ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಸ್ ಬಾಗಿಲಿಗೆ ಕುತ್ತಿಗೆ ಸಿಲುಕಿ 7 ವರ್ಷದ ಬಾಲಕ ಸಾವು; ಸಿಸಿಟಿವಿ ಕ್ಯಾಮರಾದಲ್ಲಿ ಆಘಾತಕಾರಿ ದೃಶ್ಯ ಸೆರೆ

Gujarat News: ಐಷಾರಾಮಿ ಬಸ್‌ನ ಹೈಡ್ರಾಲಿಕ್ ಬಾಗಿಲಿಗೆ ಕುತ್ತಿಗೆ ಸಿಲುಕಿಕೊಂಡು ಏಳು ವರ್ಷದ ಬಾಲಕ ಮೃತಪಟ್ಟ ಆಘಾತಕಾರಿ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ಸಿಸಿಟಿವಿಯ ದೃಶ್ಯಾವಳಿಗಳಲ್ಲಿ, ಬಾಲಕನು ಬಸ್ಸಿನ ಒಳಗೆ ಓಡಾಡುತ್ತಿರುವುದು ಕಂಡುಬಂದಿದೆ. ಆದರೆ, ಬಾಲಕನು ಬಾಗಿಲಿಗೆ ಹೇಗೆ ಸಿಕ್ಕಿಬಿದ್ದನು ಎಂಬ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿಲ್ಲ.

ಸಾಂದರ್ಬಿಕ ಚಿತ್ರ

ಗಾಂಧಿನಗರ, ಆ. 20: ಸ್ಥಳೀಯ ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಐಷಾರಾಮಿ ಬಸ್‌ನ ಹೈಡ್ರಾಲಿಕ್ ಬಾಗಿಲಿಗೆ ಕುತ್ತಿಗೆ ಸಿಲುಕಿಕೊಂಡು ಏಳು ವರ್ಷದ ಬಾಲಕ ಮೃತಪಟ್ಟ ಆಘಾತಕಾರಿ ಘಟನೆ ಗುಜರಾತ್‌ನ (Gujarat) ವಡೋದರಾದಲ್ಲಿ ನಡೆದಿದೆ. ಸೂರ್ಯನಗರ-ತರ್ಸಾಲಿ ಬೈಪಾಸ್ ಬಳಿ ಈ ದುರಂತ ಸಂಭವಿಸಿದೆ. ದುರಸ್ತಿಗಾಗಿ ಬಸ್ ಅನ್ನು ಗ್ಯಾರೇಜ್ ಒಳಗೆ ನಿಲ್ಲಿಸಲಾಗಿತ್ತು. ಆವರಣದ ಸಿಸಿಟಿವಿ (CCTV) ಕ್ಯಾಮರಾ ಘಟನೆಯನ್ನು ಸೆರೆಹಿಡಿದಿದೆ.

ಸಿಸಿಟಿವಿಯ ದೃಶ್ಯಾವಳಿಗಳಲ್ಲಿ, ಬಾಲಕನು ಬಸ್ಸಿನ ಒಳಗೆ ಓಡಾಡುತ್ತಿರುವುದು ಕಂಡುಬಂದಿದೆ. ಕೆಲವು ನಿಮಿಷಗಳ ನಂತರ, ಆಟೋಮ್ಯಾಟಿಕ್ ಹೈಡ್ರಾಲಿಕ್ ಬಾಗಿಲಿನ ಮೆಕ್ಯಾನಿಸಂನಲ್ಲಿ (ಸ್ವಯಂಚಾಲಿತ ಬಾಗಿಲು) ಆತನ ಕುತ್ತಿಗೆ ಸಿಲುಕಿಕೊಂಡು, ಆತ ಬಸ್ಸಿನಿಂದ ನೇತಾಡುತ್ತಿರುವುದು ಕಂಡುಬಂದಿದೆ.

ಬಾಲಕನು ಬಾಗಿಲಿನಿಂದ ನೇತಾಡುತ್ತಿರುವುದನ್ನು ವಿಡಿಯೊ ಸೆರೆ ಹಿಡಿದಿದೆಯಾದರೂ, ಈ ಘಟನೆಗೆ ಮುಂಚಿತವಾಗಿ ನಡೆದ ಪ್ರಮುಖ ದೃಶ್ಯಾವಳಿಗಳು ಲಭ್ಯವಿಲ್ಲ. ಏಳು ವರ್ಷದ ಬಾಲಕನು ವಾಹನದ ಹತ್ತಿರ ಬಂದ ಅಥವಾ ಆತ ಹೈಡ್ರಾಲಿಕ್ ಬಾಗಿಲನ್ನು ತೆರೆಯಲು ಯತ್ನಿಸಿದ ಆ ನಿರ್ದಿಷ್ಟ ಕ್ಷಣವು ರೆಕಾರ್ಡ್ ಆಗಿಲ್ಲ.

ಇಲ್ಲಿದೆ ವಿಡಿಯೊ:



"ನಮ್ಮ ತೆರಿಗೆಯಿಂದಲೇ ನಿಮಗೆ ಸಂಬಳ ಬರೋದು": ಸೇನಾ ಸಿಬ್ಬಂದಿ ಜತೆ ಜೆನ್ ಝೀ ಯುವತಿಯ ಕಿರಿಕ್‌

ಸಿಸಿಟಿವಿ ದೃಶ್ಯಾವಳಿಯ ಈ ವ್ಯತ್ಯಾಸದ ಬಗ್ಗೆ ಮಾತನಾಡಿದ ಗ್ಯಾರೇಜ್ ಮಾಲೀಕ ನಿಕುಂಜ್ ಪಟೇಲ್, ಆ ಭಾಗದಲ್ಲಿ ಉಂಟಾದ ಪವರ್ ಕಟ್ ಅಥವಾ ತಾಂತ್ರಿಕ ದೋಷದಿಂದಾಗಿ ಸಿಸ್ಟಮ್ ಆ ಪ್ರಮುಖ ನಿಮಿಷಗಳನ್ನು ಸೆರೆಹಿಡಿಯಲು ವಿಫಲವಾಗಿರಬಹುದು ಎಂದು ತಿಳಿಸಿದ್ದಾರೆ.

ಬಾಲಕನು ಬಾಗಿಲಿಗೆ ಹೇಗೆ ಸಿಕ್ಕಿಬಿದ್ದನು ಎಂಬ ದೃಶ್ಯ ಸೆರೆಯಾಗದಿರುವುದು ಸಿಸಿಟಿವಿಯಲ್ಲಿ ಸೆರೆಯಾಗದಿರುವುದು ಇದು ಸ್ಥಳೀಯರು ಮತ್ತು ತನಿಖಾಧಿಕಾರಿಗಳಲ್ಲಿ ತೀವ್ರ ಅನುಮಾನಗಳನ್ನು ಹುಟ್ಟು ಹಾಕಿದೆ. ಇಲ್ಲಿ ಯಾವುದಾದರೂ ಅಕ್ರಮ ನಡೆದಿದೆಯೇ ಎಂಬ ಅನುಮಾನಕ್ಕೂ ಕಾರಣವಾಗಿದೆ. ದುರಂತ ಸಂಭವಿಸಿದಾಗ ಮನೆಯಲ್ಲಿದ್ದುದಾಗಿಯೂ ಗ್ಯಾರೇಜ್ ಒಳಗೆ ಯಾವುದೇ ಕಾರ್ಮಿಕರು ಇರಲಿಲ್ಲ ಎಂದು ನಿಕುಂಜ್ ಪಟೇಲ್ ಹೇಳಿದ್ದಾರೆ.

ಸಹೋದರ ಗ್ಯಾರೇಜ್‌ನ ಲೈವ್ ಸಿಸಿಟಿವಿ ಫೀಡ್ ಪರಿಶೀಲಿಸುತ್ತಿದ್ದುದಾಗಿಯೂ ಪಟೇಲ್ ವಿವರಿಸಿದರು. ಬಸ್ ಬಾಗಿಲಿನಲ್ಲಿ ನೇತಾಡುತ್ತಿರುವ ಮಗುವನ್ನು ನೋಡಿದ ಅವರು ತಕ್ಷಣವೇ ಕಾರ್ಮಿಕರನ್ನು ಸ್ಥಳಕ್ಕೆ ಕಳುಹಿಸಿದ್ದಾಗಿ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ದುರಂತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಬಾಲಕನ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.