ದೇಶದಲ್ಲೊಂದು ಹೃದಯವಿದ್ರಾವಕ ಘಟನೆ; ಮಕ್ಕಳನ್ನು ಸಾಕಲು ಸಾಧ್ಯವಾಗದೆ ಮೂವರನ್ನು ಕೊಂದು ತಂದೆ ಆತ್ಮಹತ್ಯೆ; ಇಬ್ಬರು ಗಂಡು ಮಕ್ಕಳು ಪಾರು
Bihar Horror: ವ್ಯಕ್ತಿಯೊಬ್ಬ ತನ್ನ 5 ಮಕ್ಕಳನ್ನು ಸಾಕಲು ಸಾಧ್ಯವಾಗದೆ, ಅವರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಿಹಾರದಲ್ಲಿ ನಡೆದಿದೆ. ಮೂವರು ಹೆಣ್ಣು ಮಕ್ಕಳು ಮತ್ತು ಆತ ಅಸುನೀಗಿದ್ದು, ಅದೃಷ್ಟವಶಾತ್ ಗಂಡು ಮಕ್ಕಳಿಬ್ಬರು ಬದುಕುಳಿದಿದ್ದಾರೆ.
ಸಾಂದರ್ಭಿಕ ಚಿತ್ರ -
ಪಾಟ್ನಾ, ಡಿ. 15: ಪತ್ನಿಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ 5 ಮಕ್ಕಳನ್ನು ಸಾಕಲು ಸಾಧ್ಯವಾಗದೆ, ಅವರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಿಹಾರದಲ್ಲಿ ನಡೆದಿದೆ. ಮೂವರು ಹೆಣ್ಣು ಮಕ್ಕಳು ಮತ್ತು ಆತ ಅಸುನೀಗಿದ್ದು, ಅದೃಷ್ಟವಶಾತ್ ಗಂಡು ಮಕ್ಕಳಿಬ್ಬರು ಬದುಕುಳಿದಿದ್ದಾರೆ. ಮೃತರನ್ನು ಅಮರ್‌ನಾಥ್ ರಾಮ್ ಮತ್ತು ಮಕ್ಕಳಾದ ಅನುರಾಧ (12), ಶಿವಾನಿ (7), ರಾಧಿಕಾ (6) ಎಂದು ಗುರುತಿಸಲಾಗಿದೆ. ಪುತ್ರರಾದ ಶಿವಂ (6) ಮತ್ತು ಚಂದನ್ (5) ಬದುಕುಳಿದಿದ್ದಾರೆ (Bihar Horror). ಬಿಹಾರದ ಮುಜಫರ್‌ಪುರ್‌ನಲ್ಲಿ ಈ ಘಟನೆ ನಡೆದಿದೆ.
ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಘಟನೆಗೆ ಕಾರಣ ಕಂಡು ಹಿಡಿಯಲು ಮುಂದಾಗಿದ್ದಾರೆ. ಅಮರ್‌ನಾಥ್ ರಾಮ್‌ನ ಪತ್ನಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತ್ನಿ ಮೃತಪಟ್ಟ ನಂತರ ಅಮರ್‌ನಾಥ್ ರಾಮ್ ಮಕ್ಕಳನ್ನು ಸಾಕಲು ಕಷ್ಟಪಡುತ್ತಿದ್ದ ಎನ್ನಲಾಗಿದೆ.
ಕಾರಣವೇನು?
ಸದ್ಯ ಅಮರ್‌ನಾಥ್ ರಾಮ್ ಕೃತ್ಯಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕೆಲವರ ಪ್ರಕಾರ ಪತ್ನಿಯ ಸಾವಿನ ನಂತರ ಆತ ತೀವ್ರ ದುಃಖದಲ್ಲಿದ್ದ. ಜತೆಗೆ 5 ಮಕ್ಕಳನ್ನು ಒಬ್ಬನೇ ನೋಡಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಅವರು ಚಿಕ್ಕವರಾಗಿರುವುದರಿಂದ ಎಲ್ಲರ ಜವಾಬ್ದಾರಿ ಅವನೊಬ್ಬನ ಮೇಲೆಯೇ ಇತ್ತು ಎನ್ನಲಾಗುತ್ತಿದೆ. ಇನ್ನು ಕೆಲವರು ಆತ ಸಾಕಷ್ಟು ಸಾಲ ಮಾಡಿದ್ದ. ಇದನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿಸಿದ್ದಾರೆ. ಪೊಲೀಸರು ಈ ಎಲ್ಲ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಂಡು ನೈಜ ಕಾರಣ ಪತ್ತೆಗೆ ಮುಂದಾಗಿದ್ದಾರೆ.
ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಪುತ್ರ ಆಕಾಶ್ ಆತ್ಮಹತ್ಯೆ
ರಾತ್ರಿ ಊಟದ ಬಳಿಕ ಕೃತ್ಯ
ಒಡೆದ ಮೊಟ್ಟೆ ಪ್ರಕರಣದ ಭೀಕರತೆಗೆ ಸಾಕ್ಷಿಯಾಗಿ ಅಡುಗೆ ಕೋಣೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ. ಮಕ್ಕಳನ್ನು ಕೊಲ್ಲುವ ಮುನ್ನ ಅಮರ್‌ನಾಥ್ ಮೊಟ್ಟೆಯಿಂದ ಮಾಡಿದ ಅಡುಗೆ ತಯಾರಿಸಿದ್ದ. ಪ್ರಾಥಮಿಕ ಮಾಹಿತಿಯ ಪ್ರಕಾರ ಅಮರ್‌ನಾಥ್ ತನ್ನ ಪತ್ನಿಯ ಸೀರೆಯನ್ನು ಕುಣಿಕೆಯನ್ನಾಗಿಸಿ, ಐವರು ಮಕ್ಕಳಲ್ಲಿ ಅದನ್ನು ಕುತ್ತಿಗೆಗೆ ಸುತ್ತಿಕೊಳ್ಳಲು ಸೂಚಿಸಿದ್ದ. ಬಳಿಕ ತಾನೂ ಕೊರಳಿಗೆ ಸುತ್ತಿಕೊಂಡಿದ್ದ. ನಂತರ ಆತ ಜಿಗಿದು ಹಾಗೆ ಮಾಡಲು ಮಕ್ಕಳಿಗೂ ಹೇಳಿದ್ದ. ಆದರೆ ಇಬ್ಬರು ಗಂಡು ಮಕ್ಕಳು ಹಾಗೆ ಮಾಡಲಿಲ್ಲ. ಆ ಮೂಲಕ ಅವರು ಸಾವಿನ ದವಡೆಯಿಂದ ಪಾರಾಗಿದ್ದಾರೆ.
6 ವರ್ಷದ ಶಿವಂ ಘಟನೆಯನ್ನು ತನ್ನದೇ ರೀತಿಯಲ್ಲಿ ವಿವರಿಸಿದ್ದಾನೆ. ʼʼಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿದ್ದಾಗ ತಂದೆ ನನ್ನನ್ನು ಮತ್ತು ಸಹೋದರರನ್ನು ತನ್ನೊಂದಿಗೆ ಬರಲು ಕರೆದಿದ್ದರು. ನಂತರ ನಮ್ಮೆಲ್ಲ ಕುತ್ತಿಗೆಗೆ ಕುಣಿಕೆಯನ್ನು ಹಾಕಿದರು. ಆದರೆ ನಮಗೆ ಜಿಗಿಯಲು ಭಯವಾಯ್ತುʼʼ ಎಂದು ಹೇಳಿದ್ದಾನೆ. ಸದ್ಯ ಆತ ಈ ಶಾಕ್‌ನಲ್ಲೇ ಇದ್ದಾನೆ.
ಮದುವೆ ಆಗಲು 2 ವರ್ಷ ಕಾಯುವಂತೆ ಹೇಳಿದ ಮನೆಯವರು; ಮನನೊಂದು 19 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ
ದೇಶವೇ ಶಾಕ್
ಸದ್ಯ ಈ ಹೈದರ ವಿದ್ರಾವಕ ಪ್ರಕರಣದ ಬಗ್ಗೆ ದೇಶವೇ ಆಘಾತ ವ್ಯಕ್ತಪಡಿಸಿದೆ. ಮುಗ್ಧ ಮಕ್ಕಳ ಜೀವ ಕಸಿದ ಅಮರ್‌ನಾಥ್‌ನ ನಡೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಅನಾಥಾಶ್ರಮಕ್ಕಾದರೂ ನೀಡಬಹುದಿತ್ತು ಎಂದು ಹೇಳಿದ್ದಾರೆ.