ಬೆಟ್ಟದ ಅಂಚಿನಲ್ಲಿ ನಿಂತ ಮಗ ಈಚೆ ಬರುವಂತೆ ಕೈ ಮುಗಿದು ಬೇಡಿದ ತಾಯಿ; ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದ ಮೂವರು ಪ್ರತಾಪಕ್ಕೆ ಬಿದ್ದು ಬಲಿಯಾಗುವ ಮುನ್ನ ಆಗಿದ್ದೇನು? ಇಲ್ಲಿದೆ ಇಂಚಿಂಚು ಮಾಹಿತಿ
Maharashtra Tragedy: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ EMI ಪಾವತಿ ವಿಚಾರವಾಗಿ ತಂದೆ-ಮಗನ ನಡುವೆ ಜಗಳ ನಡೆದ ಬಳಿಕ 19 ವರ್ಷದ ಮಗ ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ತಂದೆ-ಮಗ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದು, ಕೆಲವೇ ಕ್ಷಣಗಳ ಬಳಿಕ ತಾಯಿಯೂ ಸಾವನ್ನಪ್ಪಿದ್ದಾರೆ.
ಮೃತ ಯುವಕ ಕುನಾಲ್ ಚಾಂದ್ಗುಡೆ ಮತ್ತು ಕೊಹ್ಡ್ಯಾ ಡೊಂಗರ್ ಬೆಟ್ಟ -
ಮುಂಬೈ, ಆ. 22: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಐಫೋನ್‌ನ ಇಎಂಐ ಪಾವತಿ ವಿಚಾರವಾಗಿ ತಂದೆ-ಮಗನ ನಡುವೆ ಜಗಳ ನಡೆದ ಬಳಿಕ, 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಬೆಟ್ಟದ ಅಂಚಿನಲ್ಲಿ ನಿಂತಿದ್ದ. ಆತನನ್ನು ಮನವೊಲಿಸಲು ತಾಯಿ ಹಲವು ಗಂಟೆಗಳ ಕಾಲ ಕಣ್ಣೀರಿಡುತ್ತಾ ಬೇಡಿಕೊಂಡರೂ ಆತ ಕೆಳಗಿಳಿಯಲಿಲ್ಲ. ಕೊನೆಗೆ ತಂದೆ-ತಾಯಿ-ಮಗ ಮೂವರೂ ಮೃತಪಟ್ಟಿದ್ದಾರೆ (Maharashtra Tragedy). ಇದೀಗ ಈ ದುರಂತ ನಡೆಯುವ ಮುನ್ನ ಏನೇನಾಯ್ತು ಎನ್ನುವ ವಿವರ ಹೊರ ಬಿದ್ದಿದೆ.
ಕೊಹ್ಡ್ಯಾ ಡೊಂಗರ್ ಬೆಟ್ಟದ ಸುಮಾರು 250 ಅಡಿ ಎತ್ತರದ ಅಂಚಿನಲ್ಲಿ ನಿಂತಿದ್ದ ಕುನಾಲ್ ಚಾಂದ್ಗುಡೆ ಎಂಬ ಯುವಕನನ್ನು ರಕ್ಷಿಸಲು ತಾಯಿ ಸಂಗೀತಾ ಹಲವು ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಮಗನ ಬಳಿ ತೆರಳಿ ಕೈ ಚಾಚಿದ ಅವರು, ಆತ ಹೆದರಿ ಸಮತೋಲನ ಕಳೆದುಕೊಳ್ಳಬಹುದೆಂಬ ಆತಂಕದಿಂದ ಮತ್ತೆ ಹಿಂದೆ ಸರಿದಿದ್ದಾರೆ. ಮಗನ ಮುಂದೆ ಕೈಮುಗಿದು, ಕಣ್ಣೀರಿಟ್ಟು ಮನೆಗೆ ಬರುವಂತೆ ಮನವಿ ಮಾಡಿದ್ದಾರೆ.
ಬೆಟ್ಟದಿಂದ ಬಿದ್ದ ಮೂವರು ದುರ್ಮರಣ ಹೊಂದಿದ ದೃಶ್ಯ:
Kunal, 18, bought an iPhone on EMI, struggled to pay them, told his parents to pay the EMI, and they said they couldn't afford it. An argument followed.
— THE SKIN DOCTOR (@theskindoctor13) August 22, 2026
Raja beta got angry and went to a steep cliff edge on Khavdya Hill, threatening to end his life. Police, parents, and locals… pic.twitter.com/si7GQhEYb8
“ಅಮ್ಮ, ಯಾರೂ ನನ್ನ ಮಾತು ಕೇಳುವುದಿಲ್ಲ. ನನಗೆ ಬದುಕಲು ಆಸಕ್ತಿಯೇ ಇಲ್ಲ. ನನ್ನ ಜೀವನಕ್ಕೆ ಯಾವುದೇ ಪರಿಹಾರವಿಲ್ಲ, ಯಾವುದೂ ಸುಧಾರಿಸುವುದಿಲ್ಲ” ಎಂದು ಕುನಾಲ್ ಹೇಳಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮದ ಸರಪಂಚ್ ಕೂಡ ಆಗಮಿಸಿ ಯುವಕನನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾರ ಮಾತಿಗೂ ಆತ ಸ್ಪಂದಿಸಿಲ್ಲ.
ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!
ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಮಗನನ್ನು ಅಪಾಯದಿಂದ ದೂರಕ್ಕೆ ಎಳೆಯಲು ತಂದೆ ಮುರಳೀಧರ್ ಮುಂದೆ ಬಂದಿದ್ದಾರೆ. ಈ ವೇಳೆ ಇಬ್ಬರೂ ಕಾಲು ಜಾರಿ ಸುಮಾರು 250 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇದಾದ ಕೇವಲ ನಾಲ್ಕು ಸೆಕೆಂಡ್‌ಗಳ ಬಳಿಕ ತಾಯಿ ಸಂಗೀತಾ ಕೂಡ ಬೆಟ್ಟದಿಂದ ಜಿಗಿದಿದ್ದು, ಅವರೂ ಸಾವನ್ನಪ್ಪಿದ್ದಾರೆ.
ಸ್ಥಳೀಯರ ಪ್ರಕಾರ, ಕುಟುಂಬವು ಸುಮಾರು ನಾಲ್ಕು ತಿಂಗಳ ಹಿಂದೆ ಝಲ್ತಾ ಗ್ರಾಮದ ಏಕದಂತ್ ನಗರಕ್ಕೆ ಬಂದು ನೆಲೆಸಿತ್ತು. ಕುಟುಂಬದ ಸದಸ್ಯರು ಹೆಚ್ಚಾಗಿ ನೆರೆಹೊರೆಯವರೊಂದಿಗೆ ಬೆರೆಯುತ್ತಿರಲಿಲ್ಲ. ಆದರೆ ತಮ್ಮ ಸಾಕು ನಾಯಿಯೊಂದಿಗೆ ತುಂಬಾ ಆತ್ಮೀಯವಾಗಿದ್ದರು.
ಕುಟುಂಬದ ಮೂವರ ಸಾವಿನ ಬಳಿಕವೂ ಆ ಸಾಕು ನಾಯಿ ಮನೆಯ ಕಿಟಕಿಯ ಬಳಿ ಕುಳಿತು ತನ್ನ ಕುಟುಂಬ ಮರಳಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವ ದೃಶ್ಯ ಸ್ಥಳೀಯರ ಮನಕಲಕುವಂತಾಗಿದೆ.