ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಡಿಯಾ ಬ್ಲಾಕ್ ರ‍್ಯಾಲಿ ಎಫೆಕ್ಟ್: ದೆಹಲಿಯಲ್ಲಿ 2.5 ಲಕ್ಷ ಅಂಗಡಿ ಬಂದ್, ಒಂದೇ ದಿನ 11,000 ಕೋಟಿ ರೂ. ನಷ್ಟ!

ರಾಷ್ಟ್ರರಾಜಧಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ವಿರೋಧ ಪಕ್ಷಗಳ ‘ಇಂಡಿಯಾ ಬ್ಲಾಕ್’ ರ‍್ಯಾಲಿಯಿಂದ ದೆಹಲಿಯ ವ್ಯಾಪಾರ ವಲಯದ ಮೇಲೆ ಭಾರಿ ಆಘಾತ ಬೀರಿದೆ ಎಂದು ಆರೋಪಿಸಲಾಗಿದೆ. ಹಬ್ಬದ ಸೀಸನ್‌ನಲ್ಲೇ ನಡೆದ ಈ ರ‍್ಯಾಲಿಯಿಂದಾಗಿ ದೆಹಲಿಯ ಸುಮಾರು 2.5 ಲಕ್ಷ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿತ್ತು ಎಂದು ತಿಳಿದು ಬಂದಿದೆ.

ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರರಾಜಧಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ವಿರೋಧ ಪಕ್ಷಗಳ ‘ಇಂಡಿಯಾ ಬ್ಲಾಕ್’ (INDIA Bloc Rally) ರ‍್ಯಾಲಿಯಿಂದ ದೆಹಲಿಯ ವ್ಯಾಪಾರ ವಲಯದ ಮೇಲೆ ಭಾರಿ ಆಘಾತ ಬೀರಿದೆ ಎಂದು ಆರೋಪಿಸಲಾಗಿದೆ. ಹಬ್ಬದ ಸೀಸನ್‌ನಲ್ಲೇ ನಡೆದ ಈ ರ‍್ಯಾಲಿಯಿಂದಾಗಿ ದೆಹಲಿಯ ಸುಮಾರು 2.5 ಲಕ್ಷ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ಒಂದೇ ದಿನದಲ್ಲಿ ಅಂದಾಜು 11,000 ಕೋಟಿ ರೂ. ಭಾರಿ ಆರ್ಥಿಕ ನಷ್ಟ ಸಂಭವಿಸಿದೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಹೇಳಿದೆ. ಭಾರಿ ನಷ್ಟ ಅನುಭವಿಸಿರುವ ವ್ಯಾಪಾರಿಗಳು ಈಗ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.

ದೀಪಾವಳಿ ಮತ್ತು ಧನ್ತೇರಸ್ ಹಬ್ಬದ ಸೀಸನ್ ಆಗಿರುವುದರಿಂದ ದೆಹಲಿಯ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ಏರ್ಪಡುತ್ತಿತ್ತು. ಆದರೆ ರ‍್ಯಾಲಿಯ ಹಿನ್ನೆಲೆಯಲ್ಲಿ ರಾಮಲೀಲಾ ಮೈದಾನದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಚಾಂದ್ನಿ ಚೌಕ್, ಕನ್ನಾಟ್ ಪ್ಲೇಸ್, ಕರೋಲ್ ಬಾಗ್, ಖಾರಿ ಬಾವೊಲಿ ಮತ್ತು ಸದರ್ ಬಜಾರ್ ಸೇರಿದಂತೆ ಸುಮಾರು 25 ಪ್ರಮುಖ ಮಾರುಕಟ್ಟೆಗಳ ಶೇ. 80 ಕ್ಕೂ ಹೆಚ್ಚು ಅಂಗಡಿಗಳು ಮುಚ್ಚಿದ್ದವು. ದೆಹಲಿ ಪೊಲೀಸರು ವಿಧಿಸಿದ್ದ ಬಿಗಿ ಸಂಚಾರ ನಿರ್ಬಂಧಗಳು ಹಾಗೂ ಭಾರಿ ಜನಸ್ತೋಮದಿಂದಾಗಿ ಗ್ರಾಹಕರು ಮತ್ತು ಸರಕು ಸಾಗಣೆ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ.

ಇಂಡಿಯಾ ಬ್ಲಾಕ್ ಮಹಾರ್ಯಾಲಿಯಿಂದಾಗಿ ಸಂಭವಿಸಿದ 11,000 ಕೋಟಿ ರೂ.ಗಳ ಭಾರಿ ಆರ್ಥಿಕ ನಷ್ಟಕ್ಕೆ ಸೂಕ್ತ ನ್ಯಾಯ ಹಾಗೂ ಪರಿಹಾರ ಕೋರಿ ದೆಹಲಿಯ ಪ್ರಮುಖ ವ್ಯಾಪಾರಿ ಸಂಘಟನೆಗಳು ಜಂಟಿಯಾಗಿ ದೆಹಲಿ ಹೈಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ (NGT) ಪರಿಹಾರ ಅರ್ಜಿ ಸಲ್ಲಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನ ಹಳೆಯ ನಿರ್ದೇಶನಗಳನ್ನು ಉಲ್ಲೇಖಿಸಿರುವ ವ್ಯಾಪಾರಿಗಳು, ರಾಜಕೀಯ ರ‍್ಯಾಲಿ ಅಥವಾ ಬಂದ್‌ಗಳಿಂದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ಹಾಗೂ ವ್ಯಾಪಾರಕ್ಕೆ ನಷ್ಟವಾದರೆ, ಅದರ ಸಂಪೂರ್ಣ ಹೊಣೆಯನ್ನು ರ‍್ಯಾಲಿ ಆಯೋಜಿಸಿದ ರಾಜಕೀಯ ಪಕ್ಷಗಳೇ ಹೊರಬೇಕು ಮತ್ತು ಅವರದೇ ನಿಧಿಯಿಂದ ಪರಿಹಾರ ಕೊಡಿಸಬೇಕು ಎಂದು ಕೋರಿದ್ದಾರೆ.

Kripa Alva: ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್‌ ಆಪರೇಷನ್‌ ಷಡ್ಯಂತ್ರ; ಕಾಂಗ್ರೆಸ್‌ ಪಕ್ಷದಿಂದ ಕೃಪಾ ಆಳ್ವಾ ಉಚ್ಚಾಟನೆ

ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಿ, ಹಬ್ಬದ ಸೀಸನ್‌ನಲ್ಲೇ ದಿವಾಳಿಯ ಅಂಚಿಗೆ ತಲುಪಿರುವ ಸಣ್ಣ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ತಕ್ಷಣದ ಆರ್ಥಿಕ ನೆರವು ಅಥವಾ ತೆರಿಗೆ ವಿನಾಯಿತಿಯಂತಹ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ.

Vishakha Bhat Heggar

View all posts by this author