾ, ಸೆ. 14: ದುರ್ಗಾ ಪೂಜೆಗೂ ಮುನ್ನ 17 ಎನ್‌ಸಿಪಿಐ (Nationalist Citizens Party of India) ಸಂಸದರು ಬಿಜೆಪಿ ಸೇರಲಿದ್ದಾರೆ ಎಂದು ಟಿಎಂಸಿ ಬಂಡಾಯ ನಾಯಕ ಜಗದೀಶ್ ಚಂದ್ರ ಬರ್ಮಾ ಬಸುಣಿಯಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಅಧಿಕಾರ ಕಳೆದುಕೊಂಡ ನಂತರ ಜೂನ್‌ನಲ್ಲಿ ಹೆಚ್ಚು ಪರಿಚಯವಿಲ್ಲದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಪಕ್ಷಕ್ಕೆ ವಲಸೆ ಹೋಗಿದ್ದ ಲೋಕಸಭಾ ಸದಸ್ಯರಲ್ಲಿ ಒಬ್ಬರಾದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ, ಅಕ್ಟೋಬರ್‌ನಲ್ಲಿ ನಡೆಯಲಿರುವ ದುರ್ಗಾಪೂಜೆಯ ಒಳಗಾಗಿ ತಮ್ಮಲ್ಲಿನ 17 ಸಂಸದರು ಭಾರತೀಯ ಜನತಾ ಪಾರ್ಟಿ (BJP) ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

ʼʼಆರಂಭದಲ್ಲಿ ನಮ್ಮ ಯೋಜನೆಯು ಬಿಜೆಪಿಗೆ ಸೇರುವುದೇ ಆಗಿತ್ತು. ಆದರೆ ಅಬು ತಾಹೇರ್ ಮತ್ತು ಇತರ ಇಬ್ಬರು ಸಂಸದರ ಆಕ್ಷೇಪಣೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದ್ದರಿಂದ, ನಾವು ಮೊದಲು ಎನ್‌ಸಿಪಿಐ ಪಕ್ಷಕ್ಕೆ ಸೇರಲು ಒಂದು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಯಿತುʼʼ ಎಂದು ಅವರು ಹೇಳಿದ್ದಾರೆ.

ಎನ್‌ಸಿಪಿಐ ಒಂದು ಮಾನ್ಯತೆ ಪಡೆಯದ ಪಕ್ಷವಾಗಿದ್ದು, ಇದು ಈ ಹಿಂದೆ 2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 840 ಮತ ಗಳಿಸಿತ್ತು. ಅಲ್ಲಿಯವರೆಗೆ ತಮಗೆ ಎನ್‌ಸಿಪಿಐ ಬಗ್ಗೆ ಏನೂ ತಿಳಿದಿರಲಿಲ್ಲ ಎಂದು ಬಸುನಿಯಾ ಹೇಳಿದರು. ಈಗ, 17 ಎನ್‌ಸಿಪಿಐ ಸಂಸದರು ಬಿಜೆಪಿಗೆ ಸೇರುತ್ತಾರೆ ಎಂದು ಸಂಸತ್ತಿನಲ್ಲಿ ಕೂಚ್ ಬೆಹಾರ್ ಪ್ರತಿನಿಧಿಸುವ ಬಸುನಿಯಾ ಹೇಳಿದರು.

ಕ್ಷುಲ್ಲಕ ಕಾರಣಕ್ಕೆ ಕಾರ್ಗಿಲ್‌ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆ ಮಾಜಿ ಯೋಧನ ಮೇಲೆ ಹಲ್ಲೆ; ಗಂಭೀರ ಗಾಯ

ಪಶ್ಚಿಮ ಬಂಗಾಳದ ಮುಸ್ಲಿಂ ಬಹುಸಂಖ್ಯಾತ ಮುರ್ಷಿದಾಬಾದ್ ಜಿಲ್ಲೆಯ ಮೂರು ಕ್ಷೇತ್ರಗಳನ್ನು ಪ್ರತಿನಿಧಿಸುವ ಖಾನ್, ಖಲೀಲುರ್ ರೆಹಮಾನ್ ಮತ್ತು ಯೂಸುಫ್ ಪಠಾಣ್ ಎನ್‌ಸಿಪಿಐಗೆ ಸೇರಿದರೂ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸಭೆಗಳಿಂದ ಇದುವರೆಗೆ ದೂರ ಉಳಿದಿದ್ದಾರೆ.

ಬಸುನಿಯಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾನ್, ತಮ್ಮ ಪರವಾಗಿ ಮಾತನಾಡಲು ಅವರಿಗೆ ಯಾರೂ ಅಧಿಕಾರ ನೀಡಿಲ್ಲ ಎಂದು ಹೇಳಿದರು. “ನಾವು ನಮ್ಮದೇ ಆದ ತಂತ್ರವನ್ನು ಅನುಸರಿಸುತ್ತೇವೆ. ನಾವು ಎಂದಿಗೂ ಬಿಜೆಪಿಗೆ ಸೇರುವುದಿಲ್ಲ ಎಂದು ಪದೇ ಪದೆ ಹೇಳಿದ್ದೇವೆ” ಎಂದು ತಿಳಿಸಿದರು.

ಇತರ ಎನ್‌ಸಿಪಿಐ ಶಾಸಕರು ಬಸುನಿಯಾ ಅವರ ಹೇಳಿಕೆಯನ್ನು ತಳ್ಳಿಹಾಕದಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಿರ್ಭುಮ್ ಪ್ರತಿನಿಧಿಸುವ 17 ಶಾಸಕರಲ್ಲಿ ಒಬ್ಬರಾದ ಶತಾಬ್ದಿ ರಾಯ್, “ನಮ್ಮ ನಾಯಕರೊಂದಿಗೆ ಈ ವಿಷಯವನ್ನು ಚರ್ಚಿಸಿದ ನಂತರ ಬಸುನಿಯಾ ಈ ಹೇಳಿಕೆ ನೀಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಅಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನನಗೆ ತಿಳಿದಿಲ್ಲ” ಎಂದರು.