ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿಯಲ್ಲಿ ಮಹಾರಾಷ್ಟ್ರ ದುರಂತ ನೆನಪಿಸುವ ಘಟನೆ: ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ಯಮುನಾ ನದಿಗೆ ಹಾರಿದ ಶಿಕ್ಷಕ

iPhone EMI: ಡ್ಯಾನ್ಸ್‌ ಶಿಕ್ಷಕನೊಬ್ಬ ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ದೆಹಲಿಯಲ್ಲಿ ಯಮುನಾ ನದಿಗೆ ಹಾರಿ ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ದೆಹಲಿಯ ಡ್ಯಾನ್ಸ್‌ ಶಿಕ್ಷಕ ದೀಪಕ್‌ ಕುಮಾರ್‌ ಎಂದು ಗುರುತಿಸಲಾಗಿದೆ. ನೀರಿಗೆ ಬಿದ್ದು ಒದ್ದಾಡುತ್ತಿದ್ದ ದೀಪಕ್‌ ಕುಮಾರ್‌ನನ್ನು ಗಮನಿಸಿ ತಕ್ಷಣವೇ ದಡಕ್ಕೆ ಕರೆದುಕೊಂಡ ಬರಲಾಯಿತು.

ಚಾಟ್‌ಜಿಪಿಟಿ ರಚಿತ ಚಿತ್ರ

ದೆಹಲಿ, ಆ. 23: ಐಫೋನ್‌ನ ಇಎಂಐ (iPhone EMI) ಪಾವತಿಸುವ ವಿಚಾರವಾಗಿ ಮನೆಯಲ್ಲಿ ನಡೆದ ಜಗಳದಿಂದ ಮಹಾರಾಷ್ಟ್ರದ ತಿಸ್ಗಾಂವ್‌ನ ಖಾವ್ಲ್ಯಾ ಡೊಂಗರ್‌ ಬೆಟ್ಟದಿಂದ ಬಿದ್ದು ಯುವಕ ಮತ್ತು ಆತನ ಹೆತ್ತವರು ಸೇರಿ ಮೂವರು ಮೃತಪಟ್ಟ ಘಟನೆಯ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ದುರಂತ ದೆಹಲಿಯಲ್ಲಿ ನಡೆದಿದೆ. ಡ್ಯಾನ್ಸ್‌ ಶಿಕ್ಷಕನೊಬ್ಬ ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ದೆಹಲಿಯಲ್ಲಿ ಯಮುನಾ ನದಿಗೆ ಹಾರಿ ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್‌ ಸಕಾಲದಲ್ಲಿ ಗಮನಿಸಿದ ಹಿನ್ನೆಲೆಯಲ್ಲಿ ಆತನನ್ನು ರಕ್ಷಿಸಲಾಗಿದೆ.

30 ವರ್ಷದ ಡ್ಯಾನ್ಸ್‌ ಶಿಕ್ಷಕ ಐಫೋನ್‌ನ ಇಎಂಐ ಪಾವತಿಸಲು ಕಷ್ಟವಾಗಿದ್ದರಿಂದ ದೆಹಲಿಯಲ್ಲಿ ಯಮುನಾ ನದಿಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್‌ 21ರಂದು ಈ ಘಟನೆ ನಡೆದಿದೆ. ಮಹಾರಾಷ್ಟ್ರ ದುರಂತ ನಡೆದ ದಿನವೇ ಈ ಘಟನೆ ಸಂಭವಿಸಿದೆ.

ದೆಹಲಿಯಲ್ಲಿ ಆಗಿದ್ದೇನು?

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ದೆಹಲಿಯ ಡ್ಯಾನ್ಸ್‌ ಶಿಕ್ಷಕ ದೀಪಕ್‌ ಕುಮಾರ್‌ ಎಂದು ಗುರುತಿಸಲಾಗಿದೆ. ನೀರಿಗೆ ಬಿದ್ದು ಒದ್ದಾಡುತ್ತಿದ್ದ ದೀಪಕ್‌ ಕುಮಾರ್‌ನನ್ನು ಗಮನಿಸಿ ರಕ್ಷಣಾ ಸಿಬ್ಬಂದಿ ಕಾಪಾಡಿದ್ದಾರೆ. ದಕ್ಷಿಣ ದೆಹಲಿಯ ಕಾಳಿಂದಿ ಕುಂಜ್‌ಗೆ ರಾತ್ರಿ 8.30ರ ಸುಮಾರಿಗೆ ಆಗಮಿಸಿದ ದೀಪಕ್‌ನನ್ನು ಗಮನಿಸಿದ ಪೊಲೀಸರು ತಕ್ಷಣವೇ ಅಲರ್ಟ್‌ ಆಗಿ ಕಾರ್ಯ ಪ್ರವೃತ್ತರಾಗಿದ್ದರಿಂದ ಜೀವ ಉಳಿಸಲು ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.

ದೆಹಲಿಯ ಓಖ್ಲಾ ನಿವಾಸಿಯಾಗಿರುವ ದೀಪಕ್‌ ಕುಮಾರ್‌ ಅಲ್ಲಿ ಡ್ಯಾನ್ಸ್‌ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾನೆ. ಕೆಲವು ದಿನಗಳಿಂದ ನಿಯಮಿತ ಆದಾಯವಿಲ್ಲದೆ, ಐಫೋನ್‌ನ ಇಎಂಐ ಪಾವತಿಸಲು ಸಾಧ್ಯವಾಗದೆ ಈ ಕೃತ್ಯ ಎಸಗಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗನನ್ನು ಕಾಪಾಡಲು ಹೋಗಿ ಬೆಟ್ಟದಿಂದ ಕೆಳಗೆ ಬಿದ್ದ ತಂದೆ; ಘಟನೆ ನೋಡಿ ತಾಯಿಯೂ ಆತ್ಮಹತ್ಯೆ!

ಕೆಲವು ತಿಂಗಳಿನಿಂದ ಆದಾಯವಿಲ್ಲದೆ ಸೊರಗಿದ್ದೆ. ಐಫೋನ್‌ನ ಇಎಂಐ ಪಾವತಿಗೂ ಕಷ್ಟವಾಗುತ್ತಿತ್ತು. ಹೀಗಾಗಿ ಯಮುನಾ ನದಿಗೆ ಧುಮುಕಿದ್ದೆ ಎಂದು ದೀಪಕ್‌ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ದೀಪಕ್‌ ಕುಮಾರ್‌ನಲ್ಲಿ ರಕ್ಷಿಸಿದ ಬಳಿಕ ಠಾಣೆಗೆ ಕರೆದೊಯ್ದ ಪೊಲೀಸರು ಆತನ ಪತ್ನಿ ಮತ್ತು ಸಹೋದರನ್ನು ಬರ ಹೇಳಿದರು. ಇನ್ಮುಂದೆ ಇಂತಹ ಕೃತ್ಯ ಎಸಗದಂತೆ ಸೂಚಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಈ ಘಟನೆ ಸುಖಾಂತ್ಯಗೊಂಡಿದೆ.

ಮಹಾರಾಷ್ಟ್ರದಲ್ಲಿ ಮೂವರನ್ನು ಬಲಿ ತೆಗೆದುಕೊಂಡ ಯುವಕ ಹುಚ್ಚಾಟ

ಮಹಾರಾಷ್ಟ್ರದ ತಿಸ್ಗಾಂವ್‌ನ ಖಾವ್ಲ್ಯಾ ಡೊಂಗರ್‌ನಲ್ಲಿ ಆಗಸ್ಟ್‌ 21ರ ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸರು ಮತ್ತು ಅಗ್ನಿಶಾಮಕ ರಕ್ಷಿಸಲು ಪ್ರಯತ್ನಿಸುತ್ತಿರುವಾಗಲೇ ಬೆಟ್ಟದಿಂದ ಜಿಗಿದ ಯುವಕ ಮತ್ತು ಅವನ ಹೆತ್ತವರು ಮೃತಪಟ್ಟ ಘಟನೆ ನಡೆದಿತ್ತು. ಕುನಾಲ್ ಚಾಂಗುಡೆ (19) ತಿಸ್ಗಾಂವ್‌ನ ಖಾವ್ಲ್ಯಾ ಏರಿ ಜಿಗಿಯುವುದಾಗಿ ಬೆದರಿಕೆ ಹಾಕಿದ್ದ. ಆತನನ್ನು ರಕ್ಷಿಸಲು ತಂದೆ ಮುಂದಾಗಿದ್ದರು. ಆದರೆ ಇಬ್ಬರೂ ಪ್ರತಾಪಕ್ಕೆ ಜಾರಿದ್ದರು. ಇದನ್ನು ಕಂಡು ತಾಯಿಯೂ ಜಿಗಿದಿದ್ದರು. ಮನೆಯವರ ವಿರೋಧದ ನಡೆಯೂ ಕುನಾಲ್ ಚಾಂಗುಡೆ ಐಫೋನ್‌ ಖರೋದಿಸಿದ್ದ. ಅದರ ಇಎಂಐ ಪಾವತಿ ಬಗ್ಗೆ ಮನೆಯಲ್ಲಿ ಗಲಾಟೆ ನಡೆದ ಗಲಾಟೆ ಆತನನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು ಎಂದು ಮೂಲಗಳು ತಿಳಿಸಿವೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author