ಚೆನ್ನೈ: ಸಿಎಂ ವಿಜಯ (CM Vijay) ದಿನಕ್ಕೆ ಸತತ 18 ರಿಂದ 20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಅಧಿಕಾರ ಸಿಕ್ಕ ತಕ್ಷಣ ಸಂಭ್ರಮಾಚರಣೆಯಲ್ಲಿ ಮುಳುಗದೆ ರಾಜ್ಯದ ಅಭಿವೃದ್ಧಿಯತ್ತ ಸಂಪೂರ್ಣ ಗಮನ ಹರಿಸಿದ್ದಾರೆ. (Tamil Nadu ) ನಮ್ಮ ಮುಖ್ಯಮಂತ್ರಿಗಳು ಪ್ರತಿದಿನ ಬೆಳಗಿನ ಜಾವ 4 ಗಂಟೆಗೆ ಎದ್ದು ನಮಗೆ ಕರೆ ಮಾಡುತ್ತಾರೆ. ವಿವಿಧ ಇಲಾಖೆಗಳಲ್ಲಿ ಏನು ಕೆಲಸ ನಡೆಯುತ್ತಿದೆ ಮತ್ತು ಮುಂದಿನ ಹಂತದ ಯೋಜನೆಗಳೇನು? ಎಂದು ಮಾಹಿತಿ ಪಡೆಯುತ್ತಾರೆ. ಪ್ರತಿಯೊಂದು ಸಚಿವಾಲಯದ ಆಡಳಿತ ವ್ಯವಸ್ಥೆಯ ಮೇಲೆ ಅವರು ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಎಂದು ಸಚಿವರು ವಿವರಿಸಿದರು.
ಚುನಾವಣೆ ಗೆಲುವಿನ ನಂತರದ ದಿನದಿಂದ ನಾನು ಪ್ರತಿದಿನ ಸಚಿವಾಲಯದಲ್ಲಿ ಮುಖ್ಯಮಂತ್ರಿಯನ್ನು ನೋಡುತ್ತಿದ್ದೆನೆ. ಅವರು ಬಂದ ದಿನದಿಂದಲೂ ಒಬ್ಬ ‘ರಾಜಕೀಯ ಸನ್ಯಾಸಿ’ಯಂತೆ ಇದ್ದಾರೆ. ಪ್ರಸ್ತುತ ಏನು ಮಾಡಬೇಕು? ಮುಂದೆ ಏನು ಮಾಡಬೇಕು? ಎಂಬ ಆಲೋಚನೆಯಲ್ಲೇ ಇರುತ್ತಾರೆ. ಪ್ರತಿಯೊಂದು ಇಲಾಖೆಯಲ್ಲೂ ಇರುವ ಸಮಸ್ಯೆಗಳೇನು? ಮುಖ್ಯವಾಗಿ ಭ್ರಷ್ಟಾಚಾರವನ್ನು ಹೇಗೆ ತಡೆಯಬೇಕು ಎಂಬುವುದರ ಮೇಲೆಯೇ ಅವರ ಸಂಪೂರ್ಣ ಗಮನವಿದೆ’ ಎಂದು ಅವರು ಹೇಳಿದ್ದಾರೆ.
ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆದ್ಯತೆ
‘ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಸರ್ಕಾರದ ಆಡಳಿತ ಯಂತ್ರದಲ್ಲಿ ಆಗುವ ಅಕ್ರಮ ತಡೆಯುವುದು ಹಾಗೂ ಪಾರದರ್ಶಕತೆ ತರುವುದು ಸಿಎಂ ಅವರ ಮುಖ್ಯ ಆದ್ಯತೆಯಾಗಿದೆ. ಕೆಳಹಂತದಲ್ಲಿ ದಶಕಳಿಂದ ಬೇರೂರಿರುವ ಭ್ರಷ್ಟಾಚಾರವನ್ನು ಹಂತ ಹಂತವಾಗಿ ಬುಡಸಮೇತ ನಿರ್ಮೂಲನೆ ಮಾಡಲು ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಚುನಾವಣಾ ಗೆಲುವಿನ ನಂತರವೂ ಯಾವುದೇ ಅಂಹಕಾರವಿಲ್ಲದೆ, ಜನರ ಸೇವೆಯೇ ಮುಖ್ಯ ಎಂಬಂತೆ ವಿಜಯ್ ಕಾರ್ಯ ನಿರ್ವಹಿಸುತ್ತಿದ್ದಾರೆ’ೆ ಎಂದು ಸಚಿವ ಅರ್ಜುನ ಸ್ಪಷ್ಟಪಡಿಸಿದರು.
ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತಾ!
ಜೋಸೆಫ್ ವಿಜಯ್ ಅವರ ವಿರುದ್ಧ ಪತ್ನಿ ಸಂಗೀತಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದು ಭಾರೀ ಅಚ್ಚರಿಯನ್ನು ಮೂಡಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾದ ಸಂಗೀತಾ, "ನಾವು ಈ ವಿಚ್ಛೇದನ ಪ್ರಕರಣವನ್ನು ಮುಂದೆ ಮುಂದುವರಿಸಲು ಬಯಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು. ವಿಜಯ್ ಪರ ವಕೀಲರು ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ, ಸಂಗೀತಾ ಅವರ ಮನವಿಯನ್ನು ಪುರಸ್ಕರಿಸಿದ ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿತು.