Election Commission: ಬಿಹಾರದಲ್ಲಿ 36.86 ಲಕ್ಷ ಮತದಾರರು ನಾಪತ್ತೆ; ಮಾಹಿತಿ ಕೇಳಿದ ಚುನಾವಣಾ ಆಯೋಗ
ಬಿಹಾರದ ಒಟ್ಟು 7.9 ಕೋಟಿ ಮತದಾರರಲ್ಲಿ ಸುಮಾರು 4.5% ರಷ್ಟು ಅಂದರೆ ಸುಮಾರು 35.7 ಲಕ್ಷ ಮತದಾರರು ತಮ್ಮ ದಾಖಲಾದ ವಿಳಾಸಗಳಲ್ಲಿ ಪತ್ತೆಯಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. 7.90 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 1.61% ರಷ್ಟು ಜನರು ಮೃತ ಮತದಾರರಾಗಿರಬಹುದು ಎಂದು ತಿಳಿಸಲಾಗಿದೆ.


ಪಾಟ್ನಾ: ಬಿಹಾರದ ಒಟ್ಟು 7.9 ಕೋಟಿ ಮತದಾರರಲ್ಲಿ ಸುಮಾರು 4.5% ರಷ್ಟು ಅಂದರೆ ಸುಮಾರು 35.7 ಲಕ್ಷ ಮತದಾರರು ತಮ್ಮ ದಾಖಲಾದ (Election Commission) ವಿಳಾಸಗಳಲ್ಲಿ ಪತ್ತೆಯಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. 7.90 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 1.61% ರಷ್ಟು ಜನರು ಮೃತ ಮತದಾರರಾಗಿರಬಹುದು (12.71 ಲಕ್ಷ) ಮತ್ತು 2.3% (18.16 ಲಕ್ಷ) ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಶೇಕಡಾ ಒಂದಕ್ಕಿಂತ ಕಡಿಮೆ (5.92 ಲಕ್ಷ) ಮತದಾರರು ಬಹು ಸ್ಥಳಗಳಲ್ಲಿ ನೋಂದಣಿಯಾಗಿದ್ದಾರೆಂದು ಗುರುತಿಸಲಾಗಿದೆ ಮತ್ತು 6,978 ಜನರನ್ನು ಇದು ವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಚುನಾವಣೆ ಈ ವರೆಗೆ ಆಯೋಗವು 7.11 ಕೋಟಿ ಗಣತಿ ನಮೂನೆಗಳನ್ನು ಸಂಗ್ರಹಿಸಿದೆ, ಇದು ರಾಜ್ಯದ ನೋಂದಾಯಿತ ಮತದಾರರಲ್ಲಿ ಸುಮಾರು 90% ರಷ್ಟಿದೆ. ಗಣತಿ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 25. ಸಲ್ಲಿಸಿದ ಎಲ್ಲಾ ನಮೂನೆಗಳು - ಪೂರ್ಣ ದಾಖಲೆಗಳೊಂದಿಗೆ ಅಥವಾ ಇಲ್ಲದೆ - ಆಗಸ್ಟ್ 1, 2025 ರಂದು ಪ್ರಕಟಿಸಲು ನಿಗದಿಪಡಿಸಲಾದ ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲ್ಪಡುತ್ತವೆ.
ರಾಜ್ಯಕ್ಕೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 1 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. SIR ಆದೇಶದ ಪ್ರಕಾರ, ಯಾವುದೇ ತಿದ್ದುಪಡಿಯ ಅಗತ್ಯವನ್ನು ಸೂಚಿಸಲು ಅಥವಾ ಯಾವುದೇ ಬಿಟ್ಟುಹೋದ ಹೆಸರುಗಳನ್ನು ಸೇರಿಸಲು ಪ್ರಸ್ತಾಪಿಸಲು ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರಿಗೆ ಪೂರ್ಣ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಇದಕ್ಕಾಗಿ, ಕರಡು ಮತದಾರರ ಪಟ್ಟಿಯ ಮುದ್ರಿತ ಮತ್ತು ಡಿಜಿಟಲ್ ಪ್ರತಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಉಚಿತವಾಗಿ ನೀಡಲಾಗುವುದು ಮತ್ತು ಸಾರ್ವಜನಿಕರಿಗಾಗಿ ECI ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಆದ್ದರಿಂದ, ಯಾವುದೇ ಅರ್ಹ ಮತದಾರರು ಹೊರಗುಳಿಯುವುದಿಲ್ಲ ಎಂದು ಸಾರ್ವಜನಿಕರು ಖಚಿತವಾಗಿ ಹೇಳಬಹುದು" ಎಂದು ಚುನಾವಣಾ ಸಂಸ್ಥೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Shootout Case: ಬಿಹಾರದಲ್ಲಿ ಮತ್ತೊಂದು ಗುಂಡಿನ ದಾಳಿ; ವಕೀಲ ಬಲಿ, ಕಳೆದ 24 ಗಂಟೆಯಲ್ಲಿ ನಾಲ್ವರ ಹತ್ಯೆ
ಚುನಾವಣಾ ಕಾವು
ಬಿಹಾರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇನ್ನೇನು ಮೂರು ನಾಲ್ಕು ತಿಂಗಳು ಅಷ್ಟೇ ಎಲೆಕ್ಷನ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಪಕ್ಷಗಳು ತಮ್ಮದೇ ಆದ ತಂತ್ರವನ್ನು ಬಳಸುತ್ತಿವೆ. ಈಗಾಗಲೇ ಎರಡು ಮೈತ್ರಿಗಳಲ್ಲಿ ಸೀಟು ಹಂಚಿಕೆ ಕಸರತ್ತು ಶುರುವಾಗಿದೆ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ಮೇಲೆ ಭರವಸೆತನ್ನು ನೀಡ್ತಿದ್ದು, ಚುನಾವಣೆಗೆ ವೇದಿಕೆ ಸಿದ್ಧಗೊಳಿಸ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ಮಹಾತ್ಯಾಗಕ್ಕೆ ಸಿದ್ಧವಾಗಿದ್ದು, ಬಿಹಾರದಲ್ಲಿ ಬಿಜೆಪಿ - ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಲು ಒಂದು ಹೆಜ್ಜೆ ಇಟ್ಟಿದೆ.