ನವದೆಹಲಿ, ಜ. 11: ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ (Social media platform X) ಅಶ್ಲೀಲ ವಿಷಯಗಳು ಹರಡುತ್ತಿರುವುದನ್ನು ಭಾರತ ಸರ್ಕಾರ (India Government) ಗಮನಕ್ಕೆ ತಂದ ನಂತರ, ಸುಮಾರು 3,500 ಪೋಸ್ಟ್‌ಗಳನ್ನು ತಡೆಹಿಡಿದು, 600 ಖಾತೆಗಳನ್ನು ಡಿಲೀಟ್ ಎಂದು ಮೂಲಗಳು ತಿಳಿಸಿವೆ. ಇನ್ನು ಮುಂದೆ ತನ್ನ ವೇದಿಕೆಯಲ್ಲಿ ಅಶ್ಲೀಲ ವಿಷಯಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದು ಎಕ್ಸ್ ಸರ್ಕಾರಕ್ಕೆ ಭರವಸೆ ನೀಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (Ministry of Electronics and Information Technology) ಎಕ್ಸ್‌ನಲ್ಲಿ ಅಶ್ಲೀಲ ವಿಷಯವನ್ನು ಫ್ಲ್ಯಾಗ್ ಮಾಡಿದ ಒಂದು ವಾರದ ನಂತರ ಈ ಕ್ರಮವನ್ನು ತರಲಾಗಿದೆ. ಅಶ್ಲೀಲ, ನಗ್ನ, ಅಸಭ್ಯ ಹಾಗೂ ಹೋಸ್ಟಿಂಗ್, ಪ್ರಕಟಣೆ, ಅಪ್‌ಲೋಡ್ ಅನ್ನು ತಡೆಯುವ ಉದ್ದೇಶದಿಂದ, ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಎಕ್ಸ್ ಕಾರ್ಪ್‌ಗೆ 72 ಗಂಟೆಗಳೊಳಗೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸುವಂತೆ ಸಚಿವಾಲಯ ಸೂಚಿಸಿತ್ತು.
ಎಲಾನ್ ಮಸ್ಕ್ ಒಡೆತನದ x ಬ್ಯಾನ್ ಮಾಡುತ್ತಾ ಈ ದೇಶ?
ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ, ಸೂಚನೆಗಳನ್ನು ಪಾಲಿಸದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಭಾರತೀಯ ಕಾನೂನುಗಳ ಅಡಿಯಲ್ಲಿ ಸಂಬಂಧಿತ ವೇದಿಕೆ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳು ಕೈಗೊಳ್ಳಲಾಗಬಹುದು ಎಂದು ಎಚ್ಚರಿಕೆ ನೀಡಿತ್ತು.
ಮಹಿಳೆಯರ ಅಶ್ಲೀಲ ಚಿತ್ರಗಳು ಅಥವಾ ವಿಡಿಯೊಗಳನ್ನು ಅವಹೇಳನಕಾರಿ ಅಥವಾ ಅಸಭ್ಯ ರೀತಿಯಲ್ಲಿ ಹೋಸ್ಟ್ ಮಾಡಲು, ರಚಿಸಲು, ಪ್ರಕಟಿಸಲು ಅಥವಾ ಹಂಚಿಕೊಳ್ಳಲು ಬಳಕೆದಾರರು ಖಾತೆಗಳನ್ನು ರಚಿಸಲು ಗ್ರೋಕ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ.
ಅಂತಹ ವಿಷಯವನ್ನು ಉತ್ಪಾದಿಸುವುದನ್ನು ತಡೆಯಲು ಗ್ರೋಕ್‌ನ ತಾಂತ್ರಿಕ ಮತ್ತು ಆಡಳಿತ ಚೌಕಟ್ಟುಗಳ ಸಮಗ್ರ ಪರಿಶೀಲನೆಯನ್ನು ನಡೆಸುವಂತೆ ಸಚಿವಾಲಯವು ಎಕ್ಸ್ ಅನ್ನು ಕೇಳಿದೆ. ಅಧಿಸೂಚನೆಯಲ್ಲಿ, ಎಕ್ಸ್‌ನ ಎಐ ಸಹಾಯಕವಾದ ಗ್ರೋಕ್ ಕಟ್ಟುನಿಟ್ಟಾದ ಬಳಕೆದಾರ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಹೇಳಲಾಗಿದ್ದು, ನಿಯಮ ಉಲ್ಲಂಘಿಸುವವರ ಖಾತೆ ಅಮಾನತು ಹಾಗೂ ರದ್ಧತಿ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ.
ಈ ಸೂಚನೆಗಳನ್ನು ಎಕ್ಸ್ ಪಾಲಿಸದಿದ್ದರೆ ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಸುರಕ್ಷಿತ ಆಶ್ರಯ ಕಳೆದುಕೊಳ್ಳಬಹುದು ಮತ್ತು ಭಾರತೀಯ ನ್ಯಾಯ ಸಂಹಿತಾ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಸೇರಿದಂತೆ ಬಹು ಕಾನೂನುಗಳ ಅಡಿಯಲ್ಲಿ ದಂಡದ ಕ್ರಮ ಕೈಗೊಳ್ಳಬಹುದು ಎಂದು ಸಚಿವಾಲಯ ಹೇಳಿದೆ.
ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ನಿಖಿಲ್ ಕಾಮತ್- ಎಲಾನ್ ಮಸ್ಕ್ ಪಾಡ್‌ಕಾಸ್ಟ್ ಟೀಸರ್
ಪತ್ರದಲ್ಲಿ ಇದು ಕೇವಲ ನಕಲಿ ಖಾತೆಗಳ ಸೃಷ್ಟಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಪ್ರಾಂಪ್ಟ್‌ಗಳು, ಚಿತ್ರ ಸಂಶೋಧನೆ ಮತ್ತು ಸಿಂಥೆಟಿಕ್ ಔಟ್‌ಪುಟ್‌ಗಳ ಮೂಲಕ ತಮ್ಮ ಚಿತ್ರಗಳು ಅಥವಾ ವಿಡಿಯೊಗಳನ್ನು ಹೋಸ್ಟ್ ಮಾಡುವ ಅಥವಾ ಪ್ರಕಟಿಸುವ ಮಹಿಳೆಯರನ್ನೂ ಗುರಿಯಾಗಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಇಂತಹ ನಡವಳಿಕೆಯು ವೇದಿಕೆ ಮಟ್ಟದ ಸುರಕ್ಷತಾ ಕ್ರಮಗಳು ಮತ್ತು ಜಾರಿ ವ್ಯವಸ್ಥೆಗಳಲ್ಲಿನ ಗಂಭೀರ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಅನ್ವಯವಾಗುವ ಕಾನೂನುಗಳನ್ನು ಉಲ್ಲಂಘಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಸಂಪೂರ್ಣ ದುರುಪಯೋಗಕ್ಕೆ ಸಮನಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.