ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ (tamilunadu CM) ಜೋಸೆಫ್ ವಿಜಯ್ (Joseph Vijay) ನೇತೃತ್ವದ ಸರ್ಕಾರವು ಮೇಕೆದಾಟು ಯೋಜನೆ ( Mekedatu issue) ವಿಚಾರದಲ್ಲಿ ಹೊಸ ನಡೆ ಇಡಲು ಮುಂದಾಗಿದ್ದು, ಇದು ಅಪಾಯಕಾರಿ ಎಂದು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (All India Anna Dravida Munnetra Kazhagam) ಪಕ್ಷ ಹೇಳಿದೆ. ಈ ಕಾರ್ಯವಿಧಾನದಲ್ಲಿ ಲೋಪವಿದೆ. ಈ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಹೊಸ ನಡೆಯು ಕಾವೇರಿ ವಿವಾದದಲ್ಲಿ ಹಿಂದೆ ಕಾನೂನು ಹೋರಾಟದ ಮೂಲಕ ಪಡೆದಿರುವ ವಿಜಯದ ತೀರ್ಪುಗಳನ್ನು ದುರ್ಬಲಗೊಳಿಸುವ ಅಪಾಯವಿದೆ ಎಂಬುದಾಗಿ ತಿಳಿಸಿದೆ.
ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡಿನ ಹೊಸ ಸರ್ಕಾರವು ಮೇಕೆದಾಟು ಯೋಜನೆಗೆ ಸಂಬಂಧಿಸಿ ಕೈಗೊಂಡ ನಿರ್ಣಯಕ್ಕೆ ತೀವ್ರ ವಾಗ್ದಾಳಿ ನಡೆಸಿದ ಎಐಎಡಿಎಂಕೆ, ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆಯ ಕುರಿತು ಸರಿಯಾದ ಚರ್ಚೆ ನಡೆಸದೆ ನಿರ್ಣಯ ಅಂಗೀಕರಿಸಲಾಗಿದೆ. ಈ ಮೂಲಕ ಸ್ಥಾಪಿತ ಕಾರ್ಯವಿಧಾನಗಳನ್ನು ಉಲ್ಲಂಘಿಸಿರುವ ಸರ್ಕಾರ, ಶಾಸಕಾಂಗ ಮಾನದಂಡಗಳನ್ನು ದುರ್ಬಲಗೊಳಿಸುತ್ತಿದೆ. ಆತುರ ಮತ್ತು ನಿರ್ಲಕ್ಷ್ಯ ರೀತಿಯಲ್ಲಿ ಇದನ್ನು ನಿರ್ವಹಿಸಲಾಗಿದೆ ಎಂದು ಹೇಳಿದೆ.
ಎಥನಾಲ್ ಮಿಶ್ರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿಕೆ; ಕೇಂದ್ರ ಸರ್ಕಾರ ಹೇಳಿದ್ದೇನು?
ವಿಧಾನ ಸಭೆಯು ತನ್ನದೇ ಆದ ವಿಶಿಷ್ಟ ಘನತೆಯನ್ನು ಹೊಂದಿದೆ. ಆದರೆ ಇತ್ತೀಚಿನ ಕಲಾಪಗಳು ಅದರ ಸಂಪ್ರದಾಯಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿವೆ ಎಂದು ಅದು ಆರೋಪಿಸಿದೆ.
ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕದ ಪ್ರಸ್ತಾವಿತ ಅಣೆಕಟ್ಟು ಮತ್ತು ಜಲಾಶಯ ಯೋಜನೆಯಾದ ಮೇಕೆದಾಟು ಯೋಜನೆಯು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ದೀರ್ಘಕಾಲದ ವಿವಾದವಾಗಿದೆ. ತಮಿಳುನಾಡು ಈ ಯೋಜನೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದು, ಇದರಿಂದ ತಮಿಳುನಾಡು ರೈತರಿಗೆ ನೀರಿನ ಕೊರತೆಯಾಗುತ್ತದೆ ಎಂದು ವಾದಿಸುತ್ತಾ ಬಂದಿದೆ.
ಕಾವೇರಿ ವಿವಾದದಲ್ಲಿ ಅಂತಿಮ ನ್ಯಾಯಮಂಡಳಿ ತೀರ್ಪು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅವಧಿಯ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಬಳಿಕ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸಲಾಯಿತು ಎಂದು ಎಐಎಡಿಎಂಕೆ ತಿಳಿಸಿದೆ.
ಮೇಕೆದಾಟು ನಿರ್ಣಯದ ಹೊರತಾಗಿ ವಿರೋಧ ಪಕ್ಷ ಮತ್ತು ಮುಖ್ಯಮಂತ್ರಿ ಇಬ್ಬರು ಕೂಡ ಸದನದಲ್ಲಿ ಮಾಡಿದ ಇತ್ತೀಚಿನ ಭಾಷಣಗಳು ಸಭ್ಯತೆ ಮತ್ತು ಹೊಣೆಗಾರಿಕೆಯಲ್ಲಿನ ಲೋಪವನ್ನು ಎತ್ತಿ ತೋರಿಸಿದೆ. ಕಾನೂನು ಮತ್ತು ಸುವ್ಯವಸ್ಥೆ, ವಿದ್ಯುತ್ ಕಡಿತ, ಕೈಗಾರಿಕಾ ವಿಚಾರಗಳಲ್ಲಿ ಕೇಳಲಾದ ಸಾಕಷ್ಟು ಪ್ರಶ್ನೆಗಳಿಗೆ ಚರ್ಚೆಗಳ ಸಮಯದಲ್ಲಿ ಸಮರ್ಪಕ ಉತ್ತರ ನೀಡಲಾಗಿಲ್ಲ ಎಂದು ಆರೋಪಿಸಿದೆ.
ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ವಿರುದ್ಧ ಉದಯನಿಧಿ ಸ್ಟಾಲಿನ್ ವೈಯಕ್ತಿಕ ಟೀಕೆ – ರಾಜಕೀಯ ವಾಗ್ವಾದ ತಾರಕಕ್ಕೆ
ಸಾರ್ವಜನಿಕ ಸಮಸ್ಯೆಗಳ ಮೇಲೆ ಗಮನಹರಿಸಲು ತಮಿಳುನಾಡು ವಿಧಾನಸಭೆಯ ಘನತೆ ಮತ್ತು ಶಿಸ್ತು ಬದ್ದವಾಗಿ ಕಾರ್ಯನಿರ್ವಹಿಸಬೇಕು ಎಂದು ಎಐಎಡಿಎಂಕೆ ಸರ್ಕಾರವನ್ನು ಒತ್ತಾಯಿಸಿದೆ.