ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

British Navy's F-35: ಕೊನೆಗೂ ದುರಸ್ತಿಯಾಯಿತು ಬ್ರಿಟಿಷ್​​ ಎಫ್-35 ಫೈಟರ್ ಜೆಟ್; ಇಂಗ್ಲೆಂಡ್‌ನತ್ತ ಪ್ರಯಾಣ

ಕಳೆದ ಒಂದು ತಿಂಗಳಿನಿಂದ ಕೇರಳದ (Kerala) ತಿರುವನಂತಪುರಂನಲ್ಲಿ ತಾಂತ್ರಿಕ ದೋಷಗಳಿಂದ ಕೆಟ್ಟು ನಿಂತಿದ್ದ ಬ್ರಿಟನ್ ರಾಯಲ್ ನೇವಿಯ F-35B Fighter Jet ವಿಮಾನ ಕೊನೆಗೂ ದುರಸ್ತಿಯಾಗಿ ಇಂದು ಮರಳಿ ತನ್ನ ದೇಶದತ್ತ ಪ್ರಯಾಣ ಬೆಳೆಸಿದೆ.

ಕೊನೆಗೂ ದುರಸ್ತಿಯಾಯಿತು ಬ್ರಿಟಿಷ್​​ ಎಫ್-35 ಫೈಟರ್ ಜೆಟ್!

Profile Vishakha Bhat Jul 22, 2025 12:16 PM

ತಿರುವನಂತಪುರಂ: ಕಳೆದ ಒಂದು ತಿಂಗಳಿನಿಂದ ಕೇರಳದ ತಿರುವನಂತಪುರಂನಲ್ಲಿ ತಾಂತ್ರಿಕ ದೋಷಗಳಿಂದ ಕೆಟ್ಟು ನಿಂತಿದ್ದ ಬ್ರಿಟನ್ ರಾಯಲ್ ನೇವಿಯ F-35B Fighter Jet ವಿಮಾನ ಕೊನೆಗೂ ದುರಸ್ತಿಯಾಗಿ (British Navy's F-35) ಇಂದು ಮರಳಿ ತನ್ನ ದೇಶದತ್ತ ಪ್ರಯಾಣ ಬೆಳೆಸಿದೆ. ಕಳೆದ ಜೂನ್ 14 ರಂದು ಬ್ರಿಟನ್ ನಿಂದ ಆಸ್ಟ್ರೇಲಿಯಾಕ್ಕೆ ಹಾರುತ್ತಿದ್ದಾಗ ಹೈಡ್ರಾಲಿಕ್ ವೈಫಲ್ಯದಿಂದಾಗಿ ಬ್ರಿಟನ್ ರಾಯಲ್ ನೇವಿಯ F-35B Fighter Jet ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಬಳಿಕ ಶತ ಪ್ರಯತ್ನಗಳ ನಂತರವೂ ವಿಮಾನ ದುರಸ್ತಿಯಾಗಿರಲಿಲ್ಲ. ಇದೀಗ ಕೊನೆಗೂ ದುರಸ್ತಿಗೊಂಡು ತನ್ನ ದೇಶಕ್ಕೆ ಮರಳಿದೆ.

ಜಗತ್ತಿನ ಸುಧಾರಿತ​ ಯುದ್ಧ ವಿಮಾನಗಳಲ್ಲಿ ಒಂದಾಗಿರುವ ಈ ಯುದ್ಧ ವಿಮಾನ 110 ಮಿಲಿಯನ್​ ಡಾಲರ್​ ಮೌಲ್ಯವನ್ನು ಹೊಂದಿದೆ. ಜೂನ್​ 14ರಂದು ಜೆಟ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆ ಇದು ಕೇರಳದ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿ, ಮತ್ತೆ ಹಾರಾಟ ನಡೆಸಲು ವಿಫಲವಾಗಿತ್ತು. ವಿಮಾನ ಭೂಸ್ಪರ್ಶ ಮಾಡಿದ ಬಳಿಕ ಇಲ್ಲಿ ವಿಮಾನದ ಆರಂಭಿಕ ಮೌಲ್ಯಮಾಪನಗಳನ್ನು ನಡೆಸಲಾಯಿತು. ಆದರೆ ನಂತರದ ಸಮಸ್ಯೆಯನ್ನು ಪರಿಹರಿಸುವ ಆರಂಭಿಕ ಪ್ರಯತ್ನಗಳು ವಿಫಲವಾದವು. ಹೀಗಾಗಿ ಜುಲೈ 2ರಂದು ರಾಯಲ್ ನೇವಿ ಯುನೈಟೆಡ್ ಕಿಂಗ್‌ಡಮ್‌ನ ವಿಶೇಷ ಎಂಜಿನಿಯರ್‌ಗಳ ತಂಡ ಆಗಮಿಸಿತ್ತು. ಅವರು ಸುಧಾರಿತ ಸಮಸ್ಯೆ ನಿರ್ಣಯ ಮತ್ತು ದುರಸ್ತಿ ಉಪಕರಣಗಳೊಂದಿಗೆ ಆಗಮಿಸಿ ವಿಮಾನದ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.



ಈ ಸುದ್ದಿಯನ್ನೂ ಓದಿ: Flight delayed: ಏರ್‌ ಇಂಡಿಯಾದ ವಿಮಾನದ ರೆಕ್ಕೆಯಲ್ಲಿ ಸಿಲುಕಿದ ಹುಲ್ಲು; ಬ್ಯಾಂಕಾಕ್‌ಗೆ ತೆರಳಬೇಕಿದ್ದ ವಿಮಾನ 5 ಗಂಟೆ ವಿಳಂಬ

ಈ ವಿಮಾನದ ರಿಪೇರಿ ಕೆಲಸಕ್ಕೆ ಯುಕೆಯಿಂದ ವೈಮಾನಿಕ ಇಂಜಿನಿಯರ್​ಗಳು ಬಂದಿದ್ದು, ಅವರು ಅಗತ್ಯ ದುರಸ್ತಿ ನಡೆಸಿದ್ದಾರೆ. ಸರಿ ಸುಮಾರು ಒಂದು ತಿಂಗಳ ಕಾಲ ತಿರುವನಂತರಪುರಂ ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ಹ್ಯಾಂಗರ್​ನಲ್ಲಿ ಇರಿಸಲಾಗಿತ್ತು. ಲ್ಯಾಂಡಿಂಗ್​ ಚಾರ್ಜ್​​ ಹೊರತಾಗಿ ದೈನಂದಿನ ಬಾಡಿಕೆ ಮತ್ತು ಪಾರ್ಕಿಂಗ್​ ಶುಲ್ಕವನ್ನು ಕೂಡ ವಿಧಿಸಲಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಎಫ್​-35 ಐದನೇ ತಲೆಮಾರಿನ ಫೈಟರ್​ ಜೆಟ್​ ಇದಾಗಿದೆ. ಬ್ರಿಟನ್​​ನ ಹೆಚ್​ಎಂಎಸ್​ ಪ್ರಿನ್ಸ್​ ಆಫ್​​ ವೇಲ್ಸ್​ ಕ್ಯಾರಿಯರ್​ ಸ್ಟ್ರೈಕ್​ ಗ್ರೂಪ್​​ಗೆ ಸೇರಿದೆ. ಯುದ್ಧ ವಿಮಾನವು ಪ್ರಸ್ತುತ ಇಂಡೋ- ಪೆಸಿಫಿಕ್​ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಸಮಾರಾಭ್ಯಾಸ ನಡೆಸಿತ್ತು ಎಂದು ವರದಿಯಾಗಿದೆ.