ಅಹಮದಾಬಾದ್: ದೇಶದ ಇತಿಹಾಸದಲ್ಲಿ ಸಂಭವಿಸಿದ ಹಲವು ಭೀಕರ ವಿಮಾನ ಅವಘಡಗಳ ಸಾಲಿಗೆ ಜೂನ್ 12ರಂದು ನಡೆದ ವಿಮಾನ ಅವಘಡ ಕೂಡ ಸೇರಿಕೊಂಡಿದೆ. ಅಹಮದಾಬಾದ್‌ನ ಸರ್ದಾರ್ (Ahmedabad Plane Crash) ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಕಡೆಗೆ ಹೊರಟ AI171 ವಿಮಾನ, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಲಂಡನ್‌ನ ಗ್ಯಾಟ್‌ವಿಕ್ ಕಡೆಗೆ ಪ್ರಯಾಣಿಸುತ್ತಿದ್ದ ಈ ಬೋಯಿಂಗ್ 787-8 ಡ್ರೀಮ್‌ಲೈನರ್ (VT-ANB) ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳಿದ್ದರು. ಮಧ್ಯಾಹ್ನ 1.39 ರ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ವಿಮಾನ ವೈದ್ಯಕೀಯ ಕಾಲೇಜಿನ ಕಟ್ಟಡವೊಂದಕ್ಕೆ ಅಪ್ಪಳಿಸಿದ ಪರಿಣಾಮ ಕಟ್ಟಡದಲ್ಲಿದ್ದ ಹಲವು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಅಹಮದಾಬಾದ್ ನಗರ ಪೋಲೀಸ್ ಆಯುಕ್ತರು ಮಾಹಿತಿ ನೀಡಿದ್ದು, ಗುರುವಾರ ರಾತ್ರಿ ಸುಮಾರು 265 ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನದಲ್ಲಿದ್ದವರಲ್ಲಿ 169 ಭಾರತೀಯರು, 53 ಬ್ರಿಟಿಷ್ ನಾಗರಿಕರು, 1 ಕೆನೆಡಿಯನ್ ಮತ್ತು 7 ಪೋರ್ಚುಗೀಸ್ ನಾಗರಿಕರಾಗಿದ್ದಾರೆ. ವಿಮಾನ ಸ್ಪೋಟಿಸಿದ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಮೃತ ದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿವುದು ಈಗ ರಕ್ಷಣಾ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ. ಈ ಹಿನ್ನಲೆ ಸಿವಿಲ್ ಆಸ್ಪತ್ರೆಯಲ್ಲಿ 200 ಡಿಎನ್‌ಎ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಡಿಎನ್‌ಎ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿದ್ದು, ಪಕ್ರಿಯೆ ಮುಗಿದ ಬಳಿಕವೇ ಅಧಿಕಾರಿಗಳು ಎಲ್ಲಾ ಮೃತ ಪ್ರಯಾಣಿಕರನ್ನು ಗುರುತಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ತದನಂತರ ಮೃತ ದೇಹಗಳನ್ನು ಕುಟುಂಬಕ್ಕೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಟೇಕ್ ಆಫ್ ಆದ ತಕ್ಷಣ ಪೈಲೆಟ್‌ನಿಂದ ಹಾವಾಮಾನ ಇಲಾಖೆಗೆ ತುರ್ತು ಸಂದೇಶ ರವಾನೆ:
ವಿಮಾನ ಟೇಕ್ ಆಫ್ ಆದ ಬಳಿಕ ಪೈಲೆಟ್ ಮೇಡೇ ಎಂದು ತುರ್ತು ಸಂದೇಶವನ್ನು ಹವಾಮಾನ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿದ್ದರು. ಆದರೆ ಇದಕ್ಕೆ ಹಾವಾಮಾನ ಇಲಾಖೆ ಪ್ರತಿಕ್ರಿಯೆ ನೀಡಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ದೃಢಪಡಿಸಿದೆ.
ಈ ಸುದ್ದಿಯನ್ನೂ ಓದಿ: ಗುಡ್ ಬೈ ಇಂಡಿಯಾ ಎಂದವನು ಬದುಕಿಗೇ ಗುಡ್‌ಬೈ ಹೇಳಿದ; ಅಹಮದಾಬಾದ್ ವಿಮಾನ ಪತನಕ್ಕೂ ಮುನ್ನ ಬ್ರಿಟಿಷ್ ಪ್ರಯಾಣಿಕ ಮಾಡಿದ್ದ ವಿಡಿಯೊ ವೈರಲ್
ಈ ಅವಘಡದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರುಪಾನಿ ಸೇರಿದಂತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆಲ್ಲರು ಮೃತ ಪಟ್ಟಿದ್ದಾರೆ. ಆದರೆ 40 ವರ್ಷದ ರಮೇಶ್ ವಿಶ್ವಾಶ್‌ಕುಮಾರ್ ಎಂಬವರು ಘಟನೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿ ಜೀವ ಉಳಿಸಿಕೊಂಡಿರು ಏಕೈಕ ವ್ಯಕ್ತಿಯಾಗಿದ್ದಾರೆ.