ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರೇಮಿಗಾಗಿ ತಂದೆ ಸ್ಕೂಟರ್‌ ಕದ್ದು, ಮಕ್ಕಳನ್ನು ಬಸ್‌ನಲ್ಲೇ ಬಿಟ್ಟು ಓಡಿ ಹೋದ ಪಾಪಿ ತಾಯಿ

Viral News: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆ ತನ್ನ ಮಕ್ಕಳನ್ನು ಚಲಿಸುವ ಬಸ್‌ನಲ್ಲಿಯೇ ಬಿಟ್ಟುಈ ಕೃತ್ಯ ಎಸಗಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ಎಐ ರಚಿತ ಚಿತ್ರ

ಮುಂಬೈ, ಮೇ 20: ಮಾನವೀಯತೆಯೇ ಮರೆಯಾದ ಘಟನೆಯೊಂದು ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಮಹಿಳೆ ತನ್ನ ಮಕ್ಕಳನ್ನು ಚಲಿಸುವ ಬಸ್‌ನಲ್ಲಿಯೇ ಬಿಟ್ಟು ಈ ಕೃತ್ಯ ಎಸಗಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪಂಢರಪುರದಿಂದ ಸಂಭಾಜಿನಗರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಇಬ್ಬರು ಮಕ್ಕಳು ಜೋರಾಗಿ ಅಳುತ್ತಿರುವುದನ್ನು ನಿರ್ವಾಹಕರು ಗಮನಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳನ್ನು ವಿಚಾರಿಸಿದಾಗ ಅವರ ಜೇಬಿನಲ್ಲಿ ಚೀಟಿಯೊಂದು ಕಂಡು ಬಂದಿದೆ. ಇದರಲ್ಲಿ "ಈ ಮಕ್ಕಳಿಗೆ ಪೋಷಕರು ಯಾರು ಇಲ್ಲ. ದಯವಿಟ್ಟು ಅವರನ್ನು ಯಾವತ್ಮಾಲ್‌ಗೆ ಹೋಗುವ ಬಸ್‌ಗೆ ಹತ್ತಿಸಿ" ಎಂದು ಬರೆದಿತ್ತು.

ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ

ಅದರ ಜತೆ ಮೊಬೈಲ್ ಸಂಖ್ಯೆಯನ್ನು ಕೂಡ ನಮೂದಿಸಲಾಗಿತ್ತು. ನೀಡಿರುವ ಸಂಖ್ಯೆಗೆ ಕರೆ ಮಾಡಿ ಪ್ರಕರಣದ ತನಿಖೆ ನಡೆಸಿದಾಗ ಮಕ್ಕಳನ್ನು ಅವರ ತಾಯಿ ಕೈಬಿಟ್ಟು, ತನ್ನ ಪ್ರೇಮಿಯೊಂದಿಗೆ ಇರಲು ಹೊರಟು ಹೋಗಿದ್ದಾಳೆ ಎಂದು ತಿಳಿದು ಬಂದಿದೆ.‌ ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸಲು ಮಕ್ಕಳನ್ನು ಅನಾಥ ಮಾಡಿ ಓಡಿ ಹೋಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಘಟನೆ ವಿವರ

ಏಪ್ರಿಲ್ 30ರಂದು ಮಹಾರಾಷ್ಟ್ರದ ಯಾವತ್ಮಾಲ್‌ನ ವೃದ್ಧರೊಬ್ಬರು ಪೊಲೀಸ್ ದೂರು ದಾಖಲಿಸಿದ್ದು, ತಮ್ಮ ಮಗಳು ನಗದು ಮತ್ತು ಸ್ಕೂಟರ್‌ನೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಿದ್ದರು‌. ಬೀಡ್ ಪೊಲೀಸರು ಈ ವೃದ್ಧನನ್ನು ಸಂಪರ್ಕಿಸಿ ಪೊಲೀಸ್ ಠಾಣೆಗೆ ಕರೆಸಿಕೊಂಡಾಗ, ಅವರು ಈ ಮಕ್ಕಳ ತಾಯಿಯ ತಂದೆ (ತಾತ) ಎಂಬುದು ಗೊತ್ತಾಗಿದೆ.

ತನಿಖೆಯಲ್ಲಿ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಪಂಢರಪುರ-ಸಂಭಾಜಿ ನಗರ ಬಸ್ಸಿನಲ್ಲಿ ಕೂರಿಸಿ ತಂದೆಯ ಸ್ಕೂಟರ್‌ನಲ್ಲಿ ಪ್ರಿಯಕರನೊಂದಿಗೆ ಪರಾರಿಯಾಗಿರುವುದು ಗೊತ್ತಾಗಿದೆ. ಠಾಣೆಗೆ ಬಂದ ತಾತನಿಗೆ ಮೊಮ್ಮಕ್ಕಳನ್ನು ಆರೈಕೆ ಮಾಡುವ ಬದಲು ಕಳೆದುಹೋದ ಸ್ಕೂಟರ್ ಬಗ್ಗೆಯೇ ಹೆಚ್ಚಿನ ಚಿಂತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆ ವ್ಯಕ್ತಿ ಮಕ್ಕಳನ್ನು ವಶಕ್ಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಪೊಲೀಸರೇ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಬೀಡ್ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾಡಳಿತದ ನೆರವಿನೊಂದಿಗೆ ಇಬ್ಬರು ಮಕ್ಕಳನ್ನು 'ಶಿಶುಗೃಹ' (ಶಿಶು ಆರೈಕೆ ಗೃಹ)ಕ್ಕೆ ದಾಖಲಿಸಲಾಗಿದೆ. ಸದ್ಯ ಮಹಿಳೆಯನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮಾಡುತ್ತಿದ್ದಾರೆ.