ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿಪಕ್ಷಗಳ ರಾಜಕೀಯ ಸ್ವಾರ್ಥಕ್ಕೆ ಬಲಿಯಾದ ಐತಿಹಾಸಿಕ ಸುಧಾರಣೆ

ಭಾರತವು ಪ್ರಜಾಪ್ರಭುತ್ವದ ತಾಯಿ. ಆಕೆ ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾವಿರಾರು ವರ್ಷಗಳ ಪಯಣವನ್ನು ನಡೆಸಿದ್ದಾಳೆ. ಅದಕ್ಕೊಂದು ಹೊಸ ಆಯಾಮ ನೀಡುವ ಅವಕಾಶ ಒದಗಿದೆ. " ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆ ಸಕ್ರಿಯವಾಗಿ ಭಾಗವಹಿಸಬೇಕು ಎನ್ನುವ ಆಶಯದೊಂದಿಗೆ ಈ ವಿಧೇಯಕವನ್ನು ನಾವು ತಂದಿದ್ದೆವು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಂಗ್ರಹ ಚಿತ್ರ
  • ಸತೀಶ್‌ ಕುಮಾರ್‌

ಭಾರತವು ಪ್ರಜಾಪ್ರಭುತ್ವದ ತಾಯಿ. ಆಕೆ ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾವಿರಾರು ವರ್ಷಗಳ ಪಯಣವನ್ನು ನಡೆಸಿದ್ದಾಳೆ. ಅದಕ್ಕೊಂದು ಹೊಸ ಆಯಾಮ ನೀಡುವ ಅವಕಾಶ ಒದಗಿದೆ. " ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆ ಸಕ್ರಿಯವಾಗಿ ಭಾಗವಹಿಸಬೇಕು ಎನ್ನುವ ಆಶಯದೊಂದಿಗೆ ಈ ವಿಧೇಯಕವನ್ನು ನಾವು ತಂದಿದ್ದೆವು. ಈ ಅವಕಾಶವನ್ನು ತಪ್ಪಿಸದಿರಿ ಎಂದು ನಾವು ಎಲ್ಲ ಸಂಸದರಿಗೆ ಮನವಿ ಮಾಡಿದ್ದೆವು. ಎಲ್ಲರೂ ಸೇರಿ ಪ್ರಜಾಪ್ರಭುತ್ವಕ್ಕೆ ಹೊಸ ಆಯಾಮವನ್ನು ಕಲ್ಪಿಸಬಹುದಿತ್ತು. ಇದು ಭಾರತದ ನಾರಿ ಶಕ್ತಿಯ ಅಭ್ಯುದಯಕ್ಕೆ ನಡೆದ ಮಹಾ ಸಂಕಲ್ಪವಾಗಿತ್ತುʼʼ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ.

ಈ ವಿಧೇಯಕದ ಫಲಶ್ರುತಿಯಾಗಿ ರಾಜಕೀಯದ ಫಲಶ್ರುತಿಯಲ್ಲದೆ ದೇಶದ ವಿಧಿಯನ್ನೂ ಬದಲಿಸಬಹುದಾಗಿತ್ತು ಎಂಬ ವಿಶ್ವಾಸವಿತ್ತು. ಹೀಗಿದ್ದರೂ ಪ್ರತಿಪಕ್ಷಗಳ ಸ್ವಾರ್ಥ ಲಾಲಸೆಯ ಪರಿಣಾಮ ಮಹಿಳೆಯರು ನೀತಿ ನಿರೂಪಣೆಯಲ್ಲಿ ವ್ಯಾಪಕವಾಗಿ ಭಾಗವಹಿಸಲು ಸಹಕರಿಸುವ ಮೀಸಲು ವಿಧೇಯಕವನ್ನು ಅಂಗೀಕರಿಸಲು 30 ವರ್ಷಗಳಿಂದಲೂ ಹೆಚ್ಚು ವಿಳಂಬವಾಗಿದೆ. ಪ್ರತಿಪಕ್ಷಗಳು ಮತ್ತೊಮ್ಮೆ ವಿಧೇಯಕನ್ನು ತಿರಸ್ಕರಿಸಿವೆ. ಇಂಡಿ ಒಕ್ಕೂಟವು ತನ್ನ ಸ್ವಾರ್ಥ ರಾಜಕೀಯಕ್ಕಾಗಿ ಮಹಿಳೆಯರ ಹಿತಾಸಕ್ತಿಯನ್ನು ಕಡೆಗಣಿಸಿದೆ.

ಮಹಿಳಾ ಮೀಸಲಾತಿಗೆ ನಿಮ್ಮ ಅಜ್ಜಿ ಕಾಯುತ್ತಿದ್ದರು. ನಿಮ್ಮ ತಾಯಿ ಕಾಯುತ್ತಿದ್ದರು. ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳು ನಿಮ್ಮ ಮಗಳೂ ಮತ್ತೆ 30 ವರ್ಷ ಕಾಯುವಂತೆ ಮಾಡಿವೆ. ಇದು ಕೇವಲ ಸೀಟುಗಳಿಗೋಸ್ಕರವಲ್ಲ, ಇದು ಪ್ರಜಾಪ್ರಭುತ್ವದ ದೇಗುಲವನ್ನು ಪ್ರವೇಶಿಸುವ ಭಾರತೀಯ ಮನೆಗಳ ಸ್ತ್ರೀ ಶಕ್ತಿಯ ಪ್ರಾತಿನಿಧ್ಯದ ವಿಚಾರ. ಪ್ರತಿಪಕ್ಷಗಳ ಅಸಹಕಾರದಿಂದ ಇದು ಸಾಧ್ಯವಾಗುತ್ತಿಲ್ಲ. ಉನ್ನತ ಮಟ್ಟದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಒದಗಿಸಲು ಅವರು ಬಿಡುತ್ತಿಲ್ಲ. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಲು ಪ್ರತಿಪಕ್ಷಗಳು ಬಿಡದಿರಲು ಕಾರಣವೇ ಅವುಗಳ ರಾಜಕೀಯ ಸ್ವ ಹಿತಾಸಕ್ತಿ.

ಮಹಿಳಾ ಮೀಸಲಾತಿಯು ರಾಜಕೀಯ ನಡೆಯಲ್ಲ. ಅದಕ್ಕೆ ಅರ್ಥವೂ ಇಲ್ಲ. ಆದರೆ ಪ್ರತಿಪಕ್ಷಗಳು, ಬಹಿರಂಗವಾಗಿ ತಮ್ಮ ಸ್ತ್ರೀ ದ್ವೇಷವನ್ನು ಬಿಂಬಿಸಿವೆ. ಕಾಂಗ್ರೆಸ್‌ ಸಾಂಪ್ರದಾಯಿಕವಾಗಿ ಮಹಿಳಾ ವಿರೋಧಿಯೇನೋ ಎನ್ನುವಂತಿದೆ. ರಾಜೀವ್‌ ಗಾಂಧಿಯವರು ಪ್ರಧಾನಿಯಾಗಿದ್ದಾಗ ಮುಸ್ಲಿಂ ಪುರುಷ ಪತ್ನಿಗೆ ಕಡ್ಡಾಯವಾಗಿ ಜೀವನಾಂಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದ್ದರೂ, ಅದನ್ನು ರದ್ದುಗೊಳಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗಿತ್ತು. ಆಗ ಮೌಲ್ವಿಗಳು ಗದ್ದಲ ಎಬ್ಬಿಸಿದ್ದರು ಹಾಗೂ ರಾಜೀವ್‌ ಗಾಂಧಿಯವರು ಒತ್ತಡಕ್ಕೆ ಮಣಿದಿದ್ದರು. ಈ ಅನ್ಯಾಯವನ್ನು ನರೇಂದ್ರ ಮೋದಿಯವರು ಸರಿಪಡಿಸಿದರು. ಎನ್‌ ಡಿಎ ಸರಕಾರವು ತ್ರಿವಳಿ ತಲಾಖ್‌ ನಿಷೇಧಿಸುವ ಮೂಲಕ ಶಾ ಬಾನೊ ಪ್ರಕರಣದ ಕಳಂಕ ಕಳೆದುಹೋಗಿತ್ತು.

ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿಯನ್ನು ಮುಂದಿಟ್ಟುಕೊಂಡು ಅದರ ಕ್ರೆಡಿಟ್‌ ಪಡೆಯಲು ಪ್ರತಿಪಕ್ಷಗಳು ಯತ್ನಿಸುತ್ತವೆ ಮತ್ತು ತಮ್ಮ ರಾಜಕೀಯ ಸ್ವಾರ್ಥವನ್ನು ಮುಚ್ಚಿಡಲು ಯತ್ನಿಸುತ್ತವೆ. ಆದರೆ ಅದರಿಂದ ಅವರ ಸ್ಥಾನಕ್ಕೆ ತೊಂದರೆ ಆಗುವುದಿಲ್ಲ. ಆದರೆ ಅವರು ಶಾಸಕಾಂಗದ ಮಟ್ಟದಲ್ಲಿ ತರಲು ಬಿಡುವುದಿಲ್ಲ. ಉತ್ತರ ಮತ್ತು ದಕ್ಷಿಣ ಭಾರತವೆಂದು ಭೇದಭಾವ ಸೃಷ್ಟಿಸಲು ಯತ್ನಿಸಿದರು. ತಮ್ಮ ಮಹಿಳಾ ವಿರೋಧಿ ನಿಲುವನ್ನು ಗೌಪ್ಯವಾಗಿಡಲು ಈ ತಂತ್ರವನ್ನು ಅನುಸರಿಸುತ್ತವೆ.

ಕಾಂಗ್ರಸ್‌ ಈ ಹಿಂದೆ ಹಲವಾರು ಸಲ ಅವ್ಯವಸ್ತೆಗೆ ಕಾರಣವಾಗಿತ್ತು. 2014ರಲ್ಲಿ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ಮಹಿಳೆಯರು ಹಲವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ದೇಶದಲ್ಲಿ ಶೌಚಾಲಯಗಳ ಅಭಾವ ಇತ್ತು. ಗ್ಯಾಸ್‌ ಸಿಲಿಂಡರ್‌ ಸಿಗುತ್ತಿರಲಿಲ್ಲ. ಮನೆಗೆ ನೀರಿನ ಸಂಪರ್ಕಕ್ಕೆ ಕೊರತೆ ಇತ್ತು. ಮನೆಗಳ ಕೊರತೆ ಇತ್ತು. ಕಳೆದ 10-12 ವರ್ಷಗಳಲ್ಲಿಹೆಚ್ಚಿನ ಸಮಸ್ಯೆಗಳನ್ನು ಮೋದಿಯವರು ಬಗೆಹರಿಸಿದರು. ಇದನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಲಾರವು. ವೃಥಾ ಟೀಕೆ, ಅಣಕ ಮಾಡುತ್ತಿವೆ.

ಮಹಿಳಾ ವಿರೋಧಿ ಶಕ್ತಿಗಳು ತಾತ್ಕಾಲಿಕವಾಗಿ ಗೆದ್ದಿರಬಹುದು. ಆದರೆ ಮಹಿಳೆಯರ ಪರವಾಗಿ ಸರಕಾರ ನಿಲ್ಲಲಿದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ. ತಾಯಂದಿರು, ಸೋದರಿಯರ ಹಿತದೃಷ್ಟಿಯನ್ನು ಕಾಪಾಡಲು ತಮ್ಮ ಸರಕಶರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮಹಿಳಾ ಮೀಸಲಾತಿ ಹೆಸರಲ್ಲಿ ಚುನಾವಣಾ ಗಿಮಿಕ್ : ಶಾಸಕ ಎಸ್.ಆರ್.ಶ್ರೀನಿವಾಸ್

ಮಹಿಳಾ ಮೀಸಲಾತಿ ವಿಧೇಯಕವನ್ನು 1996ರಲ್ಲಿ ಮೊದಲ ಬಾರಿಗೆ ಮಂಡಿಸಲಾಯಿತು. ಆಗ ಪ್ರಧಾನಿ ಎಚ್‌ಡಿ ದೇವೇಗೌಡರ ನೇತೃತ್ವದ ಸರಕಾರವಿತ್ತು. ವಿಧೇಯಕವನ್ನು ಸಂಸದೀಯ ಸಮಿತಿಗೆ ವಹಿಸಲಾಯಿತು. ವರದಿ ಬಂದ ಬಳಿಕ ಸರಕಾರ ಪತನವಾಗಿತ್ತು, ವಿಧೇಯಕವೂ ವಿಫಲವಾಗಿತ್ತು. 1998 ಮತ್ತು 2003ರ ನಡುವೆ ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ ಡಿಎ ಸರಕಾರವು ವಿಧೇಯಕವನ್ನು ಅಂಗೀಕರಿಸಲು ನಾಲ್ಕು ಪ್ರಯತ್ನಗಳನ್ನು ನಡೆಸಿತ್ತು. ಆದರೆ ಪ್ರತಿಪಕ್ಷಗಳ ಅಸಹಕಾರದಿಂದ ವಿಫಲವಾಗಿತ್ತು. 2004-2014ರ ನಡುವೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರವಿತ್ತು. 2010ರಲ್ಲಿ ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕಾರವಾದರೂ, ಲೋಕಸಭೆಯಲ್ಲಿ ಮಂಡಿಸಲೇ ಇಲ್ಲ. 2011, 2011, 2013, 2014ರಲ್ಲೂ ಯುಪಿಎ ಸರಕಾರ ಇದನ್ನು ಲೋಕಸಭೆಯಲ್ಲಿ ಮಂಡಿಸಿರಲಿಲ್ಲ

Vishakha Bhat Heggar

View all posts by this author