ಮುಂಬೈ, ಮಾ. 18: ಹರೀಶ್ ರಾಣಾ (Harish Rana) ಅವರಿಗೆ ದಯಾಮರಣ ನೀಡಿದ ತೀರ್ಪು ಸಾವು ಬದುಕಿನ ನಡುವೆ ಸಿಲುಕಿರುವ ರೋಗಿಗಳ ಸಂಬಂಧಿಕರ ಗಮನ ಸೆಳೆದಿದೆ. ಮುಂಬೈಯ ಆನಂದ್ ದೀಕ್ಷಿತ್ (Anand Dixith) ಎಂಬಾತನ ಪ್ರಕರಣವು ಇದೇ ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಭೀಕರ ಅಪಘಾತದ ನಂತರ ಎರಡು ವರ್ಷಗಳಾದರೂ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ. ಕಣ್ಣು ತೆರೆದಿದ್ದರೂ ಯಾವುದೇ ಅರಿವು ಅವರಿಗಿಲ್ಲ.
2013ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಹರೀಶ್ ರಾಣಾ ಅವರ ಮೆದುಳಿಗೆ ಗಂಭೀರ ಗಾಯಗಳಾಗಿದ್ದವು. ಅಂದಿನಿಂದ, ಅವರು ಜೀವರಕ್ಷಕ ವ್ಯವಸ್ಥೆಯಲ್ಲಿದ್ದರು. ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೋಸ್ಟೊಮಿ ಟ್ಯೂಬ್ ಬಳಸಲಾಗಿತ್ತು. ಹಾಸಿಗೆಯಲ್ಲೇ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ವೈದ್ಯಕೀಯವಾಗಿ ಚೇತರಿಕೆಯ ನಿರೀಕ್ಷೆಗಳು ಬಹಳ ಕಡಿಮೆ ಎಂಬುದರ ನಡುವೆಯೂ ವರ್ಷಗಳ ಕಾಲ ಪ್ರಯತ್ನಿಸಿದ ಬಳಿಕ, ಅವರ ಪೋಷಕರು ಅವರಿಗೆ ದಯಾಮರಣ ಅನುಮತಿ ನೀಡುವಂತೆ ನ್ಯಾಯಾಲಯದ ಮೊರೆ ಹೋದರು. ಕೊನೆಗೆ, ಸುಪ್ರೀಂ ಕೋರ್ಟ್ ಈ ಮನವಿಯನ್ನು ಅಂಗೀಕರಿಸಿತು.
ಆದೇಶ ನೀಡುವಾಗ ಕಣ್ಣೀರಿಟ್ಟ ನ್ಯಾಯಮೂರ್ತಿ; ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ
ಮುಂಬೈಯಲ್ಲಿ, 35 ವರ್ಷದ ಆನಂದ್ ದೀಕ್ಷಿತ್ ಎಂಬವರು ಇದೇ ರೀತಿ ಜೀವಂತ ಶವವಾಗಿದ್ದಾರೆ. ಕಳೆದ 2.5 ವರ್ಷಗಳಿಂದ ಅವರು ವೆಜಿಟೇಟಿವ್ ಸ್ಥಿತಿಯಲ್ಲಿ (ಅಂದರೆ ಕಣ್ಣು ತೆರೆದಿದ್ದರೂ ಯಾವುದೇ ಅರಿವು ಅವರಿಗಿಲ್ಲ) ಸಿಲುಕಿಕೊಂಡಿದ್ದಾರೆ. ರಾಣಾ ಅವರಂತೆ, ಆನಂದ್ ಕೂಡ ಜೀವಂತ ಶವದ ಸ್ಥಿತಿಯಲ್ಲಿ ಇದ್ದರೂ, ಅವರ ಕುಟುಂಬವು ಜೀವ ರಕ್ಷಕ ವ್ಯವಸ್ಥೆ ತೆಗೆಯಲು ತಯಾರಿಲ್ಲ.
2023ರಂದು ಡಿಸೆಂಬರ್ 29ರಂದು ಆನಂದ್ ಆ ದಿನವೇ ಖರೀದಿಸಿದ ಹೊಚ್ಚ ಹೊಸ ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಿದ್ದರು. ಅವರ ಕನಸಿನ ವಾಹನವಾಗಬೇಕಿದ್ದ ವಾಹನವು ಅವರ ವಿನಾಶಕ್ಕೆ ಕಾರಣವಾಯಿತು. ಭೀಕರ ಅಪಘಾತವು ಅವರನ್ನು ಟ್ಯೂಬ್‌ಗಳ ಮೂಲಕ ಆಹಾರವನ್ನು ಸೇವಿಸುವ ಮತ್ತು ಯಂತ್ರಗಳ ಮೂಲಕ ಉಸಿರಾಡುವ ಸ್ಥಿತಿಯಲ್ಲಿ ಇರುವಂತೆ ಮಾಡಿತು.
ದೀಕ್ಷಿತ್ ಕುಟುಂಬವು ತಮ್ಮ ಮಗನ ಹೃದಯ ಬಡಿತವನ್ನು ಉಳಿಸಿಕೊಳ್ಳಲು ಅಪಾರ ಹಣವನ್ನೂ ಖರ್ಚು ಮಾಡುತ್ತಿದೆ. ಈಗಾಗಲೇ ವೈದ್ಯಕೀಯ ವೆಚ್ಚ 4 ಕೋಟಿ ರುಪಾಯಿ ದಾಟಿದೆ. ಹೀಗಾಗಿ ಮನೆಯವರು ತಮ್ಮ ಭೂಮಿಯನ್ನೂ ಮಾರಿದ್ದಾರೆ. ಆನಂದ್‌ಗಾಗಿ ಅವರ ಕುಟುಂಬ ಹೋರಾಡುತ್ತಿದ್ದಾರೆ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮುಂಬೈಯಲ್ಲಿರುವ ಅವರ ಏಕೈಕ ಮನೆಯನ್ನು ಕೆಡವಿದೆ.
13 ವರ್ಷದಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣ; ಭಾವನಾತ್ಮಕ ವಿದಾಯದ ಕ್ಷಣ ಇಲ್ಲಿದೆ
ಬಿಎಂಸಿ ಅವರ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿದ ನಂತರ ಕುಟುಂಬವು ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಬೇಕಾಯಿತು. ಡೆವಲಪರ್ ಮತ್ತು ಬಿಎಂಸಿ ನಡುವಿನ ದೀರ್ಘಕಾಲದ ಕಾನೂನು ವಿವಾದಗಳಿಂದ ಈ ಕ್ರಮ ತೆಗೆದುಕೊಳ್ಳುವಂತಾಯಿತು. ಇದು ವರ್ಷಗಳ ಕಾಲ ಬಗೆಹರಿಯದೆ ಉಳಿದಿತ್ತು. ಇದರಿಂದಾಗಿ ನಿವಾಸಿಗಳು ಆವರಣವನ್ನು ಖಾಲಿ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಇದೀಗ ಸ್ಥಳಾಂತರಗೊಂಡ ಕುಟುಂಬವು ತಮ್ಮ ಮಗನ ಆರೋಗ್ಯ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ಸವಾಲುಗಳನ್ನು ಎದುರಿಸುತ್ತಿದೆ.
ʼʼಮತ್ತೊಮ್ಮೆ ಅಪ್ಪ ಎಂದು ಹೇಳುವುದನ್ನು ಕೇಳಲು ನಾನು ನನ್ನ ಬಳಿ ಇದ್ದದ್ದನ್ನೆಲ್ಲ ಮಾರಿದ್ದೇನೆ. ಮೊದಲು ಆಸ್ಪತ್ರೆಯ ಬಿಲ್‌ಗಳಿಂದ, ನಂತರ ವಿಮಾ ನಿರಾಕರಣೆಯಿಂದ ನಾವು ಆರ್ಥಿಕವಾಗಿ ಕುಸಿದು ಹೋಗಿದ್ದೇವೆ. ನಾವು ಐಸಿಯುನಲ್ಲಿ ಅವನ ಜೀವಕ್ಕಾಗಿ ಹೋರಾಡುತ್ತಿರುವಾಗ ಬಿಎಂಸಿ ನಮ್ಮ ಮನೆಯನ್ನು ನೆಲಸಮ ಮಾಡಿದೆʼʼ ಆನಂದ್‌ನ ತಂದೆ ನೋವಿನಿಂದ ಹೇಳಿದ್ದಾರೆ.