ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಹಾರದ ದೇವಸ್ಥಾನದಲ್ಲಿ ಭಾರೀ ಕಾಲ್ತುಳಿತ; ಎಂಟು ಮಹಿಳೆಯರು ಸಾವು, ಹಲವರಿಗೆ ಗಾಯ

Bihar Temple Stampede: ಬಿಹಾರದ ನಳಂದ ಜಿಲ್ಲೆಯ ಬಿಹಾರ್ ಶರೀಫ್‌ನ ಮಾಘ್ರಾ ಪ್ರದೇಶದಲ್ಲಿರುವ ಪ್ರಸಿದ್ಧ ಮಾ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಎಂಟು ಮಹಿಳೆಯರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.

ಸಂಗ್ರಹ ಚಿತ್ರ

ಪಟನಾ: ಬಿಹಾರದ ನಳಂದ ಜಿಲ್ಲೆಯ ಬಿಹಾರ್ ಶರೀಫ್‌ನ ಮಾಘ್ರಾ (Bihar Temple Stampede) ಪ್ರದೇಶದಲ್ಲಿರುವ ಪ್ರಸಿದ್ಧ ಮಾ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಎಂಟು ಮಹಿಳೆಯರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ದೇವಾಲಯದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಭಕ್ತರು ದೂರಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ವಿಡಿಯೋ ನೋಡಿ



ಅಲ್ಲಿ ಭಾರಿ ಜನಸಂದಣಿ ಇತ್ತು. ಜನರಿಗೆ ದೇವಸ್ಥಾನದ ಒಳಗೆ ಹೋಗಲು ಜಾಗವೂ ಇರಲಿಲ್ಲ. ಬಿಸಿಲು ಹೆಚ್ಚಾಗಿತ್ತು ಮತ್ತು ಹೆಚ್ಚಿನ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದ್ದ ಕಾರಣ, ಅವರಲ್ಲಿ ಕೆಲವರಿಗೆ ಕಡಿಮೆ ರಕ್ತದೊತ್ತಡ ಕಾಣಿಸಿಕೊಂಡಿತು, ಇನ್ನು ಕೆಲವರು ಮೂರ್ಛೆ ಹೋದರು. ಬೇರೇನೂ ಆಗಲಿಲ್ಲ... ಆಂಬ್ಯುಲೆನ್ಸ್ ತುಂಬಾ ತಡವಾಗಿ ಬಂದಿತು. ಆಂಬ್ಯುಲೆನ್ಸ್ ಅನ್ನು ತಕ್ಷಣ ಏಕೆ ಲಭ್ಯವಾಗಲಿಲ್ಲ?" ಎಂದು ಆಸ್ಪತ್ರೆಯ ವ್ಯಕ್ತಿಯೊಬ್ಬರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.



ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ, ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಘಟನಾ ಸ್ಥಳದಿಂದ ಫೋಟೋಗಳು ಹಲವಾರು ಮಹಿಳೆಯರು ನೆಲದ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ತೋರಿಸಿವೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

IPL 2026: ಕಾಲ್ತುಳಿದಲ್ಲಿ ಮೃತರಾದವರಿಗೆ ಗೌರವಾರ್ಥವಾಗಿ 11 ಆಸನಗಳನ್ನು ಕಾಯ್ದಿರಿಸಿದ ಆರ್‌ಸಿಬಿ!

ಜನಸಂದಣಿಯನ್ನು ನಿಯಂತ್ರಿಸಲು ಸಾಕಷ್ಟು ಪೊಲೀಸ್ ಸಿಬ್ಬಂದಿ ಅಥವಾ ಸರಿಯಾದ ಬ್ಯಾರಿಕೇಡ್‌ಗಳನ್ನು ನಿಯೋಜಿಸಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದೇಗುಲದ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಪೊಲೀಸ್ ಆಡಳಿತದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರತ್ಯಕ್ಷದರ್ಶಿಗಳು ಈ ಘಟನೆಗೆ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Vishakha Bhat Heggar

View all posts by this author