ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air India Flight Crash: ಏರ್‌ ಇಂಡಿಯಾ ವಿಮಾನ ದುರಂತ- ವರದಿಯಲ್ಲಿರುವ ಟಾಪ್‌ 10 ಅಂಶಗಳು ಇಲ್ಲಿವೆ

Air Crash: ಏರ್ ಇಂಡಿಯಾದ (Air India) ವಿಮಾನ ದುರಂತಕ್ಕೆ ಸಂಬಂಧಿಸಿ ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (Aircraft Accident Investigation Bureau) ಶನಿವಾರ ತಾತ್ಕಾಲಿಕ ವರದಿಯನ್ನು ಬಿಡುಗಡೆ ಮಾಡಿದೆ. ಪೈಲಟ್‌, ಸಿಬ್ಬಂದಿ ಸೇರಿ ನೂರಾರು ಪ್ರಯಾಣಿಕರು ಈ ಅವಘಡದಲ್ಲಿ ಮೃತಪಟ್ಟಿದ್ದು, ಸದ್ಯ ಈ ಘಟನೆಗೆ ಕಾರಣವೇನು ಎಂಬ ಅಂಶ ಬೆಳಕಿಗೆ ಬಂದಿದೆ.

ವಿಮಾನ ಪತನಕ್ಕೆ ಕಾರಣವಾದ 10 ಅಂಶಗಳು ಬೆಳಕಿಗೆ..!

Profile Sushmitha Jain Jul 12, 2025 12:58 PM

ಅಹಮದಾಬಾದ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ (Air India Crash) ವಿಮಾನ ಪತನ ದುರ್ಘಟನೆಯ ನೆನಪು ಇನ್ನೂ ಅಚ್ಚಳಿಯದಂತೆ ಉಳಿದಿದೆ. ಪೈಲಟ್‌, ಸಿಬ್ಬಂದಿ ಸೇರಿ ನೂರಾರು ಪ್ರಯಾಣಿಕರು ಈ ಅವಘಡದಲ್ಲಿ ಮೃತಪಟ್ಟಿದ್ದು, ಸದ್ಯ ಈ ಘಟನೆಗೆ ಕಾರಣವೇನು ಎಂಬ ಅಂಶ ಬೆಳಕಿಗೆ ಬಂದಿದೆ.

ಏರ್ ಇಂಡಿಯಾದ (Air India) ವಿಮಾನ ದುರಂತಕ್ಕೆ ಸಂಬಂಧಿಸಿ ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (Aircraft Accident Investigation Bureau) ಶನಿವಾರ ತಾತ್ಕಾಲಿಕ ವರದಿಯನ್ನು ಬಿಡುಗಡೆ ಮಾಡಿದೆ. ಜೂನ್ 12ರಂದು ಅಹಮದಾಬಾದ್‌ನಿಂದ (Ahmedabad) ಲಂಡನ್‌ನ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ಫ್ಲೈಟ್ AI171, ಟೇಕ್‌ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಅಪಘಾತಕ್ಕೀಡಾಯಿತು. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಹತ್ತಿರದ ವೈದ್ಯಕೀಯ ವಸತಿಗೃಹ ಕಟ್ಟಡಕ್ಕೆ ಡಿಕ್ಕಿ ಹೊಡೆದು, 241 ಜನರ ಸಾವಿಗೆ ಕಾರಣವಾಯಿತು. ವರದಿಯಲ್ಲಿ ಕಂಡು ಬಂದ ಪ್ರಮುಖ 10ಅಂಶಗಳು ಇಲ್ಲಿವೆ.

ಈ ಸುದ್ದಿಯನ್ನು ಓದಿ: Viral Video: ಕಂತೆ ಕಂತೆ ನೋಟುಗಳು ತುಂಬಿರೋ ದೊಡ್ಡ ಬ್ಯಾಗ್‌...ಪಕ್ಕದಲ್ಲೇ ಕುಳಿತು ಸಿಗರೇಟ್‌ ಸೇದುತ್ತಿರುವ ಶಿವಸೇನೆ ನಾಯಕ- ವಿಡಿಯೊ ಫುಲ್‌ ವೈರಲ್‌

AAIB ವರದಿಯ ಮುಖ್ಯಾಂಶಗಳು:

  1. ಎಂಜಿನ್ ಸ್ಥಗಿತ: ಟೇಕ್‌ಆಫ್ ಬಳಿಕ ಕೆಲವೇ ಸೆಕೆಂಡ್‌ಗಳಲ್ಲಿ ಎರಡೂ ಎಂಜಿನ್‌ಗಳು ಸ್ಥಗಿತಗೊಂಡವು. ಇಂಧನ ಕಟ್‌ಆಫ್ ಸ್ವಿಚ್‌ಗಳು ಒಂದು ಸೆಕೆಂಡ್‌ನಲ್ಲಿ RUNನಿಂದ CUTOFFಗೆ ಬದಲಾಗಿದೆ.
  2. ಇಂಧನ ಕಡಿತ: ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಕಡಿತಗೊಂಡು, ಥ್ರಸ್ಟ್ ಕಳೆದುಕೊಂಡಿತು.
  3. ಕಾಕ್‌ಪಿಟ್ ಆಡಿಯೋ: ಒಬ್ಬ ಪೈಲಟ್, “ನೀನು ಯಾಕೆ ಕಟ್‌ ಮಾಡಿದೆ?” ಎಂದು ಕೇಳಿದ್ದಾರೆ. ಇನ್ನೊಬ್ಬರು, “ನಾನು ಮಾಡಲಿಲ್ಲ,” ಎಂದು ಉತ್ತರಿಸಿದ್ದು, ಕಾಕ್‌ಪಿಟ್‌ನಲ್ಲಿ ಗೊಂದಲವನ್ನು ಸೃಷ್ಟಿಸಿದೆ.
  4. ತುರ್ತು ಶಕ್ತಿ: ರಾಮ್ ಏರ್ ಟರ್ಬೈನ್ (RAT) ಸ್ವಯಂಚಾಲಿತವಾಗಿ ತುರ್ತು ಹೈಡ್ರಾಲಿಕ್ ಶಕ್ತಿಯನ್ನು ಒದಗಿಸಿರುವ ದೃಶ್ಯ CCTVಯಲ್ಲಿ ದಾಖಲಾಗಿದೆ.
  5. ಎಂಜಿನ್ ಅನ್ನು ರೀಸ್ಟಾರ್ಟ್ ಮಾಡಲು ಪ್ರಯತ್ನ: ಪೈಲಟ್‌ಗಳು ಎಂಜಿನ್‌ಗಳನ್ನು ಪುನ: ಚಾಲನೆ ಮಾಡಲು ಯತ್ನಿಸಿದ್ದು, ಎಂಜಿನ್ 1 ಭಾಗಶಃ ಸರಿಗೊಂಡರೂ, ಎಂಜಿನ್ 2 ಅನ್ನು ರೀಸ್ಟಾರ್ಟ್ ಮಾಡಲು ವಿಫಲವಾಗಿದ್ದಾರೆ.
  6. ವಿಮಾನದ ಅವಧಿ: ವಿಮಾನವು 32 ಸೆಕೆಂಡ್‌ಗಳ ಕಾಲ ಮಾತ್ರ ಹಾರಾಡಿದ್ದು, ರನ್‌ವೇಯಿಂದ 0.9 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ವಸತಿಗೃಹಕ್ಕೆ ಡಿಕ್ಕಿಯಾಗಿದೆ.
  7. ಥ್ರಾಟಲ್ ವ್ಯತ್ಯಾಸ: ಥ್ರಸ್ಟ್ ಲಿವರ್‌ಗಳು ಐಡಲ್‌ನಲ್ಲಿದ್ದವು. ಆದರೆ ಬ್ಲಾಕ್ ಬಾಕ್ಸ್ ಡೇಟಾ ಟೇಕ್‌ಆಫ್ ಥ್ರಸ್ಟ್ ಇದ್ದಿದ್ದನ್ನು ತೋರಿಸಿದ್ದು, ತಾಂತ್ರಿಕ ದೋಷವನ್ನು ಸೂಚಿಸುತ್ತದೆ.
  8. ಇಂಧನ ಗುಣಮಟ್ಟ: ಇಂಧನದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಹಾಗೇ ಇಂಧನ ನಿಯಂತ್ರಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿಲ್ಲ, ರಿಫ್ಯೂಯಲಿಂಗ್ ಕಾರಣವಲ್ಲ ಎಂದು ದೃಢೀಕರಣವಾಗಿದೆ.
  9. ಟೇಕ್‌ಆಫ್ ಸಿದ್ಧತೆ: ಫ್ಲಾಪ್ ಸೆಟ್ಟಿಂಗ್ (5 ಡಿಗ್ರಿ), ಲ್ಯಾಂಡಿಂಗ್ ಗೇರ್ (ಡೌನ್), ಮತ್ತು ಸ್ಪಷ್ಟ ಹವಾಮಾನವು ಕ್ಲಿಯರ್ ಇದ್ದು. ಯಾವುದೇ ಪಕ್ಷಿಗಳ ಹಾರಾಟ ಇರಲಿಲ್ಲ.
  10. ಪೈಲಟ್‌ಗಳ ಅರ್ಹತೆ: ಇಬ್ಬರೂ ಪೈಲಟ್‌ಗಳು ಆರೋಗ್ಯವಂತರಾಗಿದ್ದು, ವಿಶ್ರಾಂತಿ ಪಡೆದಿದ್ದು, ಮಾನ್ಯತೆ ಹೊಂದಿದ್ದರು. ವಿಮಾನದಲ್ಲಿ 54,200 ಕೆ.ಜಿ. ಇಂಧನವಿತ್ತು, ಒಟ್ಟು ತೂಕ 213,401 ಕೆ.ಜಿ. ಆಗಿದ್ದು, 218,183 ಕೆ.ಜಿ. ಮಿತಿಯೊಳಗಿತ್ತು. ಅಪಾಯಕಾರಿ ವಸ್ತುಗಳಿಲ್ಲ ಎಂದು ವರದಿ ತಿಳಿಸಿದೆ.