ಸುಳ್ಳು ಪ್ರಕರಣ ದಾಖಲು ವಿರೋಧಿಸಿ ಕಾಂಗ್ರೆಸ್ ನಾಯಕನಿಂದ ತಲೆ ಕೆಳಗಾಗಿ ನಿಂತು ವಿಶಿಷ್ಟ ಪ್ರತಿಭಟನೆ
ತನ್ನ ವಿರುದ್ದ ಸುಳ್ಳು ಗುಂಡೇಟು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕನೊಬ್ಬ ತಲೆ ಕೆಳಗೆ ಮಾಡಿ ನಿಂತು ಪ್ರತಿಭಟನೆ ನಡೆಸಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ. ಮಹಾಶಿವರಾತ್ರಿಯಂದು ನಡೆದ ಶಿವ ಭಾರತ್ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಗುಂಡೇಟಿಗೆ ಸಂಬಂಧಿಸಿ ಶಿಯೋಪುರದ ಕಾಂಗ್ರೆಸ್ ಶಾಸಕ ಬಾಬು ಜಾಂಡೆಲ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಂಗ್ರಹ ಚಿತ್ರ -
ಭೋಪಾಲ್: ಕಾಂಗ್ರೆಸ್ ಶಾಸಕರೊಬ್ಬರು (Congress MLA) ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ತಲೆ ಕೆಳಗೆ ಮಾಡಿ ನಿಂತು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ (Headstand Protest) ನಡೆಸಿರುವ ಘಟನೆ ಭೋಪಾಲ್ (Bhopal) ನಲ್ಲಿ ನಡೆಯಿದೆ. ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದ (state Assembly Budget Session) 10ನೇ ದಿನ ಶಿಯೋಪುರದ ( Sheopur) ಕಾಂಗ್ರೆಸ್ ಶಾಸಕ ಬಾಬು ಜಾಂಡೆಲ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ವಿರೋಧಿಸಿ ತಲೆ ಕೆಳಗೆ ಮಾಡಿ ನಿಂತು ಪ್ರತಿಭಟನೆ ನಡೆಸಿದರು.
ಮಹಾಶಿವರಾತ್ರಿಯಂದು ನಡೆದ ಶಿವ ಭಾರತ್ ಮೆರವಣಿಗೆಯ ವೇಳೆ ಗುಂಡೇಟಿಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶುಕ್ರವಾರ ಶೂನ್ಯ ವೇಳೆಯಲ್ಲಿ ಕಾರ್ಯವಿಧಾನದಲ್ಲಿ ಲೋಪವಾಗಿರುವುದಾಗಿ ಆಕ್ಷೇಪಿಸಿ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಶಾಸಕರ ಸಭಾತ್ಯಾಗ ಮಾಡಿದರು.
ಅಪಾಯದ ಎಚ್ಚರಿಕೆ ನೀಡಿದರೂ ಬುದ್ಧಿ ಕಲಿಯುತ್ತಿಲ್ಲ; ರೈಲಿನಲ್ಲಿ ಎಲೆಕ್ಟ್ರಿಕ್ ಕೆಟಲ್ ಬಳಸಿ ಚಹಾ ತಯಾರಿಸಿದ ಮಹಿಳೆ
ಕಲಾಪಗಳ ವೇಳೆ ಕಾಂಗ್ರೆಸ್ ಶಾಸಕ ಪಂಕಜ್ ಉಪಾಧ್ಯಾಯ ಮತ್ತು ಪಕ್ಷದ ಸಚೇತಕ ಸೋಹನ್ ವಾಲ್ಮೀಕಿ ಅವರು ಶಾಸಕ ಬಾಬು ಜಾಂಡೆಲ್ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವಿಷಯವನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುವುದು ಎಂದು ಸ್ಪೀಕರ್ ಹೇಳಿದಾಗ, ವಿರೋಧ ಪಕ್ಷದ ಸದಸ್ಯರು ತಮ್ಮ ಸಹೋದ್ಯೋಗಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಆರಂಭಿಸಿದರು. ಇದಾದ ಕೆಲವು ನಿಮಿಷಗಳ ಬಳಿಕ ಕಾಂಗ್ರೆಸ್ ಸದಸ್ಯರು ಸಭಾ ತ್ಯಾಗ ಮಾಡಿದರು.
ಅನಂತರ ಸದನದ ಹೊರಗೆ ಮಹಾತ್ಮ ಗಾಂಧಿಯವರ ಪ್ರತಿಮೆಯ ಮುಂದೆ ಜಾಂಡೆಲ್ ಅವರು ತಲೆ ಕೆಳಗೆ ಮಾಡಿ ನಿಂತು ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿದೆ ಎಂದು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರದ ಒತ್ತಡದ ಕಾರಣದಿಂದ ನನ್ನ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಾಗುತ್ತಿದೆ. ಒಂದು ತಿಂಗಳಲ್ಲಿ ಮೂರು, ಇಲ್ಲಿಯವರೆಗೆ 15 ಎಫ್‌ಐಆರ್‌ಗಳು ದಾಖಲಾಗಿವೆ. ನಾನು ಧ್ವನಿ ಎತ್ತಿದಾಗಲೆಲ್ಲಾ ಎಫ್‌ಐಆರ್ ದಾಖಲಾಗುತ್ತದೆ. ಅವರು ನನ್ನನ್ನು ಜೈಲಿಗೆ ಹಾಕಲು ಬಯಸುತ್ತಾರೆ. ನನ್ನನ್ನು ಕೊಲ್ಲಲು ಬಯಸುತ್ತಾರೆ ಎಂದು ಹೇಳಿದರು.
ಬಿಜೆಪಿ ನಾಯಕರು ಇದೇ ರೀತಿಯ ಕೃತ್ಯಗಳಿಗೆ ಯಾವುದೇ ಕ್ರಮವನ್ನು ಎದುರಿಸುವುದಿಲ್ಲ. ಗುಂಡು ಹಾರಿಸಿದಾಗ, ಶಸ್ತ್ರಾಸ್ತ್ರಗಳೊಂದಿಗೆ ಅವರು ನೃತ್ಯ ಮಾಡಿದಾಗ ಯಾವುದೇ ಎಫ್‌ಐಆರ್ ದಾಖಲಾಗುವುದಿಲ್ಲ ಎಂದು ಜಾಂಡೆಲ್ ಆರೋಪಿಸಿದ್ದು, ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ನಾನು ಕೇವಲ ಒಂದು ಸಂಭ್ರಮಾಚರಣೆಯ ಸುತ್ತನ್ನು ಹಾರಿಸಿದೆ. ನಾನು ಎಕೆ-47 ಹೊಂದಿರುವ ಭಯೋತ್ಪಾದಕನಲ್ಲ. ನಾನು ಯಜ್ಞದ ಆತಿಥಿಯಾಗಿದ್ದೆ ಎಂದು ಹೇಳಿದರು.
ಇವರು ʼಭಕ್ತʼ ಕಳ್ಳರು; ದೇವರಿಗೆ ಕೈ ಮುಗಿದು ಕಾಣಿಕೆ ಪೆಟ್ಟಿಗೆ ಹೊತ್ತೊಯ್ದ ಖದೀಮರು
ದಾಖಲಾಗಿರುವ ಪ್ರಕರಣ ಹಿಂಪಡೆಯದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಹೇಳಿದ ಅವರು, ನಾನು ಗಾಂಧಿ ಆಶ್ರಮದಲ್ಲಿ ಪ್ರತಿಭಟನೆ ನಡೆಸಿ ಬೀದಿಗಿಳಿಯುತ್ತೇನೆ. ನಾನು ಜೈಲಿಗೆ ಹೋಗಬೇಕಾಗಿ ಬಂದರೂ ಅಥವಾ ಗುಂಡೇಟಿನಿಂದ ಸಾಯಬೇಕಾಗಿ ಬಂದರೂ ಹೆದರುವುದಿಲ್ಲ" ಎಂದು ಅವರು ಹೇಳಿದರು.
ಶಿಯೋಪುರದಲ್ಲಿ ಫೆಬ್ರವರಿ 15 ರಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರು ದಿನಗಳ ಯಜ್ಞವನ್ನು ಆಯೋಜಿಸಲಾಗಿತ್ತು. ಬಳಿಕ ಶಿವನ ವಿಗ್ರಹವನ್ನು ಸ್ಥಾಪಿಸಲಾಯಿತು. ಈ ವೇಳೆ ಭವ್ಯ ಮೆರವಣಿಗೆಯನ್ನು ಆಯೋಜಿಸಿದ್ದು, ದೇವರ ಗೌರವಾರ್ಥವಾಗಿ ಸಂಭ್ರಮಾಚರಣೆಯ ಗುಂಡನ್ನು ತಾವು ಹಾರಿಸಿರುವುದಾಗಿ ಜಾಂಡೆಲ್ ತಿಳಿಸಿದ್ದಾರೆ.