ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನ ಪ್ರಜೆ ಹಸ್ತಾಂತರ ವೇಳೆ ಪಾಕ್‌- ಭಾರತ ಸೇನಾಧಿಕಾರಿಗಳು ಹಸ್ತಲಾಘವ; ಪೋಸ್ಟ್‌ ಹಂಚಿಕೊಂಡ ಇಂಡಿಯನ್‌ ಆರ್ಮಿ

ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಸೆರೆಹಿಡಿಯಲಾದ ಪಾಕಿಸ್ತಾನಿ ಪ್ರಜೆಯನ್ನು (Pakistani Citizen) ಸೇನೆಯು ಶುಕ್ರವಾರ ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿತು. ಕಳೆದ ವಾರ ಕುಪ್ವಾರಾ ಜಿಲ್ಲೆಯ ಟೀಟ್ವಾಲ್ ಸೆಕ್ಟರ್‌ನ ಸಿಮಾರಿಯಲ್ಲಿ ಎಲ್‌ಒಸಿ ದಾಟಲು ಪ್ರಯತ್ನಿಸಿದಾಗ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಸಾದ್ ಖಾನ್ ಎಂಬಾತನನ್ನು ಭಾರತೀಯ ಸೇನೆ ಬಂಧಿಸಿತ್ತು.

ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (LOC) ಸೆರೆಹಿಡಿಯಲಾದ ಪಾಕಿಸ್ತಾನಿ ಪ್ರಜೆಯನ್ನು (Pakistani Citizen) ಸೇನೆಯು ಶುಕ್ರವಾರ ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿತು. ಕಳೆದ ವಾರ ಕುಪ್ವಾರಾ ಜಿಲ್ಲೆಯ ಟೀಟ್ವಾಲ್ ಸೆಕ್ಟರ್‌ನ ಸಿಮಾರಿಯಲ್ಲಿ ಎಲ್‌ಒಸಿ ದಾಟಲು ಪ್ರಯತ್ನಿಸಿದಾಗ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಸಾದ್ ಖಾನ್ ಎಂಬಾತನನ್ನು ಭಾರತೀಯ ಸೇನೆ (Indian Army) ಬಂಧಿಸಿತ್ತು. ಅಸಾದ್ ಖಾನ್ ಬಂಧನದ ಸಮಯದಲ್ಲಿ "ಘನತೆ ಮತ್ತು ಸಹಾನುಭೂತಿಯಿಂದ" ನಡೆಸಿಕೊಳ್ಳಲಾಯಿತು ಮತ್ತು ಗಡಿ ದಾಟುವ ಸ್ಥಳದಲ್ಲಿ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಯಿತು ಎಂದು ಸೇನೆ ತಿಳಿಸಿದೆ.

ಪಾಕಿಸ್ತಾನಿ ಪ್ರಜೆಯನ್ನು ಹಸ್ತಾಂತರಿಸುತ್ತಿರುವ ಫೋಟೋವನ್ನು ಸೇನೆ ಹಂಚಿಕೊಂಡಿದೆ. ಇದರ ನಡುವೆ ಗಮನ ಸೆಳೆದಿದ್ದು ಅಧಿಕಾರಿಗಳು. ಎರಡೂ ದೇಶಗಳ ನಡುವೆ ನಡೆಯುತ್ತಿರುವ ಹಗೆತನದ ನಡುವೆಯೇ, ಭಾರತೀಯ ಸೇನೆಯ ಪ್ರಮುಖ ಶ್ರೇಣಿಯ ಅಧಿಕಾರಿಯೊಬ್ಬರು ಪಾಕಿಸ್ತಾನದ ಸೇನಾ ಅಧಿಕಾರಿಯೊಂದಿಗೆ ಕೈಕುಲುಕುತ್ತಿರುವುದು ಕಂಡು ಬಂದಿದೆ. "ಜೂನ್ 12, 2026 ರಂದು ಕುಪ್ವಾರಾದ ಸಿಮರಿ ಗ್ರಾಮದಲ್ಲಿ ನಿಯಂತ್ರಣ ರೇಖೆಯನ್ನು ದಾಟಿದ ನಂತರ ಬಂಧಿಸಲ್ಪಟ್ಟ ಖೈಬರ್ ಪಖ್ತುನ್ಖ್ವಾ (ಕೆಪಿಕೆ) ನಿವಾಸಿ ಪಾಕಿಸ್ತಾನಿ ಪ್ರಜೆ ಅಸದ್ ಖಾನ್ ಅವರನ್ನು ಜೂನ್ 18, 2026 ರಂದು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು" ಎಂದು ಸೇನೆಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.



"ಭಾರತದಲ್ಲಿದ್ದಾಗ, ಅಸದ್ ಖಾನ್ ಅವರನ್ನು ಘನತೆ ಮತ್ತು ಸಹಾನುಭೂತಿಯಿಂದ ನಡೆಸಿಕೊಳ್ಳಲಾಯಿತು, ಇದು ಭಾರತೀಯ ಸೇನೆಯ ಮಾನವೀಯ ಮೌಲ್ಯಗಳು ಮತ್ತು ನಡವಳಿಕೆಯ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅವರ ಸುರಕ್ಷಿತ ವಾಪಸಾತಿ ಭಾರತೀಯ ಸೇನೆಯ ನೀತಿ, ಜವಾಬ್ದಾರಿ ಮತ್ತು ಮಿಲಿಟರಿ ವೃತ್ತಿಪರತೆಯ ಅತ್ಯುನ್ನತ ಮಾನದಂಡಗಳಿಗೆ ಬದ್ಧತೆಯನ್ನು ಒತ್ತಿಹೇಳುತ್ತದೆ" ಎಂದು ಸೇನೆ ತಿಳಿಸಿದೆ.

ವಸಾಹತುಶಾಹಿ ಯುಗದ ಸಂಪ್ರದಾಯಕ್ಕೆ ಗುಡ್ ಬೈ: ಹೊಸ ವಸ್ತ್ರ ಸಂಹಿತೆಯನ್ನು ಅನಾವರಣಗೊಳಿಸಿದ ಭಾರತೀಯ ಸೇನೆ

ಈ ವರ್ಷದ ಅಮರನಾಥ ಯಾತ್ರೆಗೆ ಮುನ್ನ ಈ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಯಾತ್ರೆಗೆ ಭದ್ರತಾ ವ್ಯವಸ್ಥೆಗಳು ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ನಿರ್ಣಯಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ (ಜೂ. 12) ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರವಾಸಿ ತಾಣಗಳ ಭದ್ರತಾ ಜಾಲದ ಪರಿಶೀಲನೆಯೂ ನಡೆಯಿತು.

Vishakha Bhat Heggar

View all posts by this author