ಪಟನಾ, ಏ.12: ಬಸ್, ಟ್ರಕ್ ಮತ್ತು ಪಿಕಪ್ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 13 ಜನರು ಮೃತಪಟ್ಟು, 30 ಜನರು ಗಾಯಗೊಂಡಿರುವ ಘಟನೆ ಬಿಹಾರದ (Bihar) ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಕತಿಹಾರ್‌ನ ಕೋಧಾ ಬ್ಲಾಕ್‌ನಲ್ಲಿರುವ ರಾಷ್ಟ್ರೀಯ ಹೆದ್ದಾರಿ -31 ರಲ್ಲಿ ಶನಿವಾರ (ಏ.11) ಸಂಜೆ 6:30ಕ್ಕೆ ಅಪಘಾತ (Road accident) ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿಖರ್ ಚೌಧರಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಆರಂಭಿಕ ವರದಿಗಳು ಹೇಳಿದ್ದರೆ, ಗಾಯಗೊಂಡವರಲ್ಲಿ ಆರು ಮಂದಿ ಚಿಕಿತ್ಸೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪಿಕಪ್ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದವರು ನೆರೆಯ ಪೂರ್ಣಿಯಾ ಜಿಲ್ಲೆಯಿಂದ ಬರುತ್ತಿದ್ದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಗಾಯಗೊಂಡವರಲ್ಲಿ ಬಸ್ ಚಾಲಕನೂ ಸೇರಿದ್ದಾನೆ. ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಕಿಡ್ನ್ಯಾಪ್ ಪ್ರಕರಣ ಬಯಲಿಗೆಳೆದ ರಸ್ತೆ ಅಪಘಾತ; ಮೂವರು ಅಪಹರಣಕಾರರು ಸಾವು: ಮಕ್ಕಳು ಸೇರಿ ಮೂವರ ರಕ್ಷಣೆ
ಎಲ್ಲಾ ಗಾಯಾಳುಗಳನ್ನು ಪೂರ್ಣಿಯಾದ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಗುರುತನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ CM, ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಥುರಾ ದೋಣಿ ದುರಂತ
ಯಮುನಾ ನದಿಯಲ್ಲಿ ದೋಣಿ ಅಪಘಾತ ಉಂಟಾದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದುರಂತದ ಮೊದಲು ಏನಾಯಿತು ಎಂಬುದನ್ನು ತೋರಿಸುವ ಈ ದೃಶ್ಯಗಳು ನೋಡುಗರಿಗೆ ಆತಂಕ ಉಂಟು ಮಾಡಿದೆ. ಈ ಘಟನೆಯಲ್ಲಿ ಪಂಜಾಬ್ ಮೂಲದ 10 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.
ಏಪ್ರಿಲ್ 10 ರಂದು ಉತ್ತರ ಪ್ರದೇಶದ ಮಥುರಾ ನಗರದ ಯಮುನಾ ನದಿಯಲ್ಲಿ ಪ್ರವಾಸಿ ದೋಣಿ ಮಗುಚಿ ಕನಿಷ್ಠ ಹತ್ತು ಜನರು ಪ್ರಾಣ ಕಳೆದುಕೊಂಡರು. ಮಾಹಿತಿಯ ಪ್ರಕಾರ, ಮಥುರಾದ ಬಂಕೆ ಬಿಹಾರಿ ದೇವಸ್ಥಾನದಿಂದ ಸುಮಾರು 2.5 ಕಿಮೀ ದೂರದಲ್ಲಿರುವ ಕೇಸಿ ಘಾಟ್ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆ ಸಮಯದಲ್ಲಿ ದೋಣಿಯಲ್ಲಿ ಸುಮಾರು 30 ಜನರು ಇದ್ದರು, ಆದರೆ ಅದರ ಸಾಮರ್ಥ್ಯ ಕೇವಲ 15 ಜನರದ್ದು ಆಗಿತ್ತು.