ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

70 ಎಕ್ರೆ ಕ್ಯಾಂಪಸ್‌, 75 ಲಕ್ಷ ರೂ. ಎಂಬಿಬಿಎಸ್‌ ಫೀಸ್‌; ಫರಿದಾಬಾದ್‌ನ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯ ಉಗ್ರ ನೆಲೆಯಾಗಿದ್ದು ಹೇಗೆ?

Al-Falah University: ನವೆಂಬರ್‌ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಉಗ್ರರು ನಡೆಸಿದ ಕಾರು ಬಾಂಬ್‌ ಸ್ಫೋಟದ ಪ್ರಧಾನ ಸೂತ್ರಧಾರಿ ಡಾ. ಉಮರ್‌ ಮೊಹಮ್ಮದ್‌ ಹರಿಯಾಣದ ಫರಿದಾಬಾದ್‌ನ ಅಲ್‌ ಫಲಾಹ್‌ ವಿವಿಯ ಶಿಕ್ಷಕನಾಗಿದ್ದ. ಅಲ್ಲದೆ ಆತನೊಂದಿಗೆ ಸೆರೆಸಿಕ್ಕ ಡಾ. ಮುಜಮ್ಮಿಲ್ ಗನೈ, ಡಾ. ಶಾಹೀನ್‌ ಶಯೀದ್‌ ಈ ವಿವಿಯವರೇ. ಹೀಗಾಗಿ ಸದ್ಯ ಫರಿದಾಬಾದ್‌ನ ಅಲ್‌ ಫಲಾಹ್‌ ವಿವಿ ಉಗ್ರರ ಆಶ್ರಯ ತಾಣವಾಗಿ ಬದಲಾಗಿದೆಯೇ ಎನ್ನುವ ಅನುಮಾನ ಹುಟ್ಟು ಹಾಕಿದೆ.

ಫರಿದಾಬಾದ್‌ನ ಅಲ್‌ ಫಲಾಹ್‌ ವಿವಿ ಉಗ್ರ ನೆಲೆಯಾಗಿದ್ದು ಹೇಗೆ?

ಉಗ್ರರಿಗೆ ಆಶ್ರಯ ನೀಡುವ ಮೂಲಕ ಕುಖ್ಯಾತಿ ಪಡೆದ ಫದರಿದಾಬಾದ್‌ನ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯ (ಸಂಗ್ರಹ ಚಿತ್ರ). -

Ramesh B
Ramesh B Nov 12, 2025 6:47 PM

ಚಂಡೀಗಢ, ನ. 12: ನವೆಂಬರ್‌ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಉಗ್ರರು ನಡೆಸಿದ ಕಾರು ಬಾಂಬ್‌ ಸ್ಫೋಟಕ್ಕೂ (Delhi Blast), ಹರಿಯಾಣದ ಫರಿದಾಬಾದ್‌ನಲ್ಲಿ ಭದ್ರತಾ ಪಡೆ ಬರೋಬ್ಬರಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿ ಉಗ್ರರನ್ನು ಬಂಧಿಸಿದ ಪ್ರಕರಣಕ್ಕೂ ಥಳಕು ಹಾಕಿಕೊಂಡಿದೆ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯ (Al-Falah University). ಮುಸ್ಲಿಂ ಜನಸಂಖ್ಯೆ ಅಧಿಕವಿರುವ ಹರಿಯಾಣದ ಫರಿದಾಬಾದ್‌ ಜಿಲ್ಲೆಯ ದೌಜ್‌ ಪ್ರದೇಶದಲ್ಲಿರುವ ಈ ವಿವಿ ಇದೀಗ ಉಗ್ರರನ್ನು ಹುಟ್ಟು ಹಾಕುವ, ವೈಟ್‌ ಕಾಲರ್‌ ಭಯೋತ್ಪಾದಕರಿಗೆ ಆಶ್ರಯ ಕೊಡುವ ತಾಣ ಎನಿಸಿಕೊಂಡಿದೆ. ಈಗಾಗಲೇ ವೈಟ್‌ ಕಾಲರ್‌ ಟೆರರ್‌ ಮೊಡ್ಯೂಲ್‌ಗೆ ಸಂಬಂಧಿಸಿ ಈ ವಿವಿಯ ಮೂವರು ವೈದ್ಯರನ್ನು ಬಂಧಿಸಲಾಗಿದೆ. ಇವರಿಗೂ ದೆಹಲಿ ಬಾಂಬ್‌ ಸ್ಫೋಟಕ್ಕೂ ಸಂಬಂಧವಿದೆ ಎನ್ನುವ ಸೂಚನೆ ಸಿಕ್ಕಿದ್ದು, ವಿವಿ ಕಾರ್ಯ ವೈಖರಿ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಸದ್ಯ ಅಲ್‌ ಪಲಾಹ್‌ ವಿಶ್ವ ವಿದ್ಯಾನಿಲಯವನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈ ವಿವಿಯಲ್ಲಿ ಉನ್ನತ ಶಿಕ್ಷಣ ಪಡೆದವರ ಮೇಲೆ ಭಯೋತ್ಪಾದಕರ ಕರಿ ನೆರಳು ಹೇಗೆ ಬೀಳುತ್ತಿದೆ ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಫರಿದಾಬಾದ್‌ ಅಲ್‌ ಫಲಾಹ್‌ ವಿಶ್ವ ವಿದ್ಯಾನಿಲಯದಲ್ಲಿ ಅಧಿಕಾರಿಗಳಿಂದ ಪರಿಶೀಲನೆ:



ಈ ಸುದ್ದಿಯನ್ನೂ ಓದಿ: Delhi Blast: ಆ 3 ಗಂಟೆಯ ರಹಸ್ಯ; ದೆಹಲಿ ಸ್ಫೋಟಕ್ಕೂ ಮುನ್ನ ಕಾರು ನಿಲ್ಲಿಸಿ ಬಾಂಬರ್‌ ಮಾಡಿದ್ದೇನು?

ಯಾವಾಗ ಆರಂಭವಾಯ್ತು?

1997ರಲ್ಲಿ ಎಂಜಿನಿಯರಿಂಗ್ ಕಾಲೇಜಾಗಿ ಸ್ಥಾಪನೆಯಾದ ಅಲ್-ಫಲಾಹ್ 2014ರಲ್ಲಿ ವಿಶ್ವ ವಿದ್ಯಾಲಯದ ಸ್ಥಾನಮಾನ ಪಡೆಯಿತು. ವೆಬ್‌ಸೈಟ್ ಪ್ರಕಾರ ಇದನ್ನು ಹರಿಯಾಣ ಖಾಸಗಿ ವಿಶ್ವ ವಿದ್ಯಾಲಯಗಳ ಕಾಯ್ದೆಯಡಿ ಸ್ಥಾಪಿಸಲಾಗಿದೆ. ಆರಂಭಿಕ ವರ್ಷಗಳಲ್ಲಿ ಅಲ್‌ ಪಲಾಹ್ ವಿಶ್ವ ವಿದ್ಯಾಲಯ ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದಂತಹ ಇತರ ಪ್ರಮುಖ ಸಂಸ್ಥೆಗಳಿಗೆ ಪರ್ಯಾಯ ಎನಿಸಿಕೊಂಡಿತ್ತು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು.

ಈ ವಿಶ್ವ ವಿದ್ಯಾನಿಲಯವು ಅಲ್ ಫಲಾಹ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಜಿ, ಬ್ರೌನ್ ಹಿಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಜಿ, ಅಲ್ ಫಲಾಹ್ ಸ್ಕೂಲ್ ಆಫ್ ಎಜುಕೇಶನ್ ಆ್ಯಂಡ್‌ ಟ್ರೈನಿಂಗ್ ಸೇರಿದಂತೆ ಹಲವು ಕಾಲೇಜುಗಳ ಮೂಲಕ ಶಿಕ್ಷಣ ನೀಡುತ್ತಿದೆ. ಜತೆಗೆ ಅಲ್ ಫಲಾಹ್ ವೈದ್ಯಕೀಯ ಕಾಲೇಜು ಕೂಡ ಹೊಂದಿದೆ. ಜತೆಗೆ 650 ಹಾಸಿಗೆಗಳನ್ನು ಹೊಂದಿರುವ ಸಣ್ಣ ಆಸ್ಪತ್ರೆ ಕೂಡ ಇದ್ದು, ಅಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ ಫಲಾಹ್ ಚಾರಿಟೇಬಲ್ ಟ್ರಸ್ಟ್ ನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಜವಾದ್ ಅಹ್ಮದ್ ಸಿದ್ದಿಕಿ ಅಧ್ಯಕ್ಷರಾಗಿ, ಮುಫ್ತಿ ಅಬ್ದುಲ್ಲಾ ಖಾಸಿಮಿ ಎಂ.ಎ. ಉಪಾಧ್ಯಕ್ಷರಾಗಿ ಮತ್ತು ಮೊಹಮ್ಮದ್ ವಾಜಿದ್ ಡಿಎಂಇ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಭೂಪಿಂದರ್ ಕೌರ್ ಆನಂದ್ ಪ್ರಸ್ತುತ ವಿಶ್ವ ವಿದ್ಯಾಲಯದ ಉಪಕುಲಪತಿಯಾಗಿದ್ದರೆ, ಪ್ರೊ. ಮೊಹಮ್ಮದ್ ಪರ್ವೇಜ್ ರಿಜಿಸ್ಟ್ರಾರ್ ಆಗಿದ್ದಾರೆ.

ಉಗ್ರರ ಆಶ್ರಯ ತಾಣ?

ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಪುಲ್ವಾಮಾ ಮೂಲದ ವೈದ್ಯ, ಅಲ್ಫಲಾಹ್ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ್ ಉಮರ್ ಭಾಗಿಯಾಗಿದ್ದಾನೆ ಎನ್ನುವ ಆಘಾತಕಾರಿ ಅಂಶ ತನಿಖೆ ವೇಳೆ ಬಯಲಾಗಿದೆ.

ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶಗಳನ್ನು ವ್ಯಾಪಿಸಿರುವ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಉಗ್ರ ಸಂಘಟನೆಯ ಜತೆ ಸಂಪರ್ಕ ಹೊಂದಿರುವ ವೈಟ್-ಕಾಲರ್ ಟೆರರಿಸ್ಟ್‌ ಮಾಡ್ಯೂಲ್ ತನಿಖೆಯ ಭಾಗವಾಗಿ ಅಧಿಕಾರಿಗಳು ಈ ವಿಶ್ವ ವಿದ್ಯಾಲಯದ ಮೂವರು ವೈದ್ಯರು ಸೇರಿದಂತೆ 8 ಜನರನ್ನು ಬಂಧಿಸಿ 2,900 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಬಂಧಿತರ ಪೈಕಿ ಡಾ. ಮುಜಮ್ಮಿಲ್ ಗನೈ, ಡಾ. ಶಾಹೀನ್‌ ಶಯೀದ್‌ ಕೂಡ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರೆಲ್ಲ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಪ್ರಧಾನ ಕೊಂಡಿಗಳು.

70 ಎಕ್ರೆಯಲ್ಲಿ ಕ್ಯಾಂಪಸ್‌

ಸುಮಾರು 70 ಎಕ್ರೆಯಲ್ಲಿ ವ್ಯಾಪಿಸಿರುವ ಈ ವಿವಿ ವೈದ್ಯಕೀಯ ಶಾಸ್ತ್ರ, ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ಹ್ಯುಮಾನಿಟೀಸ್‌, ಕಂಪ್ಯೂಟರ್‌ ಸೈನ್ಸ್‌ ಮುಂತದ ಕೋರ್ಸ್‌ ಹೊಂದಿದೆ. ಆಲ್‌ ಫಲಾಹ್‌ ಸ್ಕೂಲ್‌ ಆಫ್‌ ಮೆಡಿಕಲ್‌ ಸೈಯನ್ಸಸ್‌ ಆ್ಯಂಡ್‌ ರಿಸರ್ಚ್‌ ಸೆಂಟರ್‌ 2019ರಿಂದ ಎಂಬಿಬಿಎಸ್‌ ಪದವಿ ನೀಡುತ್ತಿದೆ. ಇಲ್ಲಿ ಎಂಬಿಬಿಎಸ್‌ ಕೋರ್ಸ್‌ಗೆ 74.50 ಲಕ್ಷ ರೂ. ಫೀಸ್‌ ಕಟ್ಟಬೇಕು. ಮೊದಲ 4 ವರ್ಷ ತಲಾ 16.37 ಲಕ್ಷ ರೂ., ಕೊನೆಯ ವರ್ಷ 9 ಲಕ್ಷ ರೂ. ಶುಲ್ಕ ಪಾವತಿಸಬೇಕು. ಪ್ರತಿ ವರ್ಷ ವಿವಿ, ಹಾಸ್ಟೆಲ್‌ ಫೀಸ್‌ ಆಗಿ 3 ಲಕ್ಷರೂ. ಕಟ್ಟಬೇಕು. ಇಲ್ಲಿ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸುಮಾರು ಶೇ. 40ರಷ್ಟು ವಿದ್ಯಾರ್ಥಿಗಳು ಕಾಶ್ಮೀರಿಗಳಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Blast: 26/11 ಮುಂಬೈ ದಾಳಿಯ ರೀತಿಯಲ್ಲೇ ನಡೆದಿತ್ತು ಸಂಚು; ದೆಹಲಿ ಸ್ಫೋಟದ ಭಯಾನಕ ಸತ್ಯ ಬಯಲು

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದ ಕ್ಯಾಂಪಸ್ ಭಯೋತ್ಪಾದಕ ಚಟುವಟಿಕೆಯ ತಾಣವಾಗಿದ್ದು ಹೇಗೆ ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ವಿವಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಕೇವಲ 30 ಕಿಲೋ ಮೀಟರ್ ದೂರದಲ್ಲಿದೆ.