ದುಬೈ, ಮಾ. 10: ಪ್ರಧಾನಿ ನರೇಂದ್ರ ಮೋದಿ (Narendra Modi) ಇಸ್ರೇಲ್ ಮತ್ತು ಇರಾನ್ ನಾಯಕರಿಗೆ ಒಂದೇ ಒಂದು ಫೋನ್ ಕರೆ ಮಾಡಿದರೂ ಮಧ್ಯಪ್ರಾಚ್ಯದಲ್ಲಿ (Middle east conflict) ನಡೆಯುತ್ತಿರುವ ಸಂಘರ್ಷವನ್ನು ತಡೆಯಲು ಸಾಧ್ಯವಾಗಬಹುದು ಎಂದು ಭಾರತದಲ್ಲಿನ ಯುಎಇಯ ಮೊದಲ ರಾಯಭಾರಿ ಹುಸೈನ್ ಹಸನ್ ಮಿರ್ಜಾ (Hussain Hassan Mirza) ಹೇಳಿದ್ದಾರೆ.
ಭಾರತದ ರಾಜತಾಂತ್ರಿಕ ನಿಲುವು ಮತ್ತು ಪ್ರಧಾನಿ ಮೋದಿ ಅವರ ಎರಡೂ ದೇಶಗಳೊಂದಿಗಿನ ಸಂಬಂಧಗಳನ್ನು ಮಿರ್ಜಾ ಎತ್ತಿ ಹಿಡಿದರು. ಈ ಎರಡೂ ಅಂಶಗಳ ಸಮನ್ವಯದಿಂದ ಪ್ರಸ್ತುತ ಉದ್ವಿಗ್ನತೆ ಕಡಿಮೆಯಾಗಲು ಸಹಾಯವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಭಾರತ ಒಂದು ಶ್ರೇಷ್ಠ ದೇಶ. ಭಾರತದ ಪ್ರಭಾವವೇ ಅಷ್ಟೊಂದು ದೊಡ್ಡದು ನರೇಂದ್ರ ಮೋದಿ ಇಸ್ರೇಲ್ ಮತ್ತು ಇರಾನ್ ನಾಯಕರಿಗೆ ಕೇವಲ ಒಂದು ಫೋನ್ ಕರೆ ಮಾಡಿ ಯುದ್ಧ ನಿಲ್ಲಿಸಲು ಹೇಳಿದರೆ ಅದು ನಿಲ್ಲಬಹುದು. ಒಂದೇ ಒಂದು ಫೋನ್ ಕಾಲ್ ಸಾಕು ಎಂದು ಮಾಜಿ ರಾಯಭಾರಿ ಹುಸೈನ್ ಹಸನ್ ಮಿರ್ಜಾ ತಿಳಿಸಿದ್ದಾರೆ.
ದುಬೈನಲ್ಲಿ ಸಿಲುಕಿರುವ ಭಾರತೀಯರಿಗಾಗಿ 64 ಫ್ಲಾಟ್‌ಗಳ ಅಪಾರ್ಟ್‌ಮೆಂಟ್ ಬಿಟ್ಟುಕೊಟ್ಟ ಉದ್ಯಮಿ!
ಪ್ರಧಾನಿ ಮೋದಿ ಇತ್ತೀಚೆಗೆ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಇರಾನ್‌ನೊಂದಿಗೂ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಮೋದಿ 10 ದಿನಗಳ ಹಿಂದೆ ಇಸ್ರೇಲ್‌ನಲ್ಲಿದ್ದರು. ಮೋದಿ ಇರಾನ್‌ನೊಂದಿಗೆ ಬಹಳ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಭಾರತವು ಇರಾನ್‌ನ ತೈಲದ ಅತಿದೊಡ್ಡ ಖರೀದಿದಾರ. ಹೀಗಾಗಿ ಮೋದಿ ಅವರ ಒಂದು ಫೋನ್ ಕರೆ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಅವರು ಹೇಳಿದರು.
ಯುಎಇಯಲ್ಲಿ ದಶಕಗಳಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ದೊಡ್ಡ ಭಾರತೀಯ ಸಮುದಾಯ ಇರುವುದರಿಂದ ಭಾರತವು ರಾಜತಾಂತ್ರಿಕವಾಗಿ ಮಧ್ಯಸ್ಥಿಕೆ ವಹಿಸುವ ಸಾಧ್ಯತೆಯನ್ನು ನಿರೀಕ್ಷಿಸುತ್ತಿರುವುದಾಗಿ ಮಿರ್ಜಾ ಹೇಳಿದರು.
ನಮ್ಮ ದೇಶದಲ್ಲಿರುವ ತಮ್ಮ ಸಮುದಾಯವನ್ನು ರಕ್ಷಿಸಲು ಹಾಗೂ ಉಳಿಸಲು ಭಾರತ ಸರ್ಕಾರ ಮತ್ತು ಭಾರತೀಯ ನಾಯಕತ್ವ ಮಧ್ಯಸ್ಥಿಕೆ ವಹಿಸುತ್ತದೆ ಎಂಬ ವಿಶ್ವಾಸ ನನಗೆ ಇದೆ. ನಮ್ಮ ದೇಶದ ಮೂಲಸೌಕರ್ಯ ನಿರ್ಮಾಣಕ್ಕೆ, ವ್ಯಾಪಾರಕ್ಕೆ ಮತ್ತು ವ್ಯವಹಾರಗಳಿಗೆ ಭಾರತೀಯ ಸಮುದಾಯ ದೊಡ್ಡ ಕೊಡುಗೆ ನೀಡಿದೆ. ಅದು ಈಗಷ್ಟೇ ಅಲ್ಲ, 70–80 ವರ್ಷಗಳಿಂದಲೇ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಲೆಬನಾನ್ ಮೇಲೆ ಇಸ್ರೇಲ್ ಭೀಕರ ರಾಸಾಯನಿಕ ಬೆಂಕಿಯ ಮಳೆ, 400 ಸಾವು
ಯುಎಇಯಲ್ಲಿ 3.5 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಯುಎಇ ತನ್ನ ಭೂಪ್ರದೇಶದಲ್ಲಿ ಇರಾನ್ ವಿರುದ್ಧ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ ಎಂದು ಅವರು ಹೇಳಿದರು. ಕುವೈತ್ ಮತ್ತು ಕತಾರ್‌ನಂತಹ ಇತರ ಗಲ್ಫ್ ರಾಷ್ಟ್ರಗಳು ಸಹ ತಮ್ಮ ನೆಲದಿಂದ ಇರಾನ್ ವಿರುದ್ಧ ದಾಳಿ ಮಾಡಲು ಅನುಮತಿ ನೀಡಿಲ್ಲ ಎಂದು ಅವರು ತಿಳಿಸಿದರು.
ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಮತ್ತು ಇರಾನ್ ಈ ಪ್ರದೇಶದಾದ್ಯಂತ ದಾಳಿಗಳನ್ನು ನಡೆಸುತ್ತಿರುವ ನಡುವೆಯೇ ಈ ಹೇಳಿಕೆ ಬಂದಿದೆ. ಅಮೆರಿಕ ಮತ್ತು ಇಸ್ರೇಲ್ ಸೇನೆ ಇರಾನ್ ರಾಜಧಾನಿ ಟೆಹರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಪ್ರತೀಕಾರವಾಗಿ ಇರಾನ್, ಗಲ್ಫ್‌ನ ಹಲವು ದೇಶಗಳನ್ನು ಗುರಿಯಾಗಿಸಿಕೊಂಡು ನೂರಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ಡ್ರೋನ್ ಮತ್ತು ಕ್ಷಿಪಣಿ ದಾಳಿ ಎದುರಿಸಿದೆ. ಆದರೂ ಅವುಗಳಲ್ಲಿ ಹೆಚ್ಚಿನವು ವಾಯು ರಕ್ಷಣಾ ವ್ಯವಸ್ಥೆಗಳಿಂದ ತಡೆಹಿಡಿಯಲ್ಪಟ್ಟಿವೆ. ಯುಎಇ ತನ್ನ ಭೂಪ್ರದೇಶವನ್ನು ರಕ್ಷಿಸಿಕೊಳ್ಳುವತ್ತ ಗಮನಹರಿಸುವುದರ ಜತೆಗೆ ಸಂಘರ್ಷವು ಪ್ರದೇಶದಾದ್ಯಂತ ಹರಡುವುದನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಪದೇ ಪದೆ ಒತ್ತಿ ಹೇಳಿದೆ.