ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೋದಿ ಹೇಳಿದ ಒಂದು ಮಾತಿನಿಂದ ತಪ್ಪಿತು ಕೋಟಿ ಕೋಟಿ ರೂ. ನಷ್ಟ! ಚಿನ್ನ ಖರೀದಿ ಬಗ್ಗೆ ಪ್ರಧಾನಿ ಹೇಳಿದ್ದೇನು?

ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಚಿನ್ನ ಖರೀಸದಂತೆ ಸಲಹೆ ನೀಡಿದ್ದರು. ಈ ಮೂಲಕ ಪ್ರಧಾನಿ ಅವರು ಜ್ಯುವೆಲ್ಲರ್ಸ್‌ಗಳು ಹಾಗೂ ಹೂಡಿಕೆದಾರರಿಗೆ ಉಂಟಾಗಬಹುದಾಗಿದ್ದ ಭಾರೀ ಪ್ರಮಾಣದ ನಷ್ಟ ತಪ್ಪಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಇದಕ್ಕೂ ಮುನ್ನ (PM Modi) ಪ್ರಧಾನಿ ನರೇಂದ್ರ ಮೋದಿ (Gold Price) ದೇಶವಾಸಿಗಳಿಗೆ ಚಿನ್ನ ಖರೀಸದಂತೆ ಸಲಹೆ ನೀಡಿದ್ದರು. ಈ ಮೂಲಕ ಪ್ರಧಾನಿ ಅವರು ಜ್ಯುವೆಲ್ಲರ್ಸ್‌ಗಳು ಹಾಗೂ ಹೂಡಿಕೆದಾರರಿಗೆ ಉಂಟಾಗಬಹುದಾಗಿದ್ದ ಭಾರೀ ಪ್ರಮಾಣದ ನಷ್ಟ ತಪ್ಪಿಸಿದ್ದಾರೆ. ಇದೀಗ ನರೇಂದ್ರ ಮೋದಿ ಹೇಳಿಕೆಗೆ ಇದೀಗ ವ್ಯಾಪಾರಿಗಳ ಒಕ್ಕೂಟದಿಂದ ಭಾರೀ ಬೆಂಬಲ ಸಿಕ್ಕಿದೆ.

ಚಿನ್ನದ ವಿಚಾರದಲ್ಲಿ ಪ್ರಧಾನಿ ಅವರ ಸಕಾಲಿಕ ಮಧ್ಯಪ್ರವೇಶದಿಂದ ಲಕ್ಷಾಂತರ ವ್ಯಾಪಾರಿಗಳು ಸಾಲಕ್ಕೆ ತುತ್ತಾಗುವುದು ತಪ್ಪಿದೆ ಎಂದು ಹೇಳಿ ಚೇಂಬರ್‌ ಆಫ್‌ ಟ್ರೇಡ್‌ ಆಯಂಡ್‌ ಇಂಡಸ್ಟ್ರೀ(ಸಿಟಿಐ) ಪರವಾಗಿ ಮುಖ್ಯಸ್ಥ ಬ್ರಿಜೇಶ್‌ ಗೋಯಲ್‌ ಅ‍ವರು ಮೋದಿಗೆ ಪತ್ರ ಬರೆದು ಧನ್ಯವಾದವನ್ನೂ ಅರ್ಪಿಸಿದ್ದಾರೆ. ಮೋದಿ ಅವರು ಚಿನ್ನ ಖರೀದಿ ಮುಂದೂಡಲು ಮನವಿ ಮಾಡಿದಾಗ ಚಿನ್ನದ ಬೆಲೆ 1 ಕೆ.ಜಿ.ಗೆ 1.90 ಕೋಟಿ ರು. ಇತ್ತು. ಅದಾದ ಬಳಿಕ ಇದೀಗ ಆ ದರ ಸರಾಸರಿ 1.25 ಕೋಟಿ ರು.ಗೆ ಇಳಿದಿದೆ. ಅಂದರೆ ಕೆ.ಜಿ. ಚಿನ್ನದ ದರ ಪ್ರತಿ ಕೆ.ಜಿ.ಗೆ 65 ಲಕ್ಷ ರು.ನಷ್ಟು ಇಳಿದಿದೆ ಎಂದು ಬ್ರಿಜೇಶ್‌ ಹೇಳಿಕೊಂಡಿದ್ದಾರೆ.

ಒಂದು ವೇಳೆ ವ್ಯಾಪಾರಿಗಳು ಮೋದಿ ಅವರ ಮನವಿ ತಿರಸ್ಕರಿಸಿ ಅಂದು ಚಿನ್ನ ಖರೀದಿಸಿಟ್ಟು ದಾಸ್ತಾನು ಮಾಡಿಕೊಂಡಿಟ್ಟುಕೊಂಡಿದ್ದರೆ ಪ್ರತಿ ಕೆ.ಜಿ.ಗೆ 65 ಲಕ್ಷ ರೂ. ನಷ್ಟ ಅನುಭವಿಸಬೇಕಾಗುತ್ತಿತ್ತು. ಲಕ್ಷಾಂತರ ವ್ಯಾಪಾರಿಗಳು ಸಾಲದ ಕೂಪದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗಿತ್ತು. ಆದರೆ, ಮೋದಿ ಅವರ ಒಂದು ಕರೆ ಜ್ಯುವೆಲ್ಲರ್‌ಗಳು, ಸಣ್ಣ ವ್ಯಾಪಾರಿಗಳನ್ನು ಭಾರೀ ಸಾಲದ ಕೂಪದಿಂದ ಪಾರು ಮಾಡಿದೆ ಎಂದಿದ್ದಾರೆ.

Akshaya Tritiya: ಇನ್‌ಸ್ಟಾಮಾರ್ಟ್‌ನಲ್ಲಿ 2 ಲಕ್ಷದ ಚಿನ್ನ-ಬೆಳ್ಳಿ ಆರ್ಡರ್‌ ಮಾಡಿದ ಬೆಂಗಳೂರಿಗ; ಬಂಗಾರದ ಖರೀದಿ 49 ಪಟ್ಟು ಹೆಚ್ಚಳ!

ಮೋದಿ ಹೇಳಿದ್ದೇನು?

ಕೆಲವು ತಿಂಗಳ ಹಿಂದೆ ಪ್ರಧಾನಿ ಮೋದಿ ಮಹತ್ವದ ಸಂದೇಶ ನೀಡಿ, ತೀರಾ ಅಗತ್ಯವಿಲ್ಲದಿದ್ದರೆ ಚಿನ್ನ ಖರೀದಿಸಬೇಡಿ ಎಂದು ಮನವಿ ಮಾಡಿದ್ದರು. ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಜಗತ್ತು ಜಾಗತಿಕ ಅನಿಶ್ಚಿತತೆಯನ್ನು ಎದುರಿಸುತ್ತಿರುವಾಗ ಅವರು ಈ ಕರೆ ನೀಡಿದ್ದರು. ಸಾರ್ವಜನಿಕ ಸಾರಿಗೆಯ ಬಳಕೆ ಮೂಲಕ ಇಂಧನವನ್ನು ಸಂರಕ್ಷಿಸಲು ಪ್ರಯತ್ನಿಸುವುದು, ಸಾಧ್ಯವಾದಲ್ಲೆಲ್ಲ ವರ್ಕ್‌ ಫ್ರಮ್‌ ಹೋಂ ಅಳವಡಿಸಿಕೊಳ್ಳುವುದು ಮತ್ತು ವಿದೇಶಿ ವಿನಿಮಯ ಹೊರಹರಿವುಗಳನ್ನು ಕಡಿಮೆ ಮಾಡುವುದು ಸೇರಿ ಹಲವು ಸಲಹೆ ನೀಡಿದ್ದರು. ಜತೆಗೆ ವಿದೇಶದಲ್ಲಿ ಮದುವೆಯಾಗುವುದನ್ನು ತಪ್ಪಿಸುವಂತೆ, ಅನಿವಾರ್ಯವಲ್ಲದ ಹೊರತು ವಿದೇಶಿ ಪ್ರವಾಸ ತ್ಯಜಿಸುವಂತೆ ಸೂಚಿಸಿದ್ದರು.

Vishakha Bhat Heggar

View all posts by this author